ಜೀವನದಲ್ಲಿ ಸಾಧಿಸಬೇಕು ಎಂದು ಯೋಚಿಸುವವನಿಗೆ ಸಾಧನೆಯ ದಾರಿ ಹುಡುಕುವುದು ಮುಖ್ಯವಾಗಿರುತ್ತದೆಯೇ ಹೊರತು ಆತನ ವಿದ್ಯಾರ್ಹತೆಯಲ್ಲ. ಸಾಧಿಸುವ ಛಲವಿದ್ದರೆ ಮನಸ್ಸಿದ್ದರೆ ಯಾವ ವ್ಯಕ್ತಿಯು ಕೂಡ ಅತ್ಯುನ್ನತ ಸಾಧನೆಯನ್ನು ಜೊತೆಗೆ ಅತ್ಯುನ್ನತ ಸಾಧನೆಯ ಶಿಖರವನ್ನೇರಲು ಸಾಧ್ಯವಾಗುತ್ತದೆ. ಇದೇ ರೀತಿಯಲ್ಲಿ ಶಿವಮೊಗ್ಗದ ಗಿರೀಶ್ ಎನ್ನುವರು ಮಧುಶ್ರೀ ರಾಗಿ ಡೇ ಎಂಬ ಹೆಸರಿನಡಿಯಲ್ಲಿ ರಾಗಿ ಬಿಸ್ಕೆಟ್ ತಯಾರಿಕೆಯನ್ನು ಆರಂಭಿಸಿ ಯಶಸ್ಸನ್ನು ಕಂಡಿದ್ದಾರೆ. ಇವರ ಸಾಧನೆಯ ಹಾದಿಯ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗಿರೀಶ್ ಅವರು ತಮ್ಮ ಏಳನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ನಂತರ ಅವರ ತಾಯಿ ಫುಟ್ಪಾತ್ ನಲ್ಲಿ ಹೂವು ಗಳನ್ನು ಮಾರಿ ಜೀವನ ಸಾಗಿಸುತ್ತಾರೆ. ಗಿರೀಶ್ ಅವರ ಸೋದರಮಾವ ಅವರ ಅಂಗಡಿಯ ಹತ್ತಿರವೇ ಜಾಗವನ್ನು ನೀಡುತ್ತಾರೆ. ಅಲ್ಲಿಯೇ ಇವರ ತಾಯಿಯು ಹೂವು ಹಣ್ಣುಗಳನ್ನು ಮಾರಿ ಜೀವನವನ್ನು ಸಾಗಿಸುತ್ತಾರೆ. ನಂತರ ಗಿರೀಶ್ ಅವರು ಮಾವನವರ ಅಂಗಡಿಯನ್ನು ಬಾಡಿಗೆಗೆ ಪಡೆದು ಕಾರ್ಯನಿರ್ವಹಿಸುತ್ತಾರೆ. ನಂತರ ಇವರು ಇರುವ ಜಾಗದಲ್ಲಿ ಏನಾದರೂ ಸಾಧಿಸಬೇಕು ಎಂದು ನಿರ್ಧರಿಸಿ ಏನಾದರೊಂದು ವೈಯಕ್ತಿಕ ವ್ಯಾಪಾರವನ್ನು ಮಾಡಬೇಕೆಂದು ನಿರ್ಧರಿಸುತ್ತಾರೆ.
ಗಿರೀಶ್ ಅವರು ನಂತರ ನಾಲ್ಕು ಗಾಡಿಗಳನ್ನು ಇಟ್ಟುಕೊಂಡು ಬಾಡಿಗೆಗೆ ಬಿಡುತ್ತಾರೆ. ಇದರಲ್ಲಿ ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಬಾಡಿಗೆ ಗಾಡಿಗಳಿಗೆ ಕೆಲಸವಿಲ್ಲದೆ ಇನ್ಸೂರೆನ್ಸ್ ಗಾಡಿ ಮೆಂಟೆನೆನ್ಸ್ ಮತ್ತು ಲೋನ್ ಗಳಿಗೆ ಹಣ ತುಂಬಲು ಸಮಸ್ಯೆಯಾಗುತ್ತದೆ. ಇದಕ್ಕಾಗಿ ಒಂದು ಗಾಡಿಯನ್ನು ಸಹ ಮಾಡುತ್ತಾರೆ. ನಂತರ ಯೋಚಿಸಿದವರು ಮನೆಯಲ್ಲಿಯೇ ರಾಗಿ ಬಿಸ್ಕೆಟ್ ಮಾಡುವುದನ್ನು ಆರಂಭಿಸುತ್ತಾರೆ. ಇದರಲ್ಲಿ ಸುಮಾರು 6 ತಿಂಗಳುಗಳ ಕಾಲ ವಿವಿಧ ರೀತಿಯಲ್ಲಿ ಬಿಸ್ಕೆಟ್ ಅನ್ನು ತಯಾರು ಮಾಡಿ ಲೋಕಲ್ ಬೇಕರಿಗಳಿಗೆ ನೀಡುತ್ತಿದ್ದರು.
ನಂತರ ಇವರು ದೊಡ್ಡ ಪ್ರಮಾಣದಲ್ಲಿ ಬಿಸ್ಕೆಟ್ ಅನ್ನು ತಯಾರಿಸುವ ಕಂಪನಿ ಮಾಡಲು ಯೋಚಿಸಿ ಅದಕ್ಕಾಗಿ ಕೊಯಿಮುತ್ತೂರಿಗೆ ಹೋಗಿ ದೊಡ್ಡ ಪ್ರಮಾಣದ ಬಿಸ್ಕೆಟ್ ತಯಾರಿಸುವ ಮಷೀನ್ ಅನ್ನು ಖರೀದಿಸಿ ತರುತ್ತಾರೆ. ಶಿವಮೊಗ್ಗದಲ್ಲಿಯೇ ಕಂಪನಿಯನ್ನು ಆರಂಭಿಸಿ ಅವರ ಮಾಮ ಮತ್ತು ಅವರ ಹೆಂಡತಿ ಒಳಗೂಡಿ ರಾಗಿ ಬಿಸ್ಕಿಟ್ ತಯಾರಿಸಿ ಮೊದಲು ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವನ್ನು ಮಾಡುತ್ತಾರೆ.
ಇದರಲ್ಲಿ ಯಶಸ್ಸನ್ನು ಕಾಣುತ್ತಾರೆ. ಇದನ್ನು ಉತ್ತಮ ರೀತಿಯಲ್ಲಿ ಮನುಫ್ಯಾಕ್ಚರಿಂಗ್ ಮಾಡಿ ಯಾವುದೇ ಎಸ್ಎಂಎಸ್ ಗಳನ್ನು ಹಾಕದೆ ತುಪ್ಪದಲ್ಲಿ ಇದನ್ನು ರೆಡಿ ಮಾಡುತ್ತಾರೆ. ಶುಗರ್ ಪೇಷಂಟ್ ಗಳಿಗೆ ಅನುಕೂಲವಾಗುವಂತೆ ಶುಗರ್ ಫ್ರೀ ಬಿಸ್ಕೆಟ್ ಅನ್ನು ಕೂಡ ತಯಾರಿಸುತ್ತಾರೆ. ರಾಗಿ ಡೇ ಬಿಸ್ಕೆಟ್ ಅತ್ಯುತ್ತಮವಾದ ಗುಣಮಟ್ಟ, ರುಚಿ ಹಾಗೂ ಮನುಫ್ಯಾಕ್ಚರರ್ ಒಂದಿಗೆ ತಯಾರಿಸಲ್ಪಡುವದರಿಂದ ಗ್ರಾಹಕರು ಇದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಗಿರೀಶ್ ಅವರು ಈ ರೀತಿಯಾಗಿ ತಮ್ಮ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಶ್ರಮದಿಂದ ಕಟ್ಟಿಕೊಂಡಿದ್ದಾರೆ. ಇವರ ಯಶಸ್ಸು ಗಮನಾರ್ಹವಾಗಿದೆ.