SBI interest rate: ನಮ್ಮ ದೇಶದಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಎಂದರೆ SBI. ಕೋಟ್ಯಾಂತರ ಗ್ರಾಹಕರನ್ನು ಹೊಂದಿರುವ SBI ಇದೀಗ ತಮ್ಮ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ. ಆಯ್ದ ಅವಧಿಯ ನಿಧಿ ಆಧಾರಿತ ಸಾಲದ ದರದಲ್ಲಿ ಮಾರ್ಜಿನಲ್ ವೆಚ್ಚದಲ್ಲಿ 5 ರಿಂದ 10 ಪಾಯಿಂಟ್ ಗಳನ್ನು ಜಾಸ್ತಿ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದೆ. ಈ ಮಾತಿನ ಅರ್ಥ ಏನು ಎಂದರೆ ಹೋಮ್ ಲೋನ್, ವೆಹಿಕಲ್ ಇವುಗಳ ಇಎಂಐ ಕಟ್ಟುವ ಹೊರೆ ಜನರಿಗೆ ಜಾಸ್ತಿ ಆಗಲಿದೆ.

ಡಿಸೆಂಬರ್ 8ರಂದು ನಡೆದ ಸಭೆಯಲ್ಲಿ RBI ಗವರ್ನರ್ ಆಗಿರುವ ಶಕ್ತಿಕಾಂತ ದಾಸ್ ಅವರು ಸಭೆ ನಡೆಸಿ, 5ನೇ ಸಾರಿ ರೆಪೊ ದರ ಏರಿಸದೆ 6.5ನಲ್ಲೇ ಇರುವ ಹಾಗೆ ತಿಳಿಸಿ, ಬ್ಯಾಂಕ್ ಗಳು ದರ ಏರಿಕೆ ಮಾಡಿಕೊಳ್ಳಲಿ ಎಂದು ಸೂಚನೆ ನೀಡಿದರು. ಈ ಸೂಚನೆಯ ಅನುಸಾರ MRCL ದರ ಜಾಸ್ತಿಯಾದರೆ, ಗ್ರಾಹಕರು ಪಾವತಿ ಮಾಡುವ ಇಎಂಐ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದರಿಂದ ಇಎಂಐ ಮೊತ್ತ ಜಾಸ್ತಿಯಾಗುತ್ತದೆ.

ಈಗ ಹೊಸದಾಗಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವವರು ಸಹ ಹೊಸ ದರದಲ್ಲಿ ಸಾಲ ಪಡೆಯುತ್ತಾರೆ. ಈಗಾಗಲೇ ಸಾಲ ಪಡೆದು ಇಎಂಐ ಕಟ್ಟುತ್ತಿರುವವರು ಹೊಸ ದರದಲ್ಲಿ ಇನ್ನುಮುಂದಿನ ಇಎಂಐ ಗಳನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ MRCL ಸಾಲದಲ್ಲಿ ಸಾಲದ ಮೊತ್ತವನ್ನು ಸರಿಪಡಿಸಿಕೊಳ್ಳುವ ಅವಕಾಶ ಇದ್ದು, ನಂತರದ ದಿನಗಳಲ್ಲಿ ಸಾಲದ ಮೊತ್ತವನ್ನು ಪರಿಷ್ಕರಿಸಬಹುದು ಎನ್ನುವುದು ರೈತರಿಗೆ ಗೊತ್ತಿರಲಿ.

ಈಗ SBI ತಂದಿರುವ ಬಡ್ಡಿದರ ಎಷ್ಟಿದೆ ಎಂದರೆ.. 1 ತಿಂಗಳ ಅವಧಿಗೆ 8.20% , 3 ತಿಂಗಳ ಅವಧಿಗೆ 8.20%, 6 ತಿಂಗಳ ಅವಧಿಗೆ 8.55%, 1 ವರ್ಷದ ಅವಧಿಗೆ 8.65%, 2 ವರ್ಷದ ಅವಧಿಗೆ 8.75%, 3 ವರ್ಷದ ಅವಧಿಗೆ 8.85% ಆಗಿದೆ. ಇಂದಿನಿಂದಲೇ ಈ ಹೊಸ ದರ ಜಾರಿಗೆ ಬಂದಿದೆ.

By

Leave a Reply

Your email address will not be published. Required fields are marked *