ಕನ್ನಡಿಗರಿಗೂ ಸಹ ಆದ್ಯತೆ ನೀಡಿರುವಂತಹ ಯಾವುದೇ ರೀತಿಯ ಲಿಖಿತ ಪರೀಕ್ಷೆ ಗಳು ಇಲ್ಲದೆ ಇರುವ ಎಸ್ಬಿಐ ನಲ್ಲಿ ಕಾಲೀ ಇರುವಂತಹ 3853 ಹುದ್ದೆಗಳ ಬಗ್ಗೆ, ಅದಕ್ಕೆ ಅರ್ಜಿಸಲ್ಲಿಸುವುದು ರ ಬಗ್ಗೆ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.
ರಿಕ್ಯುಮೆಂಟ್ ಆಫ್ ಸರ್ಕಲ್ ಬೇಸಿಸ್ ಆಫೀಸರ್ ಇದಕ್ಕೆ ಅರ್ಜಿಯನ್ನು ಕರೆಯಲಾಗಿದ್ದು, ಆನ್ಲೈನ್ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/ 8/2020 ಆಗಿರುತ್ತದೆ. ಒಟ್ಟು ಕಾಲೀ ಇರುವಂತಹ ಹುದ್ದೆಗಳು 3853 ಇದರಲ್ಲಿ 250 ಹುದ್ದೆಗಳನ್ನು ಕರ್ನಾಟಕ ರಾಜ್ಯದಿಂದ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಯಾವುದೇ ಒಂದು ರಾಜ್ಯದಿಂದ ಮಾತ್ರ ಅರ್ಜಿ ಸಲ್ಲಿಸಬೇಕು ಹೊರತು ಇನ್ನೊಂದು ರಾಜ್ಯದ ಅರ್ಜಿಯನ್ನು ಸಲ್ಲಿಸುವ ಹಾಗಿಲ್ಲ.
ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳಿಗೆ ಗ್ರಾಜುಯೇಷನ್ ಆಗಿರಬೇಕು ಹಾಗೂ ಡಿಗ್ರಿ ಸರ್ಟಿಫಿಕೇಟನ್ನು ಹೊಂದಿರಬೇಕು, 30 ವರ್ಷ ಮೇಲ್ಪಟ್ಟಿರಬಾರದು. ಈ ಹುದ್ದೆಗಳಿಗೆ ಎಕ್ಸ್ಪಿರಿಯನ್ಸ್ ಅವಶ್ಯಕತೆ ಇದ್ದು ಸಾಮಾನ್ಯ ಎರಡು ವರ್ಷ ಎಕ್ಸ್ಪಿರಿಯನ್ಸ್ ಹೊಂದಿರಬೇಕು. ಆಫೀಸರ್ ಆಗಿ ಎರಡು ವರ್ಷ ಬೇರೆ ಯಾವುದೇ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಬೇಕು. ಇಲ್ಲಿ ಅರ್ಜಿ ತುಂಬುವವರೆಗೆ ಲೋಕಲ್ ಲ್ಯಾಂಗ್ವೇಜ್ ಅಂದ್ರೆ ನಮ್ಮ ಭಾಷೆ ಒಂದು ಪ್ಲಸ್ ಪಾಯಿಂಟ್ ಅಂತ ಹೇಳಬಹುದು. ನಾವು ಯಾವ ರಾಜ್ಯದವರು ಹಾಗೂ ನಮ್ಮ ರಾಜ್ಯದಲ್ಲಿ ಮಾತನಾಡುವಂತಹ ಭಾಷೆಯನ್ನು ಸರಿಯಾಗಿ ನಮೂದಿಸಿದ್ದರೆ ಬೇರೆ ಯಾವುದೇ ರಾಜ್ಯದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.
ಇನ್ನು ಆಯ್ಕೆ ಪ್ರಕ್ರಿಯೆ ಬಗ್ಗೆ ನೋಡುವುದಾದರೆ ಯಾವುದೇ ಲಿಖಿತ ಪರೀಕ್ಷೆ ಗಳು ಇರುವುದಿಲ್ಲ ನೇರವಾಗಿ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಇನ್ನು ಆಯ್ಕೆಯಾದ ನಂತರ ಅಲ್ಲಿ ನೀಡುವ ಸಂಬಳ 39 ರಿಂದ 48 ಸಾವಿರದವರೆಗೂ ಇರಬಹುದು. 6 ತಿಂಗಳುಗಳ ಕಾಲ ಟ್ರೈನಿಂಗ್ ಅವಧಿ ಇರುತ್ತದೆ. ಅರ್ಜಿ ಸಲ್ಲಿಸುವಂತ ಅಭ್ಯರ್ಥಿಗಳು ಎಸ್ಸಿಎಸ್ಟಿ ಅಥವಾ ಪಿಡಬ್ಲ್ಯೂಡಿ ಅವರು ಆಗಿದ್ದರೆ ಇವರಿಗೆ ಯಾವುದೇ ರೀತಿಯ ಫೀಸ್ ಇರುವುದಿಲ್ಲ ಉಳಿದವರಿಗೆ ಆದರೆ ಏನು 750 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಮೇಲೆ ಹೇಳಿದಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು 16ನೇ ತಾರೀಕು ಆಗಿದ್ದು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋಗಳನ್ನು ನೋಡಿ ಧನ್ಯವಾದಗಳು..