ಈಗಿನ ಕಾಲದಲ್ಲಿ ಹೊಸ ಕಾರನ್ನು ಖರೀದಿಸಲು ಸಾಕಷ್ಟು ಹಣ ಬೇಕಾಗುತ್ತದೆ ಹೀಗಾಗಿ ಬಹಳಷ್ಟು ಜನರು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಖರೀದಿಸಬಾರದು. ಹಾಗಾದರೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ ಯಾವ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಕಾರನ್ನು ಖರೀದಿಸುವುದು ಅಷ್ಟು ಸುಲಭವಲ್ಲ ಅದೇ ರೀತಿ ಕಾರನ್ನು ಮಾರುವುದು ಕೂಡಾ ಸುಲಭವಲ್ಲ. ಕಾರನ್ನು ಮಾರುವಾಗ ಖರೀದಿ ಮಾಡುವವರು ಡಾಕ್ಯುಮೆಂಟೇಷನ್ ಅವರ ಹೆಸರಿಗೆ ಟ್ರಾನ್ಸಫರ್ ಮಾಡಿಕೊಳ್ಳುತ್ತಾರೋ ಇಲ್ಲವೋ, ನಿರೀಕ್ಷೆ ಮಾಡಿದಷ್ಟು ಹಣ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಕಾಡುತ್ತದೆ. ಹಾಗೆಯೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗಲೂ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ ಆ ಕಾರಿನ ಬಗ್ಗೆ ಗೊತ್ತಿರುವವರ ಹತ್ತಿರ ತಿಳಿದುಕೊಳ್ಳಬೇಕು ಅಥವಾ ನಂಬಿಕೆ ಇರುವ ಮೆಕ್ಯಾನಿಕಲ್ ಹತ್ತಿರ ಕೇಳಿ ತಿಳಿದುಕೊಳ್ಳಬೇಕು. ಆ ಕಾರಿನ ಬಗ್ಗೆ ಎಷ್ಟು ಚೆನ್ನಾಗಿ ತಿಳಿದುಕೊಳ್ಳುತ್ತೀರೊ ಅಷ್ಟು ಒಳ್ಳೆಯದು. ಬ್ಯಾಟರಿ ಲಿಕೇಜ್ ಸಾಮಾನ್ಯವಾಗಿ ಸೆಕೆಂಡ್ ಹ್ಯಾಂಡ್ ಕಾರು ಗಳಲ್ಲಿ ಕಂಡು ಬರುವ ಸಮಸ್ಯೆಯಾಗಿದೆ ಆದ್ದರಿಂದ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ ಆ ಕಾರಿನ ಬ್ಯಾಟರಿಯನ್ನು ಚೆಕ್ ಮಾಡಿಕೊಳ್ಳಬೇಕು. ಹೊಸದಾಗಿ ಬ್ಯಾಟರಿ ಹಾಕಿಸಲು ಐದರಿಂದ ಆರು ಸಾವಿರ ರೂಪಾಯಿ ಹಣ ಖರ್ಚಾಗುತ್ತದೆ. ಬ್ಯಾಟರಿ ಲಿಕೇಜ್ ಕಂಡುಹಿಡಿಯುವುದು ಸುಲಭವಾಗಿದೆ. ಬ್ಯಾಟರಿ ಲಿಕೇಜ್ ಚೆಕ್ ಮಾಡುವುದು ತುಂಬಾ ಮುಖ್ಯವಾಗಿದೆ.

ಕೆಲವು ಸೆಕೆಂಡ್ ಹ್ಯಾಂಡ್ ಗಾಡಿಗಳಲ್ಲಿ ಇಂಜಿನ್ ಸಮಸ್ಯೆ ಇರುತ್ತದೆ. ಸರಿಯಾಗಿ ಮೆಂಟೇನ್ ಮಾಡದೆ ಇದ್ದಾಗ ಆ ಗಾಡಿಯಲ್ಲಿ ಇಂಜಿನ್ ಸಮಸ್ಯೆ ಕಂಡುಬರುತ್ತದೆ. ಇಂಜಿನ್ ಸಮಸ್ಯೆಯ ಬಗ್ಗೆ ಗಾಡಿ ನಿಂತಿರುವಾಗ ಕಂಡುಹಿಡಿಯಲು ಸಾಧ್ಯವಿಲ್ಲ ಹೈವೆಗಳಲ್ಲಿ ಡ್ರೈವ್ ಮಾಡಿ ಕಂಡುಹಿಡಿಯಬಹುದು. ಕೆಲವು ಗಾಡಿಗಳಲ್ಲಿ ಎಸಿ ಸಮಸ್ಯೆ ಕಂಡುಬರುತ್ತದೆ ಎಸಿ ಸಮಸ್ಯೆಗೆ ಶೋರೂಮ್ ಗಳಲ್ಲಿ ಸರಿ ಮಾಡಿಕೊಡುತ್ತಾರೆ. ಎಸಿ ಪೈಪ್ ಗಳಲ್ಲಿ ಹೆಚ್ಚು ಸಮಸ್ಯೆ ಕಂಡುಬರುತ್ತದೆ ಕೆಲವೊಮ್ಮೆ ಶೋರೂಮ್ ಗಳಲ್ಲಿ ಕಂಪ್ರೆಸರ್, ಎಸಿ ಸೆಟಪ್ ಹೋಗಿದೆ ಎಂದು ಹೇಳುತ್ತಾರೆ ಆದರೆ ಯಾವುದೆ ಗಾಡಿಯಲ್ಲಿ ಕಂಪ್ರೆಸರ್ ಸುಲಭವಾಗಿ ಹೋಗುವುದಿಲ್ಲ. ಒಂದು ವೇಳೆ ಕಂಪ್ರೆಸರ್ ಹಾಳಾಗಿದ್ದರೆ 15 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ, ಎಸಿ ಸೆಟಪ್ ಪೂರ್ತಿ ಹಾಳಾದರೆ 35,000 ರೂಪಾಯಿ ಖರ್ಚಿಗೆ ಬರುತ್ತದೆ ಹೀಗಾಗಿ ಎಸಿ ಬಗ್ಗೆ ಸರಿಯಾಗಿ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವಾಗ ಟೈರ್ ಬಗ್ಗೆ ಗಮನಹರಿಸಬೇಕು. ಒಂದು ಟೈರ್ ಖರೀದಿಸಬೇಕಾದರೆ 3,000 ರೂಪಾಯಿ ಖರ್ಚಾಗುತ್ತದೆ.

ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಪವರ್ ಸ್ಟೇರಿಂಗ್ ಲಿಕೇಜ್ ಅನ್ನು ಚೆಕ್ ಮಾಡಬೇಕು. ಇದು ಕೆಲವರಿಗೆ ಮಾಡುವುದು ಸುಲಭ ಕೆಲವರಿಗೆ ಇದರ ಬಗ್ಗೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಪವರ್ ಸ್ಟೇರಿಂಗ್ ಲಿಕೇಜ್ ಬಂದರೆ 6,000 ರೂಪಾಯಿಯಿಂದ 15,000 ರೂಪಾಯಿ ಖರ್ಚಾಗುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಕ್ಲಚ್ ಪ್ಲೇಟ್ ಬಗ್ಗೆ ಗಮನಹರಿಸಬೇಕು. ಕ್ಲಚ್ ಪ್ಲೇಟ್ ಹಾಳಾದರೆ ಗಾಡಿಯನ್ನು ಮೂವ್ ಮಾಡಲು ಬರುವುದಿಲ್ಲ. ಬ್ರೇಕ್ ಬಗ್ಗೆಯೂ ಗಮನಹರಿಸುವುದು ಒಳ್ಳೆಯದು. ಆಟೋಮೆಟಿಕ್ ಸೆಕೆಂಡ್ ಹ್ಯಾಂಡ್ ಕಾರುಗಳಲ್ಲಿ ಗೇರ್ ಶಿಫ್ಟಿಂಗ್ ಸಮಸ್ಯೆ ಬಂದರೆ ದೊಡ್ಡಮಟ್ಟದ ಖರ್ಚಾಗುತ್ತದೆ ಹೀಗಾಗಿ ಆಟೋಮೆಟಿಕ್ ಕಾರುಗಳನ್ನು ಖರೀದಿಸುವಾಗ ಗೇರ್ ಶಿಫ್ಟಿಂಗ್ ಬಗ್ಗೆ ಗಮನಹರಿಸಬೇಕು. ನೀವು ಖರೀದಿಸುವ ಸೆಕೆಂಡ್ ಹ್ಯಾಂಡ್ ಕಾರಿನ ಇಂಟೀರಿಯರ್ ಬಗ್ಗೆ ಗಮನಹರಿಸುವುದು ಒಳ್ಳೆಯದು. ಕೆಲವೊಮ್ಮೆ ಬಹಳ ವರ್ಷಗಳವರೆಗೆ ಯೂಸ್ ಮಾಡಿದ ಕಾರಾದರೆ ಇಂಟೀರಿಯರ್ ಬ್ಲರ್ ಆಗುತ್ತದೆ ಆಗ ಸುಂದರವಾಗಿ ಕಾಣಿಸುವುದಿಲ್ಲ. ಬಾಡಿ ಲೈನ್ ಹಾಗೂ ಪೇಂಟಿಂಗ್ ಬಗ್ಗೆಯೂ ಗಮನಹರಿಸಬೇಕು. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬೇಕು. ಈ ಮಾಹಿತಿ ಉಪಯುಕ್ತವಾಗಿದ್ದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವವರಿಗೆ ತಪ್ಪದೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!