Shivamogga airport jobs recruitment 2023: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು ನಿರ್ವಹಣೆ ಮಾಡುತ್ತಿದ್ದು, ಇದೀಗ ಏರ್ಪೋರ್ಟ್ ನಲ್ಲಿ ಖಾಲಿ ಇರುವ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ನಡೆಯಲಿದ್ದು, ಬೆಂಗಳೂರಿನ KSIIDC ನಲ್ಲಿ 13/10/2023ರಂದು ಡೈರೆಕ್ಟ್ ಇಂಟರ್ವ್ಯೂ ಅಟೆಂಡ್ ಮಾಡಬಹುದು.

1 ವರ್ಷದ ಗುತ್ತಿಗೆಯ ಸಮಯಕ್ಕೆ ಬೇರೆ ಬೇರೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ತಿಳಿಸಲಾಗಿದೆ. ಕೆಲಸಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳು ಉತ್ತಮವಾಗಿ ಕೆಲಸ ಮಾಡಿದರೆ ಗುತ್ತಿಗೆಯ ಅವಧಿಯನ್ನು ಇನ್ನು ಒಂದು ವರ್ಷ ಅಥವಾ ಹೆಚ್ಚಿನ ಸಮಯಕ್ಕೆ ಮುಂದುವರೆಸುವ ಸಾಧ್ಯತೆ ಇರುತ್ತದೆ. ಅಸಕ್ತಿ ಇರುವವರು ಕೆಲಸಕ್ಕೆ ಬೇಕಿರುವ ಅರ್ಹತೆಗಳ ಬಗ್ಗೆ ತಿಳಿದುಕೊಂಡು ಇಂಟರ್ವ್ಯೂ ಅಟೆಂಡ್ ಮಾಡಬಹುದು. ಕೆಲಸಕ್ಕೆ ಟಿಎ, ಡಿಎ ಸೌಲಭ್ಯ ಕೂಡ ಇರುತ್ತದೆ. ಆಯ್ಕೆ ಆಗುವವರಿಗೆ ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಪೋಸ್ಟಿಂಗ್ ಆಗುತ್ತದೆ. ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟನೆಗೆ 9845833566 ನಂಬರ್ ಗೆ ಕಾಲ್ ಮಾಡಬಹುದು.

ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿ ನೀಡುವುದಾದರೆ, ಖಾಲಿ ಇರುವುದು ಒಂದು ಏರ್ಪೋರ್ಟ್ ನಿರ್ದೇಶಕ ಹುದ್ದೆ, ಈ ಕೆಲಸಕ್ಕೆ ಮಾಸಿಕ ವೇತನ ₹1,25,000 ರೂಪಾಯಿಗಳು. ಕೆಲಸಕ್ಕೆ ವಯೋಮಿತಿ 36 ವರ್ಷಗಳು. ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ ಬ್ಯುಸಿನೆಸ್ ಅಥವಾ ಏವಿಯೇಷನ್ ಅಡ್ಮಿನಿಸ್ಟ್ರೇಶನ್ ಅಥವಾ ಇದಕ್ಕೆ ಸಂಬಂಧಿಸಿದ ವಿಷಯದಲ್ಲಿ ಡಿಗ್ರಿ ಮಾಡಿರಬೇಕು. ಈ ಹುದ್ದೆಗೆ ಕೆಲಸದ ಅನುಭವ ಅಗತ್ಯವಿದ್ದು, ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 7 ವರ್ಷ ಏಕ್ಸ್ಪೀರಿಯನ್ಸ್ ಇರಬೇಕು.

Shivamogga airport jobs recruitment 2023

ಇಂಟರ್ವ್ಯೂ ಗೆ ಹೋಗುವ ಅಭ್ಯರ್ಥಿಗಳ ಹತ್ತಿರ ಆಗತ್ಯವಿರುವ ಡಾಕ್ಯುಮೆಂಟ್ ಗಳ ಜೊತೆಗೆ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯ ಆಗಿದೆ. ಪೈಲೆಟ್ ಲೈಸೆನ್ಸ್ ಇದ್ದವರಿಗೆ ಹೆಚ್ಚಿನ ಆದ್ಯತೆ ಇರಲಿದ್ದು, ಈ ಕೆಳಗಿನ ವಿಷಯದಲ್ಲಿ ಅಭ್ಯರ್ಥಿಗಳು ಎಕ್ಸ್ಪರ್ಟ್ ಆಗಿರಬೇಕು.

ಅಭ್ಯರ್ಥಿಗಳಿಗೆ DGCA ರೀತಿಯಲ್ಲಿ ಫ್ಲೈಟ್ ಸೇಫ್ಟಿ ಡಾಕ್ಯುಮೆಂಟೇಶನ್ ಸಿಸ್ಟಮ್ ಅನುಷ್ಠಾನ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಗೊತ್ತಿರಬೇಕು. ಟರ್ಮಿನಲ್ ಸಿಸ್ಟಮ್ ಮತ್ತು ಲ್ಯಾನ್ಡ್ ಸೈಡ್ ಸೌಲಭ್ಯಗಳ ಬಗ್ಗೆ ತಿಳಿದಿರಬೇಕು. ಗ್ರೌಂಡ್ Transportation ಟರ್ಮಿನಲ್ ಹಾಗೂ ಏರ್ ಸೈಡ್ ಕಾರ್ಯಾಚರಣೆ ಏಕೀಕರಣ ಬಗ್ಗೆ ಕೂಡ ತಿಳಿಸಬೇಕು.

ಏರೋಸ್ಪೇಸ್ ಡೊಮಿನಿಯನ್ ನಲ್ಲಿ ಸಿಸ್ಟಮ್ ಸುರಕ್ಷತೆ ಅಗತ್ಯತೆಗಳ ಕುರಿತು ಅಭಿವೃದ್ಧಿ ಹಾಗೂ ವಿಮರ್ಶೆ ಮಾಡುವುದನ್ನು ತಿಳಿದುಕೊಳ್ಳಬೇಕು. ಏರ್ ಟ್ರಾಫಿಕ್ ನಿಯಂತ್ರಣ ಮಾಡುವುದನ್ನು ತಿಳಿದಿರಬೇಕು.
ಏರ್ ಕ್ರಾಫ್ಟ್ ಹಾಗೂ ಏರ್ಪೋರ್ಟ್ ಕಾರ್ಯಚರಣೆಯ ಕೈಪಿಡಿಗಳು, DGCA ಪರ್ಮಿಶನ್ ಬಂದ ನಂತರ, ಪರಿಷ್ಕರಣೆ ಮತ್ತು ತಿದ್ದುಪಡಿ ಸಂಯೋಜನೆ ಮಾಡುವುದು ಗೊತ್ತಿರಬೇಕು.

ಮೇಲೆ ತಿಳಿಸಿರುವ ಅರ್ಹತೆಗಳ ಜೊತೆಗೆ ಪೊಲೀಸ್ ಭದ್ರತೆ, ಗುಪ್ತಚರ, ತನಿಖಾ ಸಂಸ್ಥೆಗಳು ಮತ್ತು ಸೈಬರ್ ಭದ್ರತೆ ಕ್ಷೇತ್ರದಲ್ಲಿ ಕೂಡ ಅನುಭವ ಹೊಂದಿರಬೇಕು. ಸೆಕ್ಯೂರಿಟಿ ಬಗ್ಗೆ ಅರಿವು, ಪ್ರವೇಶ ನಿಯಂತ್ರಣ, ಗ್ರೌಂಡ್ ಮತ್ತು ವಿಮಾನದ ಸೆಕ್ಯೂರಿಟಿ, ಕಂಪ್ಯೂಟರ್ ಜ್ಞಾನ, ಏರ್ಪೋರ್ಟ್ ಸೆಕ್ಯೂರಿಟಿ ಆಫೀಸರ್ ಆಗಿ 5 ವರ್ಷಗಳ ಎಕ್ಸ್ಪೀರಿಯನ್ಸ್ ಇರಬೇಕು. ಇದನ್ನೂ ಓದಿ Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸ್ಟೇಟಸ್ ಏನಾಗಿದೆ ಎಂದು ಈಗಲೇ ಚೆಕ್ ಮಾಡಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!