sheet making business idea ಮನುಷ್ಯ ಅಂದ ಮೇಲೆ ತನ್ನ ಜೀವನವನ್ನು ನಡೆಸಲು ಒಂದಲ್ಲಾ ಒಂದು ಉದ್ಯೋಗದ ಅವಶ್ಯಕತೆ ಇರುತ್ತದೆ. ಏಕೆಂದರೆ ಜೀವನದ ಅವಶ್ಯಕತೆಗಳನ್ನು ಪೂರೈಸಲು ಹಣ ಬೇಕೇಬೇಕು. ಹಣ ಬೇಕು ಎಂದಾದರೆ ಉದ್ಯೋಗಗಳನ್ನು ಮಾಡಲೇಬೇಕು. ಉದ್ಯೋಗಗಳು ಹಲವಾರು ಇವೆ. ಯಾವ ಉದ್ಯೋಗವನ್ನು ಮಾಡಿ ಲಾಭವನ್ನು ಪಡೆಯುತ್ತೇವೆ ಎನ್ನುವುದು ಮುಖ್ಯವಾಗಿದೆ. ಆದ್ದರಿಂದ ನಾವು ಇಲ್ಲಿ ಸುಲಭದ ಒಂದು ಉದ್ಯೋಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಯಾವುದೇ ಬಿಸನೆಸ್ ಮಾಡಲು ಹೊರಟರೆ ಮೊದಲು ಬಂಡವಾಳ ಹಾಕಬೇಕಾಗುತ್ತದೆ. ಮೆಟಲ್ ಶೀಟ್ ಗಳನ್ನು ಕಟ್ಟಡಗಳಲ್ಲಿ ಮೇಲೆ ಹಾಕಲು ಬಳಸುತ್ತಾರೆ. ಮನೆಯ ಮೇಲೆ ಆರ್ ಸಿಸಿ ಮಾಡುವುದಕ್ಕಿಂತ ಮೆಟಲ್ ಶೀಟ್ ಗಳನ್ನು ಹಾಕುವವರೇ ಜಾಸ್ತಿಯಾಗಿದ್ದಾರೆ. ಅದಕ್ಕೆ ಒಳ್ಳೆಯ ಡಿಮ್ಯಾಂಡ್ ಇದೆ. ಮೊದಲು ಇದಕ್ಕೆ 12 ಲಕ್ಷದ ಒಂದು ಮಿಷನನ್ನು ಖರೀದಿ ಮಾಡಬೇಕಾಗುತ್ತದೆ. ಇದರಲ್ಲಿ ಮೆಟಲ್ ಶೀಟ್ ಮಾಡಲಾಗುತ್ತದೆ.

ಹಾಗೆಯೇ ಶೀಟ್ ಮಾಡಲು 1 ರೋಲ್ ಗೆ 50000 ರೂಪಾಯಿ ಇರುತ್ತದೆ. ಇದು ಒಂದು ಟನ್ ಇರುತ್ತದೆ. ಮೆಟಲ್ ಶೀಟ್ ಗೆ ಯಾವ ಬಣ್ಣ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಹಾಗೆ ಇದರಮೇಲೆ ಕಂಪನಿಯ ಮಾಹಿತಿಗಳನ್ನು ಹಾಕಬೇಕು. ಇದಕ್ಕೆ ಎರಡು ಜನ ಕಾರ್ಮಿಕರು ಇದ್ದರೆ ಸಾಕಾಗುತ್ತದೆ. ಇದನ್ನು ತಯಾರಿ ಮಾಡಿದ ನಂತರ ಹಾರ್ಡ್ವೇರ್ ಅಂಗಡಿಗಳಿಗೆ ಮತ್ತು ಸಿಮೆಂಟ್ ಅಂಗಡಿಗಳಿಗೆ ಇದನ್ನು ಸಾಗಿಸುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.

ಈ ಶೀಟನ್ನು ಒಂದು ಕೆಜಿಗೆ 80 ರೂಪಾಯಿಯಂತೆ ಮಾರಾಟ ಮಾಡಬಹುದು. ಅಂಗಡಿಯವರು ಇದನ್ನು 90 ರಿಂದ 100 ರೂಗಳವರೆಗೆ ಮಾರಾಟ ಮಾಡುತ್ತಾರೆ. ಒಂದು ಕೆಜಿಗೆ 20ರೂಗಳಷ್ಟು ಲಾಭವಾಗುತ್ತದೆ. ಆದ್ದರಿಂದ ದಿನಕ್ಕೆ ಎಷ್ಟು ಮಾರಾಟ ಮಾಡುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದ ದಿನಕ್ಕೆ 20 ಸಾವಿರ ರೂಪಾಯಿಗಳಷ್ಟು ಹಣವನ್ನು ಗಳಿಸಬಹುದು. ಹಾಗೆಯೇ ತಿಂಗಳಿಗೆ ಆರು ಲಕ್ಷದಷ್ಟು ಹಣ ಗಳಿಸಬಹುದು. ಆದ್ದರಿಂದ ಈ ಬಿಸಿನೆಸ್ ಅನ್ನು ಮಾಡಿದರೆ ಒಳ್ಳೆಯ ಲಾಭವನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!