ಎಲ್ಲರಿಗೂ ಹುಟ್ಟಿದ ಘಳಿಗೆಯ ಆಧಾರದ ಮೇಲೆ ಜನ್ಮ ಕುಂಡಲಿ ಮಾಡಿಸುತ್ತಾರೆ. ಆ ಜನ್ಮ ಕುಂಡಲಿಯ ಪ್ರಕಾರ ಯೋಗಗಳು, ಗಂಡಾಂತರಗಳು, ಭವಿಷ್ಯ, ಹೇಗೆ ಇರುತ್ತದೆ ಎನ್ನುವುದನ್ನು ಬಲ್ಲವರು, ಕಲಿತವರು ಹೇಳುತ್ತಾರೆ. ಜನ್ಮ ಘಳಿಗೆಯ ಪ್ರಕಾರ ರಾಶಿಗಳು, ನಕ್ಷತ್ರಗಳು ಯಾವುದು ಎಂದು ಹೇಳಬಹುದು. ಇಲ್ಲಿ ವೃಷಭ ರಾಶಿಯಲ್ಲಿ ಜನಿಸಿದವರ ಬಗ್ಗೆ ಈ ರಾಶಿಯಲ್ಲಿ ಜನಿಸಿದವರಿಗೆ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಆಗುವ ಬದಲಾವಣೆಗಳನ್ನು ಹೇಳಲಾಗಿದೆ. ಏನೆಲ್ಲಾ ಬದಲಾವಣೆಗಳು ಸಪ್ಟೆಂಬರ್ ತಿಂಗಳಿನಲ್ಲಿ ವೃಷಭ ರಾಶಿಯಲ್ಲಿ ಜನಿಸಿದ ಜನರಿಗೇ ಆಗಲಿದೆ ಎನ್ನುವುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ ನೋಡಿ.
ಶನಿದೇವರಿಗೆ ಹಿಂದೂ ಪಂಚಾಗದಲ್ಲಿ ಒಂದು ಮಹತ್ವದ ಸ್ಥಾನವನ್ನು ನೀಡಲಾಗಿದೆ. ಶನಿ ದೇವರು ವಕ್ರವಾಗಿ ರಾಶಿಯಲ್ಲಿ ಸಂಚರಿಸಲಿ ಇಲ್ಲವೇ ರಾಶಿಗೆ ಪ್ರವೇಶ ಮಾಡಲಿ ಅಥವಾ ರಾಶಿಯಿಂದ ಹೋರಹೋಗಲಿ ಇವೆಲ್ಲವು ಒಂದು ಮಹತ್ತರ ಘಟ್ಟ ಎಂದು ಕರೆಯಲಾಗುತ್ತದೆ. ಕರ್ಮ, ಸೇವೆ ಹಾಗೂ ವೃತ್ತಿಗಳ ಕಾರಕ ಎಂದು ಶನಿಯನ್ನು ಕರೆಯಲಾಗುತ್ತದೆ. ಹಾಗೆಯೆ ಶ್ರಮ ಹಾಗೂ ನ್ಯಾಯದ ದೇವರು ಎಂದು ಕೂಡಾ ಶನಿ ದೇವರನ್ನು ಕರೆಯಲಾಗುತ್ತದೆ. ವೃಷಭ ರಾಶಿಯಲ್ಲಿ ನೂರಾ ನಲವತ್ತೆರಡು ದಿನಗಳ ನಂತರದಲ್ಲಿ ಶನಿ ದೇವನು ತನ್ನ ಸ್ಥಾನ ಬದಲಿಸುತ್ತಿದ್ದಾನೆ. ಈ ಶನಿ ದೇವರ ಸ್ಥಾನ ಪಲ್ಲಟದಿಂದ ವೃಷಭ ರಾಶಿಯವರು ಇಷ್ಟು ದಿನ ಅನಿಭವಿಸಿದ ಕಷ್ಟಗಳೆಲ್ಲಾ ತೀರಲಿದೆ. ಈಗ ಶನಿದೇವನು ರಾಶಿ ಕುಂಡಲಿಯ ಒಂಭತ್ತನೆ ಮನೆಯಾದ ಭಾಗ್ಯದ ಮನೆಗೆ ಬರುತ್ತಿದ್ದಾನೆ. ಎಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತೆವೆಯೊ ಅಷ್ಟು ಫಲವನ್ನೂ ಶನಿ ದೇವ ನೀಡುತ್ತಾನೆ. ಶನಿ ದೇವನು ಒಂಬತ್ತು ಹಾಗೂ ಹತ್ತನೆ ಮನೆಯ ಮಾಲಿಕನಾಗಿದ್ದಾನೆ. ವೃಷಭ ರಾಶಿಯವರಿಗೆ ಶೂರತ್ವ, ಭಾಗ್ಯ ನೀಡುತ್ತಾನೆ. ವೃಷಭ ರಾಶಿಯಲ್ಲಿ ಜನಿಸಿದವರ ವೃತ್ತಿ ಜೀವನಕ್ಕೆ ಹೊಸ ಮಾರ್ಗವನ್ನು, ಅವಕಾಶವನ್ನು ತೋರುತ್ತಾನೆ. ಈ ಸಮಯದಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದ ಅಭಿವೃದ್ಧಿ ಮಾಡಿಕೊಳ್ಳಲು ಸರಿಯಾದ ಸಮಯವಾಗಿದೆ.
ರಾಜಯೋಗ ಬರುತ್ತಿದ್ದು, ಕೌಟುಂಬಿಕ ಶಾಂತಿ ದೊರೆಯಲಿದೆ. ಮನೆಯಲ್ಲಿ ಸಂತೋಷಗಳು ತುಂಬಲಿದೆ. ಇದು ಹೊಸ ನಿವೇಶನ ಕೊಳ್ಳುವವರಿಗೆ ಸರಿಯಾದ ಸಮಯ. ವೃತ್ತಿ ಜೀವನದಲ್ಲಿ ಬಡ್ತಿಯ ಜೊತೆಗೆ ಸಮ್ಮಾನಗಳು ಸಿಗಲಿವೆ. ಪರೀಕ್ಷೆ ಮಾಡಿ ಎಲ್ಲಾ ಸಮಸ್ಯೆಗಳನ್ನು ಶನಿದೇವ ನಿವಾರಿಸುವನು. ವೃಷಭ ರಾಶಿಯವರಿಗೆ ಭಾಗ್ಯದಿಂದ ಕೂಡಿದ ಈ ಸಮಯವನ್ನು ಶ್ರದ್ಧೆ ಹಾಗೂ ಶ್ರಮಗಳಿಂದ ಸರಿಯಾಗಿ ಬಳಸಿಕೊಳ್ಳುವುದು ಉತ್ತಮ. ಶನಿ ದೇವನು ಸವಾಲುಗಳ ಜೊತೆ ಸಣ್ಣ ಪುಟ್ಟ ತೊಂದರೆಗಳನ್ನಿ ನೀಡುತ್ತಾನೆ ಆದರೆ ಆ ಎಲ್ಲಾ ತೊಂದರೆಗಳನ್ನು ವೃಷಭ ರಾಶಿಯಲ್ಲಿ ಜನಿಸಿದ ಜನರು ಸರಿಯಾಗಿ ನಿಭಾಯಿಸುವರು. ವೃಷಭ ರಾಶಿಯವರ ಕಲೆಗಳು ಹೊರ ಜಗತ್ತಿಗೆ ಕಾಣ ಸಿಗುವುದು. ಅದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾನ್ಯತೆ ಪಡೆಯುವರು. ಶನಿ ದೇವನ ಕೃಪೆಯಿಂದ ಕೋರ್ಟ್ ಕಛೇರಿಗಳ ಕೆಲಸ ಕೈಗೂಡಲಿದೆ. ವ್ಯಾಪಾರ ಲಾಭದೊಂದಿಗೆ ಮುಂದುವರೆಯುತ್ತದೆ. ಧೈರ್ಯ ಹಾಗೂ ಚತುರತೆಯಿಂದ ಯಾವ ಕೆಲಸದಲ್ಲಾದರೂ ಜಯಗಳಿಸುವಿರಿ.
ವೃಷಭ ರಾಶಿಯವರು ವೃತ್ತಿ ಅಭಿವೃದ್ಧಿ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಕಾಣುತ್ತಾರೆ. ಸ್ವಂತ ವೃತ್ತಿಯ ನಿರೀಕ್ಷೆ ಇದ್ದಲ್ಲಿ ಸ್ವಲ್ಪ ವಿಳಂಬವಾದರೂ ಅಂದುಕೊಂಡಿರುವುದು ಆಗುವ ಸಾಧ್ಯತೆ ಇದೆ. ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಸಾಧ್ಯತೆ ಇದೆ. ಕುಟುಂಬದಿಂದಲೂ ಆರ್ಥಿಕ ಲಾಭ ಸಿಗುವುದರ ಜೊತೆಗೆ, ಕನಸುಗಳು ಈಡೇರುತ್ತವೆ. ಹಾಗೂ ಈಗಾಗಲೇ ಅರ್ಧಕ್ಕೆ ನಿಲ್ಲಿಸಿದ ಕೆಲಸಗಳು ಪೂರ್ಣ ಹೊಂದುವ ಸಾಧ್ಯತೆ ಇದ್ದು ಎಲ್ಲಾ ಕಾರ್ಯಗಳಲ್ಲಿ ಜಯ ಗಳಿಸುತ್ತಾರೆ. ಧಾರ್ಮಿಕ ಕ್ಷೇತ್ರಗಳ ದರ್ಶನದ ಭಾಗ್ಯ ದೊರೆಯಲಿದೆ. ಶನಿ ದೇವನು ವೃಷಭ ರಾಶಿಯವರ ಮೂರನೆ ಹಾಗೂ ಆರನೇ ಮನೆಗೂ ದೃಷ್ಟಿ ಹಾಕುವನು. ಇದರಿಂದಾಗಿ ವೃಷಭ ರಾಶಿಯವರಿಗೆ ಲಾಭವಾಗುವುದು. ಸೋದರ ಸಂಬಂಧ ಚೆನ್ನಾಗಿ ಇರುತ್ತದೆ. ಮಕ್ಕಳ ಕಡೆಯಿಂದ ಒಳ್ಳೆಯ ವಿಷಯಗಳು ತಿಳಿಯುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಸಂಗಾತಿಯ ಸಹಕಾರ, ಬೆಂಬಲಗಳು ಸಿಗಲಿದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ. ವೃಷಭ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡುವ ಸಂಭವ ಹೆಚ್ಚು ಹಾಗಾಗಿ ಇದರಿಂದ ಧನ ವ್ಯಯವಾಗುವ ಸಂಭವ ಇದೆ. ತಂದೆ ಹಾಗೂ ಶತ್ರುಗಳಿಂದ ಸಮಸ್ಯೆ ಬರುವ ಸಾಧ್ಯತೆ ಇದೆ. ವೃಷಭ ರಾಶಿಯವರು ಅಹಂಕಾರದಿಂದಾಗಲಿ ಅಥವಾ ಅವಸರದಲ್ಲಿ ಯಾವ ಕೆಲಸಕ್ಕೂ ಕೈ ಹಾಕದಿದ್ದರೆ ಒಳಿತು. ಇವೆಲ್ಲವೂ ವೃಷಭ ರಾಶಿಯವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಆಗುವ ಬದಲಾವಣೆಗಳಾಗಿವೆ.