SBI ನಮ್ಮ ದೇಶದಲ್ಲಿ ಜನರ ನಂಬಿಕೆ ಗಳಿಸಿರುವ ಮತ್ತು ಉತ್ತಮವಾದ ಯೋಜನೆಗಳನ್ನು ನೀಡುತ್ತಿದೆ. ಇದೀಗ SBI ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಉದ್ಯೋಗಾವಕಾಶವನ್ನು ನೀಡುತ್ತಿದೆ. ಬ್ಯಾಂಕಿಂಗ್ ನಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವವರಿಗೆ ಇದೊಂದು ಒಳ್ಳೆಯ ಅವಕಾಶ ಆಗಿದೆ. SBI ನಲ್ಲಿ ಖಾಲಿ ಇರುವ ಸುಮಾರು 2000 ಅಧಿಕಾರಿ ವರ್ಗ (Probationary Officers) ಹುದ್ದೆಗಳು ಖಾಲಿ ಇದ್ದು, ಈ ಕೆಲಸಕ್ಕೆ ಭಾರತದ ಎಲ್ಲೆಡೆ ಇರುವ ಮಹಿಳೆಯರು ಮತ್ತು ಪುರುಷರು ಅರ್ಜಿ ಸಲ್ಲಿಸಬಹುದು..
ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಯ ಮಾನದಂಡಗಳಿದ್ದು, ಅವುಗಳನ್ನೆಲ್ಲಾ ಪೂರೈಸಿ, ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಹಾಗಿದ್ದರೆ ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ.. ಕೆಲಸ ಖಾಲಿ ಇರುವ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI). ಕೆಲಸ ಖಾಲಿ ಇರುವ ಸ್ಥಳ ಭಾರತದ ಎಲ್ಲಾ ಕಡೆ, ಖಾಲಿ ಇರುವ ಹುದ್ದೆಗಳ ಸಂಖ್ಯೆ 2000, ಖಾಲಿ ಇರುವ ಹುದ್ದೆಯ ಹೆಸರು ಪ್ರೊಬೆಷನರಿ ಆಫೀಸರ್. ತಿಂಗಳ ಸಂಬಳ ₹36,000 ಇಂದ ₹63,840 ರೂಪಾಯಿ.
ಈ ಕೆಲಸಕ್ಕೆ ಅರ್ಜಿ ಹಾಕಲು ಬೇಕಾಗುವ ವಿದ್ಯಾರ್ಹತೆ, ಮಾನ್ಯತೆ ಪಡೆದಿರುವ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಚಾರದಲ್ಲಿ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಸಲು ಬೇಕಿರುವ ವಯೋಮಿತಿ 18 ರಿಂದ 30 ವರ್ಷಗಳು. ಈ ವಯೋಮಿತಿ ಸಡಿಲಿಕೆ ಕೂಡ ಇದ್ದು, SC/ST ವರ್ಗದವರಿಗೆ 5 ವರ್ಷ ಸಡಿಲಿಕೆ ಇದೆ, OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ, SC/ST ಸಮುದಾಯದವರಿಗೆ ಅರ್ಜಿ ಶುಲ್ಕ ಇರುವುದಿಲ್ಲ, ಬೇರೆ ಅಭ್ಯರ್ಥಿಗಳಿಗೆ 750 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ. ಅರ್ಜಿ ಶುಲ್ಕವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣಪಾವತಿ ಮಾಡಬಹುದು. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾನದಂಡಗಳನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಹತೆ, ವಯೋಮಿತಿ ಇದೆಲ್ಲ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.
ಅರ್ಜಿ ಸಲ್ಲಿಸಲು ಡಿಗ್ರಿ ಪೂರ್ತಿ ಆಗಿರುವ ಸರ್ಟಿಫಿಕೇಟ್ ಕಡ್ಡಾಯವಾಗಿ ಇರಬೇಕು. ಅರ್ಜಿ ಹಾಕಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಡೌನ್ಲೋಡ್ ಮಾಡಿ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಕೂಡ ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಶುಲ್ಕ ಪಾವತಿ ಮಾಡಿ, ಇ ರೆಸಿಪ್ಟ್ ಅನ್ನು ಕೂಡ ಪಡೆದುಕೊಳ್ಳಬೇಕು. ಅರ್ಜಿ ಹಾಕಿದ ಪ್ರಕ್ರಿಯೆ ಪೂರ್ತಿಯಾದ ನಂತರ ಅರ್ಜಿ ಸ್ವೀಕೃತಿ ಆಗಿರುವ ಕಾಪಿಯನ್ನು ನಿಮ್ಮ ಜೊತೆಗೆ ಇಟ್ಟುಕೊಳ್ಳಿ. ಮಂದೆ ಇದು ಬಳಕೆಗೆ ಬರುತ್ತದೆ.
ಕೆಲಸದ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ, *ಪೂರ್ವಭಾವಿ ಪರೀಕ್ಷೆ, *ಪ್ರಮುಖ ಪರೀಕ್ಷೆ *ಸೈಕಾಮೆಟ್ರಿಕ್ ಪರೀಕ್ಷೆ *ಗ್ರುಪ್ ಟಾಸ್ಕ್ ಗ್ರೂಪ್ ಡಿಸ್ಕಶನ್ ಇಂಟರ್ವ್ಯೂ ಡಾಕ್ಯುಮೆಂಟ್ ವೆರಿಫಿಕೇಶನ್ ಮೆಡಿಕಲ್ ಟೆಸ್ಟ್. ಅರ್ಜಿ ಹಾಕಲು ಶುರುವಾಗಿರುವ ದಿನಾಂಕ 7/9/2023 ರಿಂದ ಅರ್ಜಿ ಹಾಕುವ ಕೊನೆಯ ದಿನಾಂಕ 27/9/2023. ಅರ್ಹತೆ ಇದ್ದರೆ ನೀವು ಕೂಡ ಅರ್ಜಿ ಸಲ್ಲಿಸಿ.