ಶ್ರಾವಣ ಮಾಸವನ್ನು ಶಿವನ ಮಾಸ ಎಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ವಿಶೇಷ ಪುಣ್ಯಫಲ ದೊರೆಯುತ್ತದೆ. ಹಾಗಾದರೆ ಶ್ರಾವಣ ಮಾಸದ ಸೋಮವಾರದಂದು ಯಾವ ರೀತಿಯಲ್ಲಿ ಶಿವನನ್ನು ಆರಾಧಿಸಬೇಕು ಹಾಗೂ ಶಿವ ಆರಾಧನೆಯಿಂದ ಲಭಿಸುವ ಪುಣ್ಯ ಫಲದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಭಗವಾನ್ ಶಿವನನ್ನು ಪೂಜಿಸಲು ಯಾವುದೆ ವಿಶೇಷ ದಿನದ ಅವಶ್ಯಕತೆ ಇರುವುದಿಲ್ಲ ಆದರೆ ಶ್ರಾವಣ ಮಾಸದಲ್ಲಿ ಶಿವನನ್ನು ವಿಶೇಷವಾಗಿ, ವಿಭಿನ್ನವಾಗಿ ಆರಾಧಿಸಲಾಗುತ್ತದೆ. ಶ್ರಾವಣ ಮಾಸದ ಸೋಮವಾರದಂದು ಶಿವನ ಆರಾಧನೆಯನ್ನು ಮಾಡುವುದರಿಂದ ಶಿವನ ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದ್ದು ಈ ಮಾಸದಲ್ಲಿ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ. ಶ್ರಾವಣ ಮಾಸದ ಪ್ರತಿ ಸೋಮವಾರದಂದು ಶಿವನನ್ನು ಭಕ್ತಿಯಿಂದ ಪೂಜಿಸಬೇಕು.
ಸೋಮವಾರದ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶಿವ ದೇವಾಲಯಕ್ಕೆ ಹೋಗಿ ಶಿವ, ಮಾತಾ ಪಾರ್ವತಿ, ನಂದಿಗೆ ಗಂಗಾಜಲವನ್ನು ಅರ್ಪಿಸಿ ನಂತರ ಶಿವಲಿಂಗಕ್ಕೆ ಶ್ರೀಗಂಧ, ಬಿಲ್ವಪತ್ರೆ ಅರ್ಪಿಸಿ ಬಿಳಿಬಣ್ಣದ ಸಿಹಿ ವಸ್ತುಗಳಾದ ಸಕ್ಕರೆ ಮಿಠಾಯಿ, ಬರ್ಫಿಯನ್ನು ಶಿವನಿಗೆ ಅರ್ಪಿಸಬೇಕು. ಶ್ರಾವಣ ಮಾಸದ ಮೊದಲ ಸೋಮವಾರದ ದಿನದಂದು ತಪ್ಪದೆ ಶಿವ ದೇವಾಲಯಕ್ಕೆ ಹೋಗಬೇಕು.
ಒಂದುವೇಳೆ ಹೋಗಲು ಸಾಧ್ಯವಾಗದೆ ಇದ್ದರೆ ಮನೆಯಲ್ಲಿ ಪೂಜಾಸ್ಥಳದಲ್ಲಿ ಭಗವಾನ್ ಶಿವನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸಬೇಕು ಇದರಿಂದ ಶಿವನು ಪಾಪ ಪರಿಹಾರವನ್ನು ಮಾಡುತ್ತಾನೆ ಎಂಬ ನಂಬಿಕೆ ಇದೆ. ತುಪ್ಪ, ಸಕ್ಕರೆ ಹಾಗೂ ಗೋಧಿ ಹಿಟ್ಟಿನಿಂದ ತಯಾರಿಸಿದ ಪ್ರಸಾದವನ್ನು ಅರ್ಪಿಸಿ ನಂತರ ಈ ಪ್ರಸಾದವನ್ನು ಸಾಧ್ಯವಾದಷ್ಟು ಜನರಿಗೆ ಹಂಚಬೇಕು ಜೊತೆಗೆ ಮಹಾಮೃತ್ಯುಂಜಯ ಜಪವನ್ನು 108 ಬಾರಿ ಪಠಿಸಿ, ಹಸುವಿನ ಹಸಿ ಹಾಲನ್ನು ಶಿವನಿಗೆ ಅರ್ಪಿಸಬೇಕು ಇದರಿಂದ ಶಿವನ ಆಶೀರ್ವಾದವನ್ನು ಪಡೆಯಬಹುದು.
ಶ್ರಾವಣ ಮಾಸದ ಮೊದಲ ಸೋಮವಾರ ಉತ್ತರ ದಿಕ್ಕಿಗೆ ಮುಖ ಮಾಡಿ ಶಿವನನ್ನು ಆರಾಧಿಸಿದಾಗ ಶಿವನು ಸಂತುಷ್ಟನಾಗುತ್ತಾನೆ. ಸೋಮವಾರದಂದು ಓಂ ನಮಃ ಶಿವಾಯ ಮಂತ್ರವನ್ನು 11,21,51,108 ಬಾರಿ ಪಠಿಸುವುದರಿಂದ ಒಳ್ಳೆಯದಾಗುತ್ತದೆ. ಶ್ರಾವಣ ಮಾಸದ ಸೋಮವಾರದ ದಿನದಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶಿವನನ್ನು ಧ್ಯಾನಿಸಿ ಶಿವ ದೇವಾಲಯದಲ್ಲಿ ಅಥವಾ ಮನೆಯಲ್ಲಿ ಶಿವನ ವಿಗ್ರಹವನ್ನು ಸ್ಥಾಪಿಸಿ ಶಿವಲಿಂಗಕ್ಕೆ ನೀರು, ಹಾಲು, ಮೊಸರು, ಪಂಚಾಮೃತದ ರುದ್ರಾಭಿಷೇಕ ಮಾಡಿ
ಪಾರ್ವತಿದೇವಿ ಹಾಗೂ ನಂದಿಗೆ ಗಂಗಾಜಲ, ಹಾಲನ್ನು ಅರ್ಪಿಸಿ ಶಿವ ಮಂತ್ರವನ್ನು ಪಠಿಸುತ್ತಾ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಬೆಲ್ಲದಿಂದ ತಯಾರಿಸಿದ ತಿಂಡಿಗಳನ್ನು ನೈವೇದ್ಯಕ್ಕೆ ಇಡಬೇಕು, ತುಪ್ಪ ಮತ್ತು ಸಕ್ಕರೆಯನ್ನು ಪ್ರಸಾದವಾಗಿ ಅರ್ಪಿಸಿ ಗಣೇಶನಿಗೆ ಆರತಿಯನ್ನು ಮಾಡಿ ನಂತರ ಶಿವನಿಗೆ ದೀಪ ದೂಪ ಮತ್ತು ಆರತಿಯನ್ನು ಮಾಡಬೇಕು. ನಂತರ ಶ್ರಾವಣ ಸೋಮವಾರದ ವೃತ ಕಥೆಯನ್ನು ಓದಿದಾಗ ಅಥವಾ ಕೇಳಿದಾಗ ಶ್ರಾವಣ ಮಾಸದ ಸೋಮವಾರದ ಪೂಜಾ ಮುಗಿಯುತ್ತದೆ. ಶ್ರಾವಣ ಮಾಸದ ಪ್ರತಿಯೊಂದು ದಿನವೂ ಶಿವನನ್ನು ಆರಾಧಿಸಿ ಪುಣ್ಯ ಫಲವನ್ನು ಪಡೆಯಿರಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430