ಬ್ಯಾಂಕ್ ಗಳು ಹಲವಾರು ಇವೆ. ಅವುಗಳು ತಮಗೆ ವೇಕೆನ್ಸಿಗಳು ಬೇಕಾದಾಗ ಕರೆಯುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಒಂದು ಜಾಬ್ ನೋಟಿಫಿಕೇಶನ್ ಅನ್ನು ಹೊರಡಿಸಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಾವು ಇಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹುದ್ದೆಗಳು:-ಹುದ್ದೆಯ ಹೆಸರು ಎಸ್.ಬಿ.ಐ ಅಪ್ರೆಂಟಿಸ್ ಆಗಿದೆ. ಭಾರತದಾದ್ಯಂತ ಒಟ್ಟಾರೆಯಾಗಿ 8500 ಹುದ್ದೆಗಳು ಖಾಲಿ ಇವೆ. ಹಾಗೆಯೇ ನಮ್ಮ ಕರ್ನಾಟಕದಲ್ಲಿ 600 ಹುದ್ದೆಗಳು ಖಾಲಿ ಇವೆ.
ಪರೀಕ್ಷಾ ಕೇಂದ್ರ:-ನಮ್ಮ ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಗುಲ್ಬರ್ಗ, ಹಾಸನ, ಮಂಡ್ಯ, ಮಂಗಳೂರು, ಉಡುಪಿ, ಮೈಸೂರು ಮತ್ತು ಶಿವಮೊಗ್ಗ ಈ ಎಲ್ಲಾ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ವಿದ್ಯಾರ್ಹತೆ:-ಈ ಹುದ್ದೆಗೆ ಅರ್ಜಿ ಸಲ್ಲಿಸುವದಾದರೆ ಡಿಗ್ರಿ ಮುಗಿದಿರಬೇಕು. ಯಾವುದೇ ವಿಷಯ ಪಾಸಾಗದೇ ಉಳಿದಿರಬಾರದು.
ಅರ್ಜಿಶುಲ್ಕ:-ಜನರಲ್, ಒಬಿಸಿ ಮತ್ತು ಇ.ಡಬ್ಲ್ಯೂ.ಎಸ್. ಅಭ್ಯರ್ಥಿಗಳಿಗೆ 300ರೂಪಾಯಿ ಅರ್ಜಿಶುಲ್ಕ ಇರುತ್ತದೆ. ಹಾಗೆಯೇ ಎಸ್ಸಿ ,ಎಸ್ಟಿ, ಪಿ.ಡಬ್ಲ್ಯೂ.ಡಿ. ಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅರ್ಜಿಶುಲ್ಕವನ್ನು ಆನ್ಲೈನ್ ಮೂಲಕ ತುಂಬಬೇಕು.
ವಯೋಮಿತಿ:-ಈ ಹುದ್ದೆಗೆ ಅರ್ಜಿ ಸಲ್ಲಿಸುವವರು 20ವರ್ಷ ಮೇಲ್ಪಟ್ಟು ಇರಬೇಕು. ಹಾಗೆಯೇ 28 ವರ್ಷದ ಒಳಗೆ ಇರಬೇಕು.
ಪರೀಕ್ಷಾ ವಿಧಾನ:-ಮೊದಲನೆಯದಾಗಿ ಆನ್ಲೈನ್ ವ್ರಿಟನ್ ಟೆಸ್ಟ್ ನಡೆಸಲಾಗುತ್ತದೆ. ಎರಡನೆಯದಾಗಿ ಭಾಷೆಗಳ ಬಗ್ಗೆ ಮಾತನಾಡುವುದನ್ನು ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ದಿನಾಂಕ:-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 20 ನವೆಂಬರ್ 2020 ಆಗಿದೆ. ಹಾಗೆಯೇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಡಿಸೆಂಬರ್ 2020 ಆಗಿದೆ. ಜನವರಿಯಲ್ಲಿ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ. https://sbi.co.in/web/careers ಈ ವೆಬ್ಸೈಟ್ ನಿಂದ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.