SBI recruitment 2023: ಬ್ಯಾಂಕಿಂಗ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳಬೇಕು ಎಂದುಕೊಂಡಿರುವವರಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಪದವೀಧರರಾಗಿದ್ದು, ಬ್ಯಾಂಕಿಂಗ್ ಕೆರಿಯರ್ ಬಯಸುತ್ತಿರುವವರಿಗೆ ಕ್ಲೆರಿಕಲ್ ಕೇಡರ್ ನಲ್ಲಿ ಜೂನಿಯರ್ ಅಸೋಸಿಯೇಟ್ ಹುದ್ದೆಗಳು ಖಾಲಿ ಇದ್ದು, 8,283 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವ ದಿನಾಂಕ ನವೆಂಬರ್ 17ರಿಂದ ಡಿಸೆಂಬರ್ 7ರ ವರೆಗು ಇರಲಿದ್ದು, ಇಷ್ಟು ದಿನಗಳ ಒಳಗೆ ಅರ್ಜಿ ಸಲ್ಲಿಸಿ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ವಿದ್ಯಾರ್ಹತೆ :-ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಮುಗಿಸಿರಬೇಕು ಅಥವಾ ಇಂಟೆಗ್ರೇಟೆಡ್ ಡಬಲ್ ಡಿಗ್ರಿ ಮುಗಿಸಿರಬೇಕು. 2023ರ ಡಿಸೆಂಬರ್ 30ರ ಒಳಗೆ ಡಿಗ್ರಿ ಕೋರ್ಸ್ ಮುಗಿಸಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ :– SBI ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವವರ ಕನಿಷ್ಟ ವಯಸ್ಸು 20, ಗರಿಷ್ಠ ವಯಸ್ಸು 28 ಆಗಿದೆ. SBI ನಲ್ಲಿ ಆರೆಂಟಿಸ್ಶಿಪ್ ಪೂರ್ತಿ ಮಾಡಿರುವವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ :– ಇದರ ಬಗ್ಗೆ ಹೇಳುವುದಾದರೆ, ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಇಎಸ್‌ಎಂ/ಡಿಇಎಸ್‌ಎಂ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ. ಜನರಲ್‌, ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳು 750 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ :– ಆನ್ಲೈನ್ ಎಕ್ಸಾಂ ಇರುತ್ತದೆ, ಸ್ಥಳೀಯ ಭಾಷೆ ಪರೀಕ್ಷೆ ಕೂಡ ಇರುತ್ತದೆ. ಪ್ರಿಲಿಮ್ಸ್ ಎಕ್ಸಾಂ 100 ಅಂಕಗಳಿಗೆ ಇರುತ್ತದೆ, ಇದು 1 ಗಂಟೆ ಅವಧಿಯ ಎಕ್ಸಾಂ ಆಗಿರುತ್ತದೆ. ಇಂಗ್ಲಿಷ್ ಭಾಷೆ, ನ್ಯೂಮರಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಎಬಿಲಿಟಿ ಮೂರು ವಿಭಾಗದಲ್ಲಿ ಎಕ್ಸಾಂ ಇರುತ್ತದೆ. ಪ್ರಿಲಿಮ್ ಎಕ್ಸಾಂ 2024ರ ಫೆಬ್ರವರಿಯಲ್ಲಿ ನಡೆಯಲಿದೆ. ಈ ಎಕ್ಸಾಂ ನಲ್ಲಿ ಆಯ್ಕೆ ಆದವರಿಗೆ ಸಿಗಬಹುದಾದ ತಿಂಗಳ ಸಂಬಳ ₹17,900 ರಿಂದ ₹19,900 ರೂಪಾಯಿ ಆಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ..
ಅರ್ಜಿ ಸಲ್ಲಿಸಲು ಈ https://bank.sbi/web/careers/Current-openings ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ
ಇಲ್ಲಿ ನಿಮ್ಮ ಇಮೇಲ್ ಐಡಿ, ಹೆಸರು, ಫೋನ್ ನಂಬರ್ ಇದೆಲ್ಲವನ್ನು ಫಿಲ್ ಮಾಡಿ
ಲಾಗಿನ್ ಮಾಡಿ ಅಪ್ಲಿಕೇಶನ್ ಫಿಲ್ ಮಾಡಿ
ಬೇಕಿರುವ ಡಾಕ್ಯುಮೆಂಟ್ ಮತ್ತು ಫೋಟೋಸ್ ಗಳನ್ನು ಅಪ್ಲೋಡ್ ಮಾಡಿ
ಅರ್ಜಿ ಶುಲ್ಕ ಪಾವತಿಸಿ
ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಿ, ಅರ್ಜಿಯನ್ನು ಸಬ್ಮಿಟ್ ಮಾಡಿ.

By AS Naik

Leave a Reply

Your email address will not be published. Required fields are marked *