ನಿರ್ದೇಶಕ ರಾಜಮೌಳಿ ಅವರ ಭಾರೀ ಸುದ್ದಿ ಮಾಡಿದ್ದ ಸಿನಿಮಾ ಬಾಹುಬಲಿಯಲ್ಲಿ, ತನ್ನ ತಾಯಿ ಶಿವಲಿಂಗಕ್ಕಾಗಿ ದೂರದಿಂದ ನೀರು ಹೊತ್ತು ತರುವುದನ್ನು ಕಂಡ ಮಗ ಶಿವಲಿಂಗವನ್ನೇ ಜಲಪಾತದ ಕೆಳಗೆ ಇರಿಸುತ್ತಾನೆ. ತಾಯಿ ಮಗನ ಮಮತೆಯಿಂದ ಕೂಡಿದ ಈ ದೃಶ್ಯ ಪ್ರೇಕ್ಷಕರ ಮನಗೆದ್ದಿತ್ತು. ಅಮ್ಮನ ಕಷ್ಟ ನೋಡಲಾರದ ಈ ಮಗ ಮಾಡಿದ್ದೇನು ಗೋತ್ತಾ? ಈತನನ್ನು ನಿಜವಾದ ಬಾಹುಬಲಿ ಎಂದರೆ ತಪ್ಪಾಗಲಾರದು.

ಜನ್ಮ ಕೊಟ್ಟ ತಾಯಿಗೆ ಮಕ್ಕಳು ಯಾವುದೇ ವಿಧದಲ್ಲೂ ಋಣ ತೀರಿಸಲೂ ಸಾಧ್ಯವೇ ಇಲ್ಲ. ಇತ್ತೀಚೆಗಂತೂ ವಯಸ್ಸಾದ ಜನ್ಮದಾತರನ್ನ ವೃದ್ದಾಶ್ರಮ ತಳ್ಳೋದು ಒಂಥರಾ ಪ್ಯಾಷನ್ ಆಗ್ಬಿಟ್ಟಿದೆ. ಆದರೆ ಇಲ್ಲೊಬ್ಬ ಆಧುನಿಕ ಶ್ರವಣಕುಮಾರ ತನ್ನ ತಾಯಿಯೂ ಕಷ್ಟ ಪಡುವುದನ್ನು ನೋಡಲು ಆಗದೇ ಮಾಡುತ್ತಿರುವ ಕೆಲಸ ನಿಮ್ಮ ಕಣ್ಣುಗಳು ತೇವಗೊಳ್ಳುವುದು ಖಚಿತ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ತನ್ನ ತಾಯಿ ನೀರು ತರಲು ತುಂಬಾನೇ ಕಷ್ಟ ಪಡುತ್ತಿದ್ದರು ಆಗಾಗಿ ತನ್ನತಾಯಿ ಪ್ರತಿ ದಿನ ಪಡುವ ಕಷ್ಟ ನೋಡಲಾರದೆ ತಾನು ಬಾವಿಯನ್ನು ಅಗೆದು ನೀರು ತೆಗೆದಿದ್ದಾನೆ. ನಿಜಕ್ಕೂ ಈ ಕಥೆ ಇತರರಿಗೂ ಸ್ಪೂರ್ತಿ ಅಂತಾನೆ ಹೇಳಬಹುದು. ಇದರ ಕುರಿತು 15 ವರ್ಷದ ಈ ಪೋರ ಹೇಳುವ ಮಾತುಗಳನ್ನು ಈ ರೀತಿಯಾಗಿ ನೋಡಬಹುದು.

ನನ್ನ ಅಮ್ಮ ಪ್ರತಿ ದಿನ ನೀರು ತರಲು ದೂರದ ಸ್ಥಳಕ್ಕೆ ಹೋಗಬೇಕಾಗಿತ್ತು ಹಾಗು ಅವರು ತುಂಬಾನೇ ಕಷ್ಟ ಪಡುತ್ತಿದ್ದರು ಹಾಗಾಗಿ ನಾನು ಈ ಕೆಲಸ ಮಾಡಲು ಮುಂದಾದೆ ನಾನು ಬಾವಿ ತೋಡಲು ಆರಂಭಿಸಿದ ನನಗೆ 40 ಅಡಿ ಅಗೆತ ಆದ ನಂತರ ಕೈಮುರಿಯಿತು. 40 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಹೇಳುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಈ ಮಗನಿಗೆ ತಾಯಿಯ ಮೇಲೆ ಇರುವ ಪ್ರೀತಿ ವಿಶ್ವಾಸ ಕಂಡು ಪ್ರತಿಯೊಬ್ಬರೂ ಈಗ ತಲೆಬಾಗುತ್ತಾ ಇದ್ದಾರೆ.

ಈ ಪ್ರಪಂಚದಲ್ಲಿ ಅಮ್ಮ ಎನ್ನೋ ಒಂದು ಪದಕ್ಕೆ ಇನ್ನಿಲ್ಲದ ಮಹತ್ವ ಇದೆ. ಇಂತಹ ಅಮ್ಮನ ಅದೆಷ್ಟೋ ಆಸೆಗಳನ್ನು ಮಕ್ಕಳು ಈಡೇರಿಸೋದೆ ಇಲ್ಲ. ಒಟ್ಟಾರೆ ತಂದೆ ತಾಯಿಗಳಿಗೆ ವಯ ಸಾಗುತ್ತಿದ್ದ ಹಾಗೇ ಒಂದು ಊರುಗೋಲು ಕೊಟ್ಟು ವೃದ್ದಾಶ್ರಮಕ್ಕೆ ಬಿಟ್ಟು ಬರೋ ಮಕ್ಕಳ ನಡುವೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದ 15 ವರ್ಷದ ಹುಡುಗ ಪವನ್ ಕುಮಾರ್ ಮಾಡಿದ ಕಾರ್ಯ ಎಲ್ಲರೂ ಮೆಚ್ಚಿಕೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!