ಎಲ್ಲರಿಗೂ ಜನ್ಮಕುಂಡಲಿ ಅಂದರೆ ಜಾತಕ ಮಗು ಹುಟ್ಟಿದ ಘಳಿಗೆಯ ಮೇಲೆ ಮಾಡಿರುತ್ತಾರೆ. ಹೀಗೆ ಮಾಡಿದ ಜಾತಕದಲ್ಲಿ ರಾಶಿ, ನಕ್ಷತ್ರ, ಯೋಗ, ಮುಂತಾದ ವಿವಿಧ ಭಾಗಗಳು ಇರುತ್ತದೆ. ಜನ್ಮ ಕುಂಡಲಿಯ ಪ್ರತಿಯೊಂದು ಅಂಶಗಳು ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಹನ್ನೆರಡು ರಾಶಿಗಳಲ್ಲಿ ಒಂದಾದ ಮಿಥುನ ರಾಶಿಯವರ ಭವಿಷ್ಯ ಅಕ್ಟೋಬರ್ 2020 ರಲ್ಲಿ ಹೇಗಿದೆ? ಏನಾಗುತ್ತದೆ ಎಂದು ಇಲ್ಲಿರುವ ಮಾಹಿತಿಯ ಮೂಲಕ ತಿಳಿಯೋಣ.

ಮಿಥುನ ರಾಶಿಯವರ ಜನ್ಮದಲ್ಲಿ ಇಲ್ಲಿಯವರೆಗೂ ರಾಹು ಸ್ಥಿತನಾಗಿದ್ದನು. ಸೆಪ್ಟೆಂಬರ್ ಇಪ್ಪತ್ಮೂರರಿಂದ ವೃಷಭಸ್ಥಿತನಾಗಿ ವಕ್ರನಾಗುತ್ತಾನೆ. ಮಿಥುನ ರಾಶಿಯವರ ರಾಶಿಯ ಅಧಿಕಾರಿ ಎನಿಸಿಕೊಂಡ ಬುಧ ಪಂಚಮ ಕ್ಷೇತ್ರಕ್ಕೆ ನೆಲೆಸಿದ್ದಾನೆ. ಹೀಗೆ ನೆಲೆಸಿದ ಬುಧನನ್ನು ಮಿಥುನ ರಾಶಿಯ ಪರಮಶಿವ ಎನಿಸಿಕೊಂಡ ಗುರು ಸಪ್ತಮ ಭಾವದಿಂದ ನೋಡುತ್ತಿದ್ದಾನೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಸ್ನಾಯು ಸೆಳೆತ, ಬೆನ್ನು ಮೂಳೆ ನೋವು ಹಾಗೂ ವ್ಯಾದಿ ಇವು ಬಿಟ್ಟರೆ ಆರೋಗ್ಯದಲ್ಲಿ ಗೊಂದಲ ಇರುವುದಿಲ್ಲ. ಇದಕ್ಕಾಗಿ ಮಿಥುನ ರಾಶಿಯವರು ಸುಬ್ರಹ್ಮಣ್ಯ ಸ್ವಾಮಿ ಪೂಜೆ, ಸ್ತುತಿ ಮಾಡಿದರೆ ಒಳ್ಳೆಯದು. ರಾಹು ಬದಲಾದ ಸಂದರ್ಭದಲ್ಲಿ ವಿಥುನ ರಾಶಿಯವರ ಮಾನಸಿಕ ಸ್ಥಿತಿ ಸುಧಾರಿಸಿ ನಿರಾಳಭಾವ ತಾಳುತ್ತಾರೆ. ರಾಶಿಯ ಅಧಿಪತಿ ಬಲಿಷ್ಠನಾಗಿದ್ದಾನೆ. ಹಾಗೂ ಪರಮಶಿವ ಎನಿಸಿಕೊಂಡ ಗುರುವಿನ ದೃಷ್ಟಿಯ ಪರಿಣಾಮ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ. ಕೋಪಗಳು ಕಡಿಮೆಯಾಗುತ್ತದೆ ರಾಹುವಿನ ಸ್ಥಾನ ಬದಲಾವಣೆಯಿಂದ. ಧನ, ದಾಂಪತ್ಯ ಬಂಧು ಅಂದು ದ್ವಿತೀಯ ಭಾಗವನ್ನು ಕರೆಯುತ್ತೇವೆ. ಮಿಥುನ ರಾಶಿಯವರ ದ್ವಿತೀಯ ಭಾವದಲ್ಲಿ ಚಂದ್ರನು ಏಕಾದಶ ಭಾವದಿಂದ ನೋಡುತ್ತಿದ್ದಾನೆ. ಇದರೊಂದಿಗೆ ಅಷ್ಟಮ ದೃಷ್ಟಿಯಿಂದ ಶನಿಯು ವಿಕ್ಷಣೆ ಮಾಡುತ್ತಿರುವುದರಿಂದ ಸಂಸಾರದಲ್ಲಿ ಸಣ್ಣ ಪ್ರಮಾಣದ ಕಿರಿಕಿರಿಯನ್ನು ಉಂಟುಮಾಡಬಹುದು. ಕುಜನು ಬಲಿಷ್ಠವಿಲ್ಲದ ಕಾರಣ ಮಿಥುನ ರಾಶಿಯವರು ಉಂಟಾಗುವ ನಿಷ್ಠೂರವನ್ನು ತಾಳ್ಮೆಯಿಂದ ಬಗೆಹರಿಸಲು ನೋಡಬೇಕು.

ದ್ವಿತೀಯ ಭಾವದಲ್ಲಿ ಚಂದ್ರ ಹಾಗೂ ಗುರು ಬಲ ಇರುವುದರಿಂದ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಮಿಥುನ ರಾಶಿಯವರ ಮನೆಯಲ್ಲಿ ಹಿರಿಯರು ಇದ್ದರೆ ಹೆಚ್ಚಾಗಿ ಅಜ್ಜ ಹೀಗೆ ಅವರ ಸೇವೆ ಮಾಡುವ ಅವಕಾಶದ ಯೋಗ ಸಿಗಬಹುದಾಗಿದೆ. ತ್ರತೀಯ ಭಾವದಲ್ಲಿ ಸೂರ್ಯ ಇರುವುದರಿಂದ, ಗುರುವಿನ ದೃಷ್ಟಿ ಇರುವಿದರಿಂದ ಸಹೋದರ ಸಂಬಂಧಿ ಪ್ರೀತಿ, ನಂಬಿಕೆಗಳು ಹೆಚ್ಚಾಗುತ್ತವೆ. ಮೂರನೆ ಭಾವ ಪರಾಕ್ರಮದ ಹೆಸರಾಗಿದ್ದು ಕೋರ್ಟ್ ಕಛೇರಿ ಕೆಲಸಗಳು ಮುಗಿಯುತ್ತವೆ. ಇನ್ನೂ ನಾಲ್ಕನೆಯ ಭಾವದಲ್ಲಿ ಬುಧನು ಪಂಚಮ ಭಾವದಲ್ಲಿದ್ದಾನೆ. ಹಾಗಾಗಿ ಯಾವುದೇ ಕೆಟ್ಟ ಫಲವಿಲ್ಲ. ವಾಹನ ಖರೀದಿ ಹಾಗೂ ಪ್ರಾಪರ್ಟಿ ಖರೀದಿ ಮಾಡಬಹುದು. ಶನಿ ಹಾನಿಕಾರಕ ಇಲ್ಲದೆ ಇದ್ದರೂ ಅವನನ್ನು ಪೂಜಿಸುವುದು ಹಾಗೂ ಶನಿವಾರ ಅವನ ದರ್ಶನ ಮಾಡುವುದು ಒಳ್ಳೆಯದು. ಹಾಗೆ ಐದನೆ ಭಾವದಲ್ಲಿ ಬುಧ ಇದ್ದರೆ. ಈ ಪಂಚಮ ಸ್ಥಾನವನ್ನು ಕುಜ ಹಾಗೂ ಶನಿ ನೋಡುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವವರಿಗೆ ಹೆಚ್ಚಾಗಿ ಟೆಕ್ನಿಕಲ್ ಅನ್ನು ಕಲಿಯುತ್ತಿರುವ ವಿಧ್ಯಾರ್ಥಿಗಳಿಗೆ ಉತ್ತಮವಾದ ಕಾಲ. ಸಂತಾನ ಪ್ರಾಪ್ತಿಗೆ ಇದು ಸಕಾಲವಾಗಿದೆ. ಪದವಿ ಪೂರ್ವ ಪುಣ್ಯ ಎಂದು ಐದನೆ ಭಾವವನ್ನು ಕರೆಯಲಾಗುತ್ತದೆ. ಋಣ, ರೋಗ, ಶತ್ರು ಸ್ಥಾನ ಎಂದು ಆರನೆಯ ಭಾವವನ್ನು ಕರೆಯಲಾಗುತ್ತದೆ. ಕುಜನು ಎಂಟನೆ ದೃಷ್ಟಿಯಿಂದ ಷಷ್ಠಿ ಭಾಗವನ್ನು ನೋಡಿದಾಗ ಶತ್ರುಗಳು ನಾಶವಾಗುತ್ತಾರೆ ಎನ್ನಲಾಗುತ್ತದೆ. ಹಾಗೂ ಕೆಡುಕು ಮಾಡುವವರ ಸುಳಿದಾಟ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಕುಜನು ಯಾವುದೇ ರೋಗಗಳು ಭಾದಿಸಿದರು ಬೇಗನೆ ಗುಣಪಡಿಸುವ ಶಕ್ತಿ ಹೊಂದಿದ್ದಾನೆ.

ವಿವಾಹ ವಿಚಾರಗಳು ಸಪ್ತಮ ಭಾವದಲ್ಲಿ ಇರುತ್ತದೆ. ಸಪ್ತಮ ಭಾವದಲ್ಲಿ ಗುರು ಇದ್ದಾನೆ. ಅವನು ಕೆಟ್ಟದ್ದನ್ನು ಹರಡುತ್ತಾನೆ ಎನ್ನಲಾಗುತ್ತದೆ. ಗುರುವಿನ ರುಜುಗತಿಯ ವಕ್ರ ಸಂಚಾರ ದೊಡ್ಡ ಸಮಸ್ಯೆಗೆ ಕಾರಣವಾಗಬಲ್ಲದು. ಕೊವಿಡ್ -19 ಇದು ಕೋಡ ಗುರುವಿನ ವಕ್ರ ಸಂಚಾರದ ಪ್ರಭಾವವೇ ಎಂದರೆ ಅತಿಶಯವಿಲ್ಲ. ನವೆಂಬರ್ 20 ರ ವೆರೆಗೆ ಗುರು ಬಲ ಇರುವುದರಿಂದ ನಿಶ್ಚಯವಾದ ಮದುವೆಗೆ ಹಾಗೂ ನಿಶ್ಚಿತಾರ್ಥವನ್ನು ನಡೆಸಲು ಅಡಚಣೆಯಿಲ್ಲ. ಆಯುಷ್ಯಕಾರಕ, ಕರ್ಮಕಾರಕನಾದ ಶನಿಯು ಅಷ್ಟಮದಲ್ಲಿ ಇದ್ದಾನೆ. ಇದರಿಂದ ಉದ್ಯೋಗದಲ್ಲಿ ಆಸಕ್ತಿ ಕಡಿಮೆಯಾಗಬಹುದು, ಅಲಕ್ಷ್ಯ ಉಂಟಾಗಬಹುದು ಆದರೂ ಶ್ರದ್ಧೆಯನ್ನು ಉಪಯೋಗಿಸಿ ಕೆಲಸ ಮಾಡಬೇಕು. ಭ್ಯಾಗ್ಯ ಸ್ಥಾನ ಎಂದು ಹೆಸರಾದ ಒಂಭತ್ತನೆಯ ಸ್ಥಾನದ ಅಧಿಪತಿಯು ಶನಿಯೆ ಆಗಿದ್ದಾನೆ. ಶುಕ್ರ ಒಂಭತ್ತನೆಯ ಮನೆಯ ವಿಕ್ಷಣೆ ಮಾಡುತ್ತಿದ್ದಾನೆ. ಸೂರ್ಯ ಪಿತೃಕಾರಕ ಆಗಿದ್ದಾನೆ. ಪಿತೃಗಳಿಗೆ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆ ಆಗಬಹುದು ಬೇಗ ಗುಣಮುಖರಾಗುತ್ತಾರೆ. ಪಿತೃಗಳ ಆಸ್ತಿಯ ವಿಚಾರಕ್ಕೆ ಕೈ ಹಾಕದೆ ಇರಬಹುದು. ಕೆಲಸದ ಬಗೆಗೆ ಅಲಕ್ಷ್ಯ ಒಳ್ಳೆಯದಲ್ಲ. ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಬೇಕು. ಏಕಾದಶ ಭಾವದಲ್ಲಿ ಕುಜನಿದ್ದಾನೆ ಹಾಗೂ ಗುರು ಹಾಗೂ ಬುಧ ವಿಕ್ಷಣೆ ಮಾಡುತ್ತಿದ್ದಾರೆ. ಲಾಭ, ಐಶ್ವರ್ಯಕ್ಕೆ ಯಾವುದೆ ತೊಂದರೆ ಇಲ್ಲ. ಹಣದೆ ಬರದೆ ಇದ್ದಿದ್ದು ಕೂಡ ತಿರುಗಿ ಬರುತ್ತದೆ. ವ್ಯಯಭಾವದಲ್ಲಿ ರಾಹು ಇದ್ದಾನೆ. ಹಿರಿಯರ ಅನಾರೋಗ್ಯದಿಂದ ಖರ್ಚು ವೆಚ್ಚ ಉಂಟಾಗುವ ಸಂಭವ ಇರುತ್ತದೆ. ಕೆಟ್ಟ ವಾರ್ತೆಗಳು ಬರುವ ಸಂಭವ ಇರುತ್ತದೆ. ಹಣ ಬೇಕೆಂದು ಅಪರಿಚಿತರಿಂದ ಬೇಡಿಕೆ ಬಂದಲ್ಲಿ ಕೊಡದೆ ಇದ್ದರೇ ಒಳ್ಳೆಯದು. ಹದಿನೆಂಟು ತಿಂಗಳು ಎಚ್ಚರಿಕೆಯಿಂದ ಇರುವುದು ಮಿಥುನ ರಾಶಿಯವರಿಗೆ ತುಂಬಾ ಒಳ್ಳೆಯದು.

ಇವುಗಳು ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಇರುವ ಶುಭ ಹಾಗೂ ಅಶುಭ ಫಲಗಳು. ಎಲ್ಲಾ ಒಳ್ಳೆಯ ಫಲಗಳೆ ಇದ್ದರೂ ಕೆಲವೊಂದು ವಿಷಯಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಕೊಟ್ಟು ಕೈ ಸುಟ್ಟುಕೊಂಡೆ ಎನ್ನುವುದಕ್ಕಿಂತ ಜಾಗೃತೆ ವಹಿಸುವುದು ಒಳ್ಳೆಯದಾಗಿದೆ.

Leave a Reply

Your email address will not be published. Required fields are marked *