ಗಾಯಕಿ, ಸಂಗೀತ ನಿರ್ದೇಶಕಿ ಹಾಗೂ ನಟಿ ಶ್ರುತಿ ಹಾಸನ್​ ತಮ್ಮ ಮೂವತ್ತೈದನೆ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 35ನೇ ವಸಂತಕ್ಕೆ ಕಾಲಿಟ್ಟಿರುವ ಈ ಬಹುಮುಖ ಪ್ರತಿಭೆಯ ಶೃತಿ ಹಾಸನ್ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಶೃತಿ ತಮ್ಮ ಆತ್ಮೀಯಯರು , ಸ್ನೇಹಿತರು ನೀಡಿದ ಸುಮಾರು ಮೂರು ಕೋಟಿಗೂ ಅಧಿಕ ಬೆಲೆ ಬಾಳುವ ಉಡುಗೊರೆಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಈ ನಟಿಯ ಹುಟ್ಟುಹಬ್ಬದ ಚಿತ್ರಗಳು ಹಾಗೂ ಅವರ ಲೆಟೆಸ್ಟ್​ ಫೋಟೋಶೂಟ್​ ಗಳನ್ನು ಇಲ್ಲಿ ನೋಡಬಹುದು. ಹಾಗೂರು ಕೋಟಿಗೂ ಅಧಿಕ ಬೆಲೆ ಬಾಳುವ ಉಡುಗೊರೆಗಳನ್ನು ಏನೆಲ್ಲಾ ನೀಡಿರಬಹುದು ಎನ್ನುವುದನ್ನು ನಾವಿಲ್ಲಿ ನೋಡೋಣ.

ಶೃತಿ ಹಾಸನ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ ಮತ್ತು ಹಿನ್ನಲೆ ಗಾಯಕಿ. ಇವರು ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರ ಪುತ್ರಿ. ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಹಾಗೂ ಪಾರ್ವತಿ ಮೆನನ್ ಅಭಿನಯದ ಪೃಥ್ವಿ ಚಿತ್ರದಲ್ಲಿ ಒಂದು ಹಾಡನ್ನು ಕೂಡಾ ಹಾಡಿದ್ದಾರೆ. ಇನ್ನೂ ಮತ್ತೆ ಪ್ರೀತಿಯಲ್ಲಿ ಬಿದ್ದಿರುವ ನಟಿ ಶ್ರುತಿ ಹಾಸನ್ ದೆಹಲಿ ಮೂಲದ ಡೂಡಲ್ ಆರ್ಟಿಸ್ಟ್, ಇಲ್ಯುಸ್ಟ್ರೇಟರ್ ಸಂತನು ಹಸಾರಿಕಾ ಜೊತೆ ಶ್ರುತಿ ಡೇಟ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಅವರ ಬರ್ತಡೇ ಸಮಯದಲ್ಲಿ ಈ ವಿಚಾರ ಬಹಿರಂಗವಾಗಿದೆ.

ಸಾರ್ವಜನಿಕವಾಗಿ ತಿರುಗಾಡುತ್ತಿರುವ ಈ ಜೋಡಿ ಶ್ರುತಿ ಹಾಸನ್ ಅವರು 35ನೇ ವರ್ಷದ ಹುಟ್ಟುಹಬ್ಬದಲ್ಲಿ ಡೂಡಲ್ ಆರ್ಟಿಸ್ಟ್ ವಿಶೇ‍ಷವಾದ ಫೋಟೋ ಹಂಚಿಕೊಂಡು ಹ್ಯಾಪಿ ಬರ್ತಡೇ ಪ್ರಿನ್ಸ್‌ಸ್ ಎಂದು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇತ್ತೀಚೆಗೆ ಶ್ರುತಿ ಹಾಗೂ ಸಂತನು ಒಟ್ಟಾಗಿ ತಿರುಗಾಡುತ್ತಿದ್ದಾರೆ. ಸಂತನು ಜೊತೆಗೆ ಶ್ರುತಿ ಹಾಸನ್ ಕೈ ಕೈ ಹಿಡಿದುಕೊಂಡು ಒಟ್ಟಿಗೆ ತಿರುಗಾಡಿರೋದು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಆಮೇಲೆ ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಇನ್ನು ಶ್ರುತಿ ಬರ್ತಡೇ ಪಾರ್ಟಿಯಲ್ಲಿ ಸಂತನು ಭಾಗಿಯಾಗಿದ್ದರು. ಶ್ರುತಿ ಅವರು ಗಾಯಕಿ. ಹಾಗೆಯೇ ಸಂತನು ಕೂಡ ಸಂಗೀತವನ್ನು ಇಷ್ಟಪಡುತ್ತಾರೆ. ಆದರೆ ರಿಲೇಶನ್‌ಶಿಪ್‌ನ್ನು ಇನ್ನೂ ಶ್ರುತಿ ಅಧಿಕೃತಪಡಿಸಿಲ್ಲ

ಇನ್ನೂ ಕೇಕ್​ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಶೃತಿ ತಮ್ಮ ಹುಟ್ಟುಹಬ್ಬದಂದು ಈ ಕೆಲವು ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಇನ್ನು ತಮ್ಮ ಮಗಳ ಹುಟ್ಟು ಹಬ್ಬದ ಪ್ರಯುಕ್ತ ನಟ ಕಮಲ್ ಹಾಸನ್ ಅವರು ಮುಂಬೈನಲ್ಲಿ ಮೂರು ಕೋಟಿ ವೆಚ್ಚದ ದುಬಾರಿ ಫ್ಲಾಟ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದರು. ನಟಿ ಶ್ರುತಿ ಹಾಸನ್​ ಅಭಿನಯದ ಜೊತೆಗೆ ಸಂಗೀತ ನಿರ್ದೇಶನ ಮಾಡುತ್ತಾ ಹಾಡುಗಳನ್ನೂ ಹಾಡುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ತವೇ ರಚಿಸಿದ ಇಂಗ್ಲಿಷ್​ ಹಾಡಿನ ವಿಡಿಯೋವನ್ನು ಶೂಟ್​ ಮಾಡಿ ರಿಲೀಸ್​ ಮಾಡಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!