ಪ್ರಧಾನ ಮಂತ್ರಿ ಶಿಶು ವಿಕಾಸ ಯೋಜನೆಯ ಕುರಿತು ವಿವರವಾಗಿ ಮಾಹಿತಿಯನ್ನು ನೀಡಲಾಗಿದೇ. ಪ್ರಧಾನ ಮಂತ್ರಿ ಅವರ ಶಿಶು ವಿಕಾಸ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ ಗಂಡು ಮಗು ಅಥವಾ ಹೆಣ್ಣು ಮಗುವಿಗೆ ಹತು ಲಕ್ಷ ರೂಪಾಯಿವರೆಗೆ ಹಣವನ್ನು ಪಡೆಯಬಹುದು. ಶಿಶು ವಿಕಾಸ ಯೋಜನೆಗೆ ಅರ್ಜಿ ಸಲ್ಲಿಸಲು ಮಗುವಿನ ವಯಸ್ಸು ಎಷ್ಟಿರಬೇಕು ಅನ್ನೋದನ್ನ ತಿಳಿಯೋಣ.
ಬಡ ಕುಟುಂಬದಲ್ಲಿ ಜನಿಸಿದ ಮಕ್ಕಳ ವಿದ್ಯಾಭ್ಯಾಸ, ಅವರ ಅನಾರೋಗ್ಯದ ಸಮಸ್ಯೆ ಉಂಟಾದಲ್ಲಿ ಅದರ ಖರ್ಚು ಅವುಗಳನ್ನು ಭರಿಸುವ ಶಕ್ತಿ ಸಾಮರ್ಥ್ಯ ಇರುವುದಿಲ್ಲ ಹಾಗಾಗಿ ಪ್ರಧಾನಮಂತ್ರಿಯವರು ಬಡಕುಟುಂಬದ ಜನರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಈ ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಲೇ ಇದ್ದಾರೆ. ಅದರಂತೆಯೇ ಬಡಕುಟುಂಬದಲ್ಲಿ ಜನಿಸಿದ ಮಕ್ಕಳ ಶಿಕ್ಷಣ ಅಭಿವೃದ್ಧಿಗಾಗಿ ಅವರ ಆರೋಗ್ಯದ ದೃಷ್ಟಿಯಿಂದ ಪ್ರಧಾನಮಂತ್ರಿಯವರು ಶಿಶು ವಿಕಾಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಮೊದಲೇ ಹೇಳಿದಂತೆ ಗಂಡು ಮಗು ಅಥವಾ ಹೆಣ್ಣು ಮಗು ಯಾವುದೇ ಇದ್ದರೂ ಸಹ ಆ ಮಗುವಿಗೆ 10 ಲಕ್ಷ ರೂಪಾಯಿ ಹಣ ದೊರೆಯುತ್ತದೆ ಆದರೆ ಅದು ಹೇಗಿರುತ್ತದೆ ಎಂಬುದರ ಬಗ್ಗೆ ನೋಡುವುದಾದರೆ ಎರಡುವರೆ ಲಕ್ಷ ರೂಪಾಯಿಯನ್ನು ಆರೋಗ್ಯದ ಕುರಿತಾಗಿ ನೀಡಲಾಗುತ್ತದೆ. ಹಾಗೆ ಶಿಕ್ಷಣಕ್ಕಾಗಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಐದು ಲಕ್ಷ ರೂಪಾಯ ನೀಡಲಾಗುತ್ತದೆ. ವಿದ್ಯಾಭ್ಯಾಸ ಎಲ್ಲವೂ ಮುಗಿದ ತಕ್ಷಣ ಆ ಮಗುವಿನ ಜೀವನವನ್ನು ರೂಪಿಸಿಕೊಳ್ಳುವುದರ ಸಲುವಾಗಿ ಎರಡುವರೆ ಲಕ್ಷ ಹಣವನ್ನು ಸಹ ನೀಡಲಾಗುತ್ತದೆ. ಈ ರೀತಿಯಾಗಿ ಶಿಶು ವಿಕಾಸ ಯೋಜನೆ ಯಿಂದ 10 ಲಕ್ಷವನ್ನು ವಿಭಾಗಿಸಿ ಕೊಡಲಾಗುತ್ತದೆ.
ಒಂದು ವೇಳೆ ಹೆಣ್ಣು ಮಗುವಿನ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಮಗುವನ್ನು ಆರನೇ ತರಗತಿಗೆ ಸೇರಿಸಿದಲ್ಲಿ 3000 ರೂಪಾಯಿ ದೊರೆಯುತ್ತದೆ ಹಾಗೆ 10ನೇ ತರಗತಿಗೆ ಸೇರಿಸಿದರೆ ಏಳು ಸಾವಿರ ರೂಪಾಯಿ ರೂಪಾಯಿ, ಪಿಯುಸಿಗೆ ಸೇರಿಸಿದಾಗ ₹8000 ಹಾಗೂ ಹೆಣ್ಣುಮಕ್ಕಳ 21 ವರ್ಷ ತುಂಬಿದಾಗ 2 ಲಕ್ಷ ರೂಪಾಯಿ ದೊರೆಯುತ್ತದೆ. ಯೋಜನೆಯಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಇನ್ನು ಪ್ರಧಾನಮಂತ್ರಿಯವರು ಶಿಶು ವಿಕಾಸ ಯೋಜನೆ ಗೆ ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಬೇಕು ಅನ್ನೋದನ್ನ ನೋಡುವುದಾದರೆ, ಮೊದಲಿಗೆ ಮಗುವಿನ ವಯಸ್ಸು ಐದು ವರ್ಷದಿಂದ 14 ವರ್ಷದ ಒಳಗೆ ಇರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮಗುವಿನ ಆದಾಯ ಐದು ಲಕ್ಷದ ಒಳಗೆ ಇರಬೇಕಾಗಿರುತ್ತದೆ. ಎಲ್ಲಾ ಶಾಲೆ ಮಕ್ಕಳು ಸಹ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಒಂದು ಮಗುವಿನ ಮೇಲೆ ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸುವ ಒಂದು ಬಾರಿ ಮಾತ್ರ ಇನ್ಶೂರೆನ್ಸ ಪಡೆಯಬಹುದು.
ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಎಂದರೆ,, ಮಗುವಿನ ಆಧಾರ್ ಕಾರ್ಡ್ ಹಾಗೂ ತಂದೆ-ತಾಯಿಯ ಆಧಾರ್ ಕಾರ್ಡ್. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಹತ್ತಿರದ ಸಿಎಸ್ಸಿ ಸೆಂಟರ್ಗೆ ಹೋಗಿ ಅಲ್ಲಿ ಅರ್ಜಿಯನ್ನು ಸಲ್ಲಿಸಲು ಮಾಹಿತಿಯನ್ನು ಕೇಳಿದಾಗ ಅವರು ಕೇಳುವಂತಹ ಮತ್ತಷ್ಟು ದಾಖಲಾತಿಗಳನ್ನು ಒದಗಿಸಿ ಸಂಪೂರ್ಣ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು. ಲಿಂಕ್: https://pmsvy-cloud.in/Home/Index ಇದೆ ರೀತಿ ಇನ್ನು ಸರ್ಕಾರದ ಹಲವು ಯೋಜನೆಗಳನ್ನು ನೀವು ನಮ್ಮ ಮೂಲಕ ತಿಳಿಯ ಬಯಸಿದರೆ ನಮ್ಮ ಪುಟವನ್ನು ಬೆಂಬಲಿಸಿ ಹಾಗು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.