ಕನ್ನಡ ಚಿತ್ರರಂಗದಲ್ಲಿ ನಡೆದ ಯಾರು ಮರೆಯಲಾಗದ ಅತ್ಯಂತ ಕಷ್ಟಕರವಾದ ಸಂಗತಿ ಎಂದರೆ ಪುನೀತ್ ರಾಜಕುಮಾರ್ ಅವರ ಮರಣದ ವಿಷಯ. ಇಂದಿಗೂ ಕೂಡ ಆ ವಿಷಯವನ್ನು ನೆನೆಸಿಕೊಂಡರೆ ಅರಗಿಸಿಕೊಳ್ಳುವುದಕ್ಕೆ ತುಂಬಾ ಕಠಿಣ ಎನಿಸುತ್ತದೆ ಅಭಿಮಾನಿಗಳಿಗೆ ಇಷ್ಟೊಂದು ಕಷ್ಟವಾಗುತ್ತಿರುವಾಗ ಅವರ ಕುಟುಂಬದವರ ದುಃಖ ಹೇಳತೀರದು. ಈ ಕುರಿತು ಶಿವರಾಜ್ ಕುಮಾರ್ ಅವರು ಏನು ಹೇಳುತ್ತಾರೆ ಎಂಬುದನ್ನು ನಾವಿಂದು ನಮಗೆ ತಿಳಿಸಿ ಕೊಡುತ್ತೇವೆ.
ಶಿವರಾಜ್ ಕುಮಾರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೂ ಯಾವುದೇ ಸಂದರ್ಶನದಲ್ಲಿ ಮಾತನಾಡುವಾಗಲೂ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡೆ ಆಡುತ್ತಿದ್ದರು. ಪುನೀತರಾಜಕುಮಾರಗಿಂತ ಶಿವರಾಜಕುಮಾರ ಅವರು ಹದಿಮೂರು ವರ್ಷ ದೊಡ್ಡವರು ಚಿಕ್ಕವಯಸ್ಸಿನಿಂದಲೇ ಅವರ ಜೊತೆ ಬೆಳೆದವರು. ಶಿವರಾಜ್ ಕುಮಾರ್ ಅವರು ಹದಿನೇಳು ಹದಿನೆಂಟು ವರ್ಷದವರಿರುವಾಗಲೇ ಪುನೀತ್ ರಾಜಕುಮಾರ್ ಎರಡು ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಶಿವರಾಜ್ ಕುಮಾರ್ ಪುನೀತ್ ರಾಜಕುಮಾರ್ ಅವರು ಎಂದಿಗೂ ಕೂಡ ಜಗಳವಾಡಿರಲಿಲ್ಲ ಅಂತಹ ಪರಿಸ್ಥಿತಿ ಅವರ ನೋಡುವೆ ಬಂದಿರಲಿಲ್ಲ.
ಪುನೀತ್ ರಾಜಕುಮಾರ್ ಅವರ ಸ್ವಭಾವವೇ ಆ ರೀತಿಯಾಗಿತ್ತು ಅವರು ಎಲ್ಲರಿಗೂ ಸಹಾಯವನ್ನು ಮಾಡುತ್ತಿದ್ದರು ಅವರು ಯಾರಿಗೂ ಬೇದಬಾವ ಮಾಡುತ್ತಿರಲಿಲ್ಲ. ಪುನೀತ್ ರಾಜಕುಮಾರ್ ಅವರಿಗೆ ಸುಮಾರು ಐದು ವರ್ಷ ಇರುವಾಗ ಹೋಟೆಲಿಗೆ ಹೋಗುವಾಗ ತಮ್ಮ ಜೊತೆ ವಾಚ್ಮ್ಯಾನ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರು ಅವರು ಎಲ್ಲಿ ಕುಳಿತುಕೊಳ್ಳುತ್ತಾರೆ
ಪುನೀತ್ ಅವರು ಕೂಡ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರಂತೆ ಅವರು ಏನನ್ನು ತಿನ್ನುತ್ತಾರೆ ಅದನ್ನೇ ಪುನೀತ್ ರಾಜಕುಮಾರ್ ಅವರು ತಿನ್ನುತ್ತಿದ್ದರಂತೆ ಚಿಕ್ಕವಯಸ್ಸಿನಲ್ಲಿಯೇ ಅವರಿಗೆ ಆ ರೀತಿಯ ಬುದ್ಧಿ ಇತ್ತು ಆ ಕಾರಣದಿಂದಾಗಿ ಅವರು ಇಂದು ಒಬ್ಬ ಮಹಾನ್ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರು ಯಾವಾಗಲೂ ಶಿವರಾಜ್ ಕುಮಾರ್ ಅವರನ್ನು ಶಿವಣ್ಣ ಶಿವಣ್ಣ ಎಂದು ಕರೆಯುತ್ತಿದ್ದರಂತೆ.
ಶಿವರಾಜ್ ಕುಮಾರ್ ಆಗಲಿ ರಾಘವೇಂದ್ರರಾಜಕುಮಾರ ಆಗಲಿ ಜೊತೆಗೆ ಪುನೀತ್ ರಾಜಕುಮಾರ್ ತುಂಬಾ ಚೆನ್ನಾಗಿಯೇ ಇದ್ದರು ಯಾರಿಗೂ ಗರ್ವ ಇರಲಿಲ್ಲ. ಅವರು ಒಬ್ಬರಿಗೊಬ್ಬರು ಜಗಳವಾಡಿರುವಂತದ್ದು ಅವರಿಗೆ ಜ್ಞಾಪಕವೇ ಇಲ್ಲವಂತೆ. ಶಿವರಾಜ್ ಕುಮಾರ್ ಅವರು ತಂಗಿಯಂದಿರ ಜೊತೆ ಜಗಳವಾಡುತ್ತಿದ್ದರಂತೆ ಆದರೆ ತಮ್ಮಂದಿರ ಜೊತೆ ಎಂದಿಗೂ ಜಗಳವಾಡಿರಲಿಲ್ಲವಂತೆ.
ನಾವು ಸಮಾಜ ಏನು ಮಾಡಿತು ಎಂದು ಪ್ರಶ್ನಿಸುವುದಕ್ಕಿಂತ ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎಂದು ಹೇಳುವುದು ಒಳ್ಳೆಯದು ಅದಕ್ಕೆ ಉತ್ತಮ ಉದಾಹರಣೆ ಪುನೀತ್ ರಾಜಕುಮಾರ್. ಒಬ್ಬ ಮನುಷ್ಯ ಹೇಗಿರಬೇಕು ಹೇಗೆ ಬಾಳಬೇಕು ಎಂಬುದನ್ನು ತೋರಿಸಿಕೊಟ್ಟು ಹೋಗಿದ್ದಾರೆ ಎಂದು ಶಿವರಾಜ್ ಕುಮಾರ್ ಹೇಳಿದರು. ಶಿವರಾಜ್ ಕುಮಾರ್ ಅವರು ಕೆಲವೊಂದು ಸಂದರ್ಭಗಳಲ್ಲಿ ಪುನೀತ್ ರಾಜಕುಮಾರ್ ಹುಟ್ಟಿದ್ದು ರಾಯಲ್ ಆಗಿ ಬೆಳೆದಿದ್ದು ರಾಯಲ್ ಆಗಿ ಇನ್ನು ಮುಂದೆ ಕೂಡ ಅವನು ರಾಯಲ್ ಆಗಿರುತ್ತಾನೆ ಎಂದು ಹೇಳಿದ್ದರು.
ಆದರೆ ಆ ದೇವರು ಆದಷ್ಟು ಬೇಗ ಆ ರಾಯಲಿಟಿಯನ್ನು ಕಿತ್ತುಕೊಂಡಿದ್ದಾನೆ. ಎಲ್ಲರೂ ಹೇಳುತ್ತಾರೆ ನನಗೆ ಒಬ್ಬ ಅಣ್ಣ ಹೀಗಿದ್ದ ನನ್ನ ತಂದೆ ಹೀಗಿದ್ದರೂ ನನ್ನ ತಾಯಿ ಹಿಗಿದ್ದರು ಎಂದು ಆದರೆ ನಾನು ನನ್ನ ತಮ್ಮ ಹೀಗಿದ್ದ ಎಂದು ಹೇಳಿಕೊಳ್ಳಬೇಕು. ಆದರೆ ಆತ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾನೆ ಆ ನೋವನ್ನು ನಾವು ಸಾಯುವವರೆಗೂ ಮರೆಯುವುದಕ್ಕೆ ಸಾಧ್ಯವಿಲ್ಲ.
ಯಾರು ಅವರನ್ನು ದೂರ ತಳ್ಳಬೇಡಿ ಅವರ ನೆನಪನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಅವನು ಎಲ್ಲೂ ಹೋಗಿಲ್ಲ ಇಲ್ಲೆ ಎಲ್ಲೋ ಹೊರಗಡೆ ಹೋಗಿದ್ದಾನೆ ಬರುತ್ತಾರೆ ಎಂದು ಕಾಯುತ್ತಿರೋಣ. ಕೆಲವರು ಅಪ್ಪುವಿಗಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದೀರಿ ಆದರೆ ಹಾಗೆ ಮಾಡಬೇಡಿ ಅವನನ್ನ ನೆನಪಿಸಿಕೊಂಡು ಜೀವನ ಮಾಡಿ ಎಂದು ತುಂಬಾ ದುಃಖತಪ್ತರಾಗಿ ತಮ್ಮ ನುಡಿಗಳನ್ನು ಹೇಳಿದರು.