ಕರ್ನಾಟಕ ರಾಜ್ಯ ಸರ್ಕಾರದಿಂದ ಪಂಚಾಯತ್ ರಾಜ್ ವಿಭಾಗದಲ್ಲಿ ಖಾಲಿ ಇರುವಂತಹ SDA, FDA, ಟ್ರೆನೋಗ್ರಾಫರ್ಸ್ ಮುಂತಾದ ಹುದ್ದೆಗಳಿಗೆ ಸಂಬಂಧಿಸಿ ವೃನ್ದಾ ಮತ್ತು ನೇಮಕಾತಿ ವಿಷಯಕ್ಕೆ ಸಂಬಂಧಿಸಿ ನಿಯಮ ಅಧಿಸೂಚನೆಗಳನ್ನ ರೂಪಿಸಿ ಅದಕ್ಕೊಂದು ಕರಡನ್ನು ಹೊರಡಿಸಿದೆ. ಅದರ ಬಗ್ಗೆ ಆಸಕ್ತಿ ಇರುವವರು ಈ ಲೇಖನವನ್ನ ಪೂರ್ತಿಯಾಗಿ ಓದಿ.
ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ ೧೮/5/2020 ರಂದು ಈ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಪಂಚಾಯತ್ ರಾಜ್ ವಿಭಾಗದ ವೃಂದ ಮತ್ತು ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳು 2019ನ್ನು ರೂಪಿಸಿದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ. 15 ದಿನಗಳ ಒಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರವನ್ನು ನೋಡುವುದಾದರೆ, ಕೆಲವು ಹುದ್ದೆಗಳು ನೇರ ನೇಮಕಾತಿಯ ಮೂಲಕವೂ, ಕೆಲವು ಹುದ್ದೆಗಳು ಪ್ರಮೋಷನ್ ಮೂಲಕವೂ ಇನ್ನು ಕೆಲವು ಹುದ್ದೆಗಳು ನಿಯೋಜನೆಯ ಮೂಲಕವೂ ಆಗತ್ತೆ. ಇದರಲ್ಲಿ ಈಗ ನೇರ ನೇಮಕಾತಿಯ ಮೂಲಕ ಆಗುವ ಹುದ್ದೆಗಳನ್ನ ಮೊದಲು ನೋಡೋಣ.
ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆ ಒಟ್ಟು 763 ಹುದ್ದೆ ಖಾಲಿ ಇದೆ. ಈ ಹುದ್ದೆಯನ್ನ ನಿಯೋಜನೆಯ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ FDA ಗೆ ಸಂಬಂಧಿಸಿ, ಪ್ರಥಮ ದರ್ಜೆ ಸಹಾಯಕರ ಹುದ್ದೆ 724 ಇದೇ. ಇವರಿಗೆ 27,650 ₹ ಇಂದ ವೇತನ ಆರಂಭ ಆಗತ್ತೆ. 75% ರಷ್ಟು ಹುದ್ದೆಗಳು ನೇರ ನೇಮಕಾತಿ ಆಗುತ್ತವೆ. ನಂತರ ಶೀಘ್ರ ಲಿಪಿಗಾರಗು ಎಂಬ ಹುದ್ದೆ 413 ಹುದ್ದೆಗಳು ಖಾಲಿ ಇವೆ. ಇವರಿಗೂ ಸಹ ವೇತನ 27,650 ₹ ಇರತ್ತೆ. 415 ಹುದ್ದೆಗಳಲ್ಲಿ 75 ರಷ್ಟು ಹುದ್ದೆಗಳು ನೇರ ನೇಮಕಾತಿ ಆಗುತ್ತವೆ.
ಇನ್ನು ದ್ವೀತೀಯ ದರ್ಜೆಯ ಸಹಾಯಕ ಹುದ್ದೆಗಳು 903 ಹುದ್ದೆಗಳು ಇವೆ 21,400 ಇವರ ವೇತನ ಇರತ್ತೆ. ಇಲ್ಲಿಯೂ ಸಹ ನೇರ ನೇಮಕಾತಿ ಇರತ್ತೆ. ವರ್ಗಾವಣೆ ಅಥವಾ ಮುಂಬಡ್ತಿಯ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಕರೆದು ಹೊಸಬರಿಂದ %75ರಷ್ಟು ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ. ಇನ್ನು ಬೆರಳಚ್ಚುಗಾರರ ಹುದ್ದೆಗಳು ಈ ಹುದ್ದೆಗಳು 730 ಹುದ್ದೆಗಳು ಇದ್ದು ಇವರಿಗೆ ವೇತನ 21,400₹ ನೀಡಲಾಗುತ್ತದೆ. ಇದರಲ್ಲಿ 730 ಹುದ್ದೆಗಳಿಗೂ ಹಿಸಬರಿಗೆ ಅವಕಾಶ ನೀಡಿ ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುತ್ತಾರೆ.
ವಾಹನ ಚಾಲಕರ ಹುದ್ದೆಗಳು 523 ಹುದ್ದೆಗಳು ಇವೇ. ಇವರಿಗೂ ಸಹ ₹ 21,400 ವೇತನ ಇರತ್ತೆ. ಇವರಿಗೆ ಪಿ ಯು ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು . ದಲಾಯತ್ /ಪ್ಯೂನ್ . ಈ ಹುದ್ದೆಗಳು 1 213 ಹುದ್ದೆಗಳು ಇವೆ. ಇವರನ್ನು ಸಹ ನೇರ ನೇಮಕಾತಿಯ ಮೂಲಕ ತುಂಬಿಕೊಳ್ಳುಯುತ್ತಾರೆ ಇವರಿಗೆ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲೂ ತೇರ್ಗಡೆ ಹೊಂದಿರಬೇಕು . ಹಾಗೂ ಇವರ ವೇತನ ₹ 17,000 ವೇತನ ಇರತ್ತೆ.
ಈ ವೆಬ್ಸೈಟ್ ನ ಹೋಮ್ ಪೇಜ್ ನಲ್ಲಿ ಸ್ವಲ್ಪ ಕೆಳಗೆ ಜಾಬ್ ನೋಟಿಫಿಕೇಶನ್ಸ್ ಅಂತ ಬರತ್ತೆ ಅಲ್ಲೇ ಕ್ಲಿಕ್ ಮಾಡಿದ್ರೆ Panchayata Raaj Recuritment – 2020 – SDA , FDA, Dalayat, stenografar, Driver etc. ಅಲ್ಲೇ ಪಕ್ಕದಲ್ಲಿ ಕಂಟಿನ್ಯು ರೀಡಿಂಗ್ ಮೇಲೆ ಕ್ಲಿಕ್ ಮಾಡಿದ್ರೆ ಸಂಪೂರ್ಣ ಸಮಗ್ರ ಮಾಹಿತಿ ಸಿಗತ್ತೆ.
ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವಂತಹ ಹಲವಾರು ನೇರ ನೇಮಕಾತಿಗಳು ಶೀಘ್ರವೇ ಆರಂಭ ಆಗಲಿದ್ದು , ಈ ನೇಮಕಾತಿಯನ್ನ ಕರ್ನಾಟಕ ಲೋಕ ಸೇವಾ ಆಯೋಗವೇ ಮೆರವಾಗಿ ನೇಮಕ ಮಾಡತ್ತೇ. ಈಗಾಗಲೇ 105 ದಿನಗಳ ಕಾಲಾವಕಾಶ ಇದೆ ಈ 15 ದಿನಗಳಲ್ಲಿ ಯಾರಾದರೂ ಆಕ್ಷೇಪಣೆ, ಸಲಹೆಗಳನ್ನ ಸಲ್ಲಿಸುವುದಾದರೆ ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಅಭಿವ್ರದ್ಧಿ ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರ್ಕಾರ ಬಹು ಮಹಡಿಗಳ ಕಟ್ಟಡ ಬೆಂಗಳೂರು ೫೬೦೦೦೧ ಈ ವಿಳಾಸಕ್ಕೆ ಕಳುಹಿಸಿಕೊಡಬಹುದು.