ಭಾರತೀಯ ಪ್ರಾಚೀನ ಋುಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು. ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ಆಚರಣೆ ನಡೆದು ಬಂದಿದೆ. ಅದರಂತೆ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ, ರಕ್ಷಾಬಂಧನ, ಉಪಾಕರ್ಮ ಮುಂತಾದ ಹೆಸರಿನಿಂದ ಆಚರಿಸುತ್ತೇವೆ.

ಆದಿಮಾನವ ಆಧುನಿಕ ಮಾನವನಾಗುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದು ನೂಲು. ನೂಲನ್ನು ತೊಟ್ಟುಕೊಳ್ಳುವುದು, ನಮ್ಮ ಸಂಸ್ಕೃತಿಯ ಸಂಸ್ಕಾರದ ಒಂದು ಅಂಗವಾಗಿದೆ. ವಸ್ತ್ರಸಂಸ್ಕೃತಿಯ ಮೂಲವಾದ ನೂಲಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿ ‘ನೂಲುಹುಣ್ಣಿಮೆ’ ಬಂದಿದೆ. ನನ್ನ ಸಹೋದರನಿಗೆ ಕಷ್ಟ-ನಷ್ಟಗಳಿಂದ, ಕೆಟ್ಟಜನರಿಂದ, ರೋಗಗಳಿಂದ, ರಕ್ಷಣೆ ಉಂಟಾಗಲಿ ಹಾಗೂ ನನ್ನ ರಕ್ಷಣೆಯ ಭಾರ ನಿನ್ನದು ಎಂದು ಸಹೋದರಿಯು ಸಹೋದರನಿಗೆ ರಕ್ಷಾಸೂತ್ರ ಅಥವಾ ರಾಖಿಯನ್ನು ಕಟ್ಟುತ್ತಾಳೆ.

ಸೂತ್ರಬಂಧನದ ಹಿಂದೆ, ರಕ್ಷಣೆಯ ಭಾರವಿರುವುದರಿಂದ ರಕ್ಷಾಬಂಧನ ಅಥವಾ ರಕ್ಷಾಪೂರ್ಣಿಮೆ ಎಂಬ ಹೆಸರು ಬಂದಿದೆ. ಇದು ಸಹೋದರ-ಸಹೋದರಿಯರ ನಿರ್ಮಲ ಪ್ರೀತಿಯ ಪ್ರತೀಕದ ಹಬ್ಬ. ತಾಯಿ-ಮಗ, ಪತಿ-ಪತ್ನಿ, ಗುರು-ಶಿಷ್ಯ ಇವೇ ಮುಂತಾದ ಪ್ರೀತಿಯ ಸಂಬಂಧಗಳು ಬಹುತೇಕ ಸ್ವಾರ್ಥದಿಂದ ಕೂಡಿರುತ್ತವೆ. ಆದರೆ ಈ ಜಗತ್ತಿನಲ್ಲಿ ಸ್ವಾರ್ಥ ರಹಿತವಾದ ಸಂಬಂಧವಿದ್ದರೆ ಅದು ಅಣ್ಣ-ತಂಗಿಯ ಪ್ರೀತಿಯ ಸಂಬಂಧ ಮಾತ್ರ. ರಕ್ಷಾ ಬಂಧನದ ವಿಶಿಷ್ಟ ಹಿನ್ನೆಲೆ ಏನೆಂದು ನೋಡುವುದಾದರೆ ಭವಿಷ್ಯ ಪುರಾಣದ ಪ್ರಕಾರ ಹಿಂದೆ ದೇವ-ದಾನದವರಿಗೆ ಹನ್ನೆರಡು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು, ರಾಕ್ಷಸರು ದೇವತೆಗಳನ್ನು ಸೋಲಿಸಿ, ದೇವಲೋಕವನ್ನು ಆಕ್ರಮಿಸಿ, ದೇವತೆಗಳನ್ನು ಅಲ್ಲಿಂದ ಹೊರದಬ್ಬಿದರು.

ಮೂರುಲೋಕದ ಆಡಳಿತವನ್ನು ತಮ್ಮ ಕೈವಶ ಮಾಡಿಕೂಂಡ ದಾನವರು, ಮನುಷ್ಯರು ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡಬಾರದೆಂದೂ, ತಮ್ಮನ್ನೇ ಪೂಜಿಸಬೇಕೆಂದರು. ಇದರ ಪರಿಣಾಮ ವೇದಪಠಣ-ಯಜ್ಞ- ಉತ್ಸವಾದಿಗಳು ನಿಂತವು, ಧರ್ಮನಾಶವಾಗಿ ದೇವತೆಗಳು ಕ್ಷೀಣಬಲರಾದಾಗ, ದೇವರಾಜ ಇಂದ್ರನು, ಗುರು ಬೃಹಸ್ಪತಿ ಆಚಾರ್ಯರಲ್ಲಿ ಹೀಗೆ ಪ್ರಾರ್ಥಿಸಿದ. ಈ ಪರಿಸ್ಥಿತಿಯಲ್ಲಿ ಯುದ್ಧ ಮಾಡಲಾರೆ, ಮಾಡದೆ ಇರಲಾರೆ, ಏನು ಮಾಡಬೇಕೆಂದು ಅರಿಯದವನಾಗಿದ್ದೇನೆ.

ಯಾವುದಾದರೂ ಉಪಾಯ ಸೂಚಿಸಿ’ ಎಂದಾಗ ದೇವೇಂದ್ರನ ವೇದನೆ ಅರಿತು ವಿಜಯ ಪ್ರಾಪ್ತಿಯಾಗಲು, ಶ್ರಾವಣಪೂರ್ಣಿಮೆ ದಿನ ರಕ್ಷಾವಿಧಾನವನ್ನು ಮಾಡಲು ಸೂಚಿಸಿದರು. ಅದರಂತೆ ಇಂದ್ರಾಣಿಯು ಶ್ರಾವಣ ಪೂರ್ಣಿಮೆ ದಿನ, ಇಂದ್ರನಿಗೆ ಬೃಹ್ಮಸ್ಪತಿ ಆಚಾರ್ಯರಿಂದ ಸ್ಪಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು ಇಂದ್ರನ ಬಲಗೈಗೆ- ಯೇನ ಬದ್ಧೋ ಬಲೀರಾಜಾ ದಾನವೇಂದ್ರೋ ಮಹಾಬಲಃ.

ಮತ್ತೊಂದು ಪುರಾಣ ಕಥೆಯ ಪ್ರಕಾರ ವಾಮನನು ರಾಜಾ ಬಲಿಗೆ ಈ ದಿನವೇ ರಕ್ಷಾಸೂತ್ರ ಕಟ್ಟಿದಕ್ಷಿಣೆ ಬೇಡಿದ್ದ. ಇನ್ನು ಮಹಾಭಾರತದಲ್ಲಿ ಶ್ರಾವಣ ಪೂರ್ಣಿಮೆಯಂದು ನಡೆದ ಈ ಸಂದರ್ಭ ಸುಪ್ರಸಿದ್ಧವಾದುದು. ಕೃಷ್ಣನು ಶಿಶುಪಾಲನನ್ನು ವಧಿಸುವಾಗ ಕೃಷ್ಣನ ಬಲಗೈ ತೋರುಬೆರಳಿಗೆ ಗಾಯವಾಯಿತು. ಅಲ್ಲೇ ಇದ್ದ ದ್ರೌಪದಿ ಕೂಡಲೇ ತನ್ನ ಸೀರೆಯ ಸೆರಗನ್ನು ಹರಿದು ಕೃಷ್ಣನ ತೋರುಬೆರಳಿಗೆ ಕಟ್ಟಿದಳು. ನಂತರ ದ್ರೌಪದಿ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣ ಅಕ್ಷಯಂಬರವನ್ನು ಇತ್ತು ಆಕೆಯನ್ನು ರಕ್ಷಿಸಿದ. ದ್ರೌಪದಿ ಕಟ್ಟಿದ ಕಟ್ಟು ಆಕೆಯ ರಕ್ಷಣೆಗೆ ಕಾರಣವಾಯಿತು. ಕ್ಷತ್ರಿಯ ಪುರುಷರು ಯುದ್ಧಕ್ಕೆ ತೆರಳುವಾಗ ಮಹಿಳೆಯರು ರಕ್ಷಾಸೂತ್ರ ಕಟ್ಟಿಕಳಿಸುತ್ತಿದ್ದರು.

ರಕ್ಷಾಬಂಧನ ಆಚರಣೆ ಹೇಗೆ? ಎಂದು ನೋಡುವುದಾದರೆ, ಈ ದಿನ ಸಮುದ್ರತೀರವಾಸಿಗಳು ಸಮುದ್ರಕ್ಕೆ ಕ್ಷೀರಾಭಿಷೇಕ ಮಾಡಿ, ಯಜ್ಞೋಪವೀತ ಹಾಗೂ ತೆಂಗಿನಕಾಯಿ ಸಮರ್ಪಿಸುತ್ತಾರೆ. ಸಂಸ್ಕೃತಪ್ರಿಯರು ಈ ದಿನವನ್ನು ರಕ್ಷಾಬಂಧನದ ಜೊತೆಗೆ ಸಂಸ್ಕೃತದಿನವಾಗಿ ಆಚರಿಸುತ್ತಾರೆ. ಹಿಂದೆಲ್ಲಾ ರಕ್ಷಾಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆನೂಲನ್ನು ರಾಖಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದೆವು. ಯಾವಾಗ ಚೀನಾದ ರಾಖಿಗಳು ಬಂದವೋ ಆಗ ರಾಖಿಯ ಸ್ವರೂಪವೇ ಬದಲಾಗಿಹೋಯಿತು. ಈಗ ಮತ್ತೆ ಭಾರತೀಯ ರಾಖಿಗಳನ್ನು ಖರೀದಿಸಿ, ಚೈನೀಸ್‌ ರಾಖಿಗಳಿಂದ ದೂರವಿರಿ ಎಂಬ ಘೋಷಣೆಯೊಂದಿಗೆ ರಕ್ಷಾಬಂಧನ ಆಚರಿಸುವ ಕಾಲ ಬಂದಿದೆ. ನಮ್ಮದೇ ರಕ್ಷೆಯ ಹಿಂದೆ ನಮ್ಮ ದೇಶದ ಸುರಕ್ಷತೆ ಅಡಗಿದೆ ಎಂಬುದನ್ನು ನಾವು ಮರೆಯಬಾರದು.

ಇನ್ನು ಈ ದಿನದಂದು ರಾಖಿ ಕಟ್ಟುವಾಗ ಪ್ರತಿಯೊಬ್ಬರೂ ಸಹ ಈ ಒಂದು ಮಂತ್ರವನ್ನು ಹೇಳಿಕೊಂಡು ರಾಖಿಯನ್ನು ಕಟ್ಟಿದರೆ, ರಾಕಿ ಕಟ್ಟಿದವರಿಗೂ ಕಟ್ಟಿಸಿಕೊಂದವರಿಗೂ ಬಹಳ ಒಳ್ಳೆಯದಾಗುತ್ತದೆ. ಮಂತ್ರ ಈ ರೀತಿಯಾಗಿರುತ್ತದೆ “ಯೋನ ಬಂದೋ ಬಲಿ ರಾಜಾ ದಾನವೆಂದ್ರೋ ಮಹಾಬಲಃ| ತೇನ ತ್ವಾಮಸಿ ಬದ್ನಾಮಿ ರಕ್ಷಮಾಚಲಾಮಾಚಲ||” ಈ ರೀತಿಯಾಗಿ ಮಂತ್ರವನ್ನು ಹೇಳಿಕೊಂಡು ತಮ್ಮ ಸಹೋದರರಿಗೆ ಸಹೋದರಿಯರು ರಕ್ಷೆಯನ್ನೂ ಕಟ್ಟಬಹುದು. ಇಲ್ಲವಾದರೆ “ಶ್ರೀರಾಮರಕ್ಷ ಜಗದ್ರಕ್ಷಃ” ಎಂಬ ನಾಮವನ್ನು ಹೇಳಿಕೊಂಡೂ ಸಹ ಕಟ್ಟಬಹುದು.

ಹಾಗೆಯೇ ನಾಳೆ ಬೆಳಿಗ್ಗೆ ಆರು ಗಂಟೆ ಹದಿನೈದು ನಿಮಿಷದ ಸಂಜೆ ಐದು ಗಂಟೆ ಮೂವತ್ತು ನಿಮಿಷದವರೆಗೂ ಶುಭಕಾಲ ಇರುತ್ತದೆ ಈ ಒಂದು ಶುಭ ಮುಹೂರ್ತದಲ್ಲಿ ರಾಖಿಯನ್ನು ಕಟ್ಟಿದರೆ ಆಯಸ್ಸು ಆರೋಗ್ಯ ವೃದ್ಧಿ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಮಧ್ಯಾಹ್ನದ ಸಮಯದಲ್ಲಿ ಒಂದು ಗಂಟೆ ಇಪ್ಪತಾರು ನಿಮಿಷದಿಂದ ಹಾಗೂ ಮೂರು ಗಂಟೆ ಐವತ್ತೇಳು ನಿಮಿಷದ ಒಳಗೆ ನೀವು ರಕ್ಷೆಯನ್ನು ಕಟ್ಟಿದರೆ ಸೂರ್ಯದೇವನ ಅನುಗ್ರಹ ಪ್ರಾಪ್ತಿ ಆಗುತ್ತದೆ. ಹಾಗಾಗಿ ಒಂದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ಒಳಗೆ ಅತ್ಯಂತ ಶುಭ ಪಡೆಯಬಹುದು. ಭಗವಾನ್ ಶ್ರೀ ವಿಷ್ಣುವಿನ ಸಂಕಲ್ಪ ಮಾಡಿಕೊಂಡು ,ದೇವರ ಅನುಗ್ರಹ ಪಡೆದು , ರಾಖಿ ಕಟ್ಟಿದವರಿಗೆ ತೆಂಗಿನಕಾಯಿಯನ್ನು ಕೊಟ್ಟು ರಾಖಿಯನ್ನು ಕಟ್ಟಿಸಿಕೊಂಡರೆ ಅವರಿಗೆ ಇಡೀ ವರ್ಷ ಶುಭಫಲ ಲಭಿಸುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!