10ನೇ ತರಗತಿ ಪಾಸ್ ಆಗಿದ್ರೆ ಸಾಕು ಫಾರೆಸ್ಟ್ ಇಲಾಖೆಯಲ್ಲಿ ಸರ್ಕಾರಿ ಕೆಲಸ, ಆಸಕ್ತರು ಅರ್ಜಿ ಹಾಕಿ ಸಂಬಳ 21.000

0 1,593

forest Dept Recruitment For 2023: ನಮ್ಮ ಜನರ ನಡುವೆ ಒಂದು ವಿಚಿತ್ರ ನಂಬಿಕೆ ಇದೆ, ಅದೇನು ಎಂದರೆ ಕಡಿಮೆ ಓದಿರುವವರಿಗೆ ಸರ್ಕಾರಿ ಕೆಲಸ ಸಿಗುವುದಿಲ್ಲ ಎಂದು ಬಹಳಷ್ಟು ಜನರು ಅಂದುಕೊಂಡಿರುತ್ತಾರೆ. ಆದರೆ ಈ ಮಾತು ಖಂಡಿತವಾಗಿ ನಿಜವಲ್ಲ, ನಮ್ಮ ರಾಜ್ಯದಲ್ಲಿ ಕಡಿಮೆ ಅಂದರೆ 10ನೇ ತರಗತಿ ಓದಿರುವವರಿಗೆ ಕೂಡ ಸರ್ಕಾರಿ ಕೆಲಸ ಸಿಗುತ್ತದೆ. ಇದೀಗ ಕರ್ನಾಟಕ ರಾಜ್ಯ ಸರ್ಕಾರವು 10ನೇ ತರಗತಿ ಓದಿರುವವರಿಗೆ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದ್ದು, 10ನೇ ತರಗತಿ ಪಾಸ್ ಆಗಿದ್ರೆ ಸಾಕು ಈ ಕೆಲಸಕ್ಕೆ ನೀವು ಅಪ್ಲೈ ಮಾಡಬಹುದು.

ಕಡಿಮೆ ಓದಿರುವವರಿಗೆ ಕೂಡ ಈಗ ಸರ್ಕಾರಿ ಕೆಲಸದ ಅವಕಾಶ ಸಿಗುತ್ತಿದೆ. ಈ ಬಾರಿ ಉದ್ಯೋಗ ಖಾಲಿ ಇರುವುದು ಅರಣ್ಯ ಇಲಾಖೆಯಲ್ಲಿ, ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅವಕಾಶ ನೀಡಿದ್ದು, ಈ ಉದ್ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ನೀವು ಕೂಡ ಕೆಲಸಕ್ಕೆ ಅಪ್ಲೈ ಮಾಡಬಹುದು. ಹಾಗಿದ್ದಲ್ಲಿ ಈ ಕೆಲಸಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು 10ನೇ ತರಗತಿ ಪಾಸ್ ಆಗಿರುವವರಿಗೆ ಆಗಿದ್ದು, ನೀವು ಕೂಡ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಬಗ್ಗೆ ಮಾಹಿತಿ ನೀಡುವುದಾದರೆ, ಕೆಲಸ ಖಾಲಿ ಇರುವುದು ಕರ್ನಾಟಕ ಅರಣ್ಯ ಇಲಾಖೆಯಲ್ಲಿ, ಹುದ್ದೆಯ ಹೆಸರು ಅರಣ್ಯ ವೀಕ್ಷಕರು. ಒಟ್ಟು 310 ಹುದ್ದೆಗಳು ರಾಜ್ಯದಲ್ಲಿ ಖಾಲಿ ಇದೆ. ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎನ್ನುವುದರ ಪೂರ್ತಿ ಮಾಹಿತಿ..

forest Dept Recruitment For 2023

ಬೆಂಗಳೂರಿನಲ್ಲಿ 33 ಹುದ್ದೆಗಳು, ಬೆಳಗಾವಿಯಲ್ಲಿ 20 ಹುದ್ದೆಗಳು,
ಬಳ್ಳಾರಿಯಲ್ಲಿ20 ಹುದ್ದೆಗಳು, ಚಾಮರಾಜನಗರದಲ್ಲಿ 32 ಹುದ್ದೆಗಳು, ಚಿಕ್ಕಮಗಳೂರು ವೃತ್ತ ಒಟ್ಟು 25 ಹುದ್ದೆಗಳು, ಧಾರವಾಡದಲ್ಲಿ 07 ಹುದ್ದೆಗಳು, ಹಾಸನದಲ್ಲಿ 20 ಹುದ್ದೆಗಳು, ಕೆನರಾದಲ್ಲಿ 32 ಹುದ್ದೆಗಳು, ಕೊಡಗಿನಲ್ಲಿ 16 ಹುದ್ದೆಗಳು, ಕಲ್ಬುರ್ಗಿಯಲ್ಲಿ 23 ಹುದ್ದೆಗಳು, ಮಂಗಳೂರಿನಲ್ಲಿ 20 ಹುದ್ದೆಗಳು, ಮೈಸೂರಿನಲ್ಲಿ ವೃತ್ತ 32 ಹುದ್ದೆಗಳು, ಶಿವಮೊಗ್ಗದಲ್ಲಿ 30 ಹುದ್ದೆಗಳು ಖಾಲಿ ಇದೆ.

ಈ ಕೆಲಸಕ್ಕೆ ಸಿಗುವ ತಿಂಗಳ ಸಂಬಳ ಎಷ್ಟಿರುತ್ತದೆ ಎಂದು ನೋಡುವುದಾದರೆ, ಕೆಲಸಕ್ಕೆ ಅಪ್ಲೈ ಮಾಡಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹21,400 ಇಂದ ₹42,000 ವರೆಗು ಸಂಬಳ ಸಿಗುತ್ತದೆ. ಕೆಲಸಕ್ಕೆ ಅಗತ್ಯವಿರುವ ವಿದ್ಯಾರ್ಹತೆ ಎಷ್ಟು ಎಂದು ನೋಡುವುದಾದರೆ, 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ನೀವು ಈ ಕೆಲಸಕ್ಕೆ ಅಪ್ಲೈ ಮಾಡಬಹುದು.

ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿ ಮಾಡಲಾಗಿದ್ದು, 18 ರಿಂದ 35 ವರ್ಷಗಳ ಒಳಗಿರುವ ಯಾರೇ ಆದರೂ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಆದರೆ ವಯೋಮಿತಿ ಸಡಿಲಿಕೆ ಕೂಡ ಇದ್ದು, SC/ST ಅಭ್ಯರ್ಥಿಗಳಿಗೆ 5 ವರ್ಷ, OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಇನ್ನು ಕೆಲಸಕ್ಕೆ ಅಪ್ಲೈ ಮಾಡಲು ಪಾವತಿ ಮಾಡಬೇಕಾದ ಶುಲ್ಕ ಎಷ್ಟು ಎಂದು ನೋಡಿವುದಾದರೆ SC/ST ವರ್ಗದವರು 45 ರೂಪಾಯಿ ಹಣ ಪಾವತಿ ಮಾಡಬೇಕು, OBC ವರ್ಗದವರು 125 ರೂಪಾಯಿ ಹಣಪಾವತಿ ಮಾಡಬೇಕು.

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ, ಅರ್ಜಿ ಪ್ರಕ್ರಿಯೆ ಶುರುವಾದ ಬಳಿಕ KFD ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯ ವಿಧಾನ ಹೇಗಿರುತ್ತದೆ ಎಂದರೆ, ಲಿಖಿತ ಪರೀಕ್ಷೆ, ಇಂಟರ್ವ್ಯೂ, ದಾಖಲೆ ಪರಿಶೀಲನೆ ಮತ್ತು ಮೆಡಿಕಲ್ ಟೆಸ್ಟ್ ಇದಿಷ್ಟನ್ನು ಮಾಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಶುರುವಾಗುವ ದಿನಾಂಕ 27/9/2023. ಅರ್ಜಿ ಸಲ್ಲಿಕೆ ಕೊನೆಯಾಗುವ ದಿನಾಂಕ 26/10/2023. ಆಸಕ್ತಿ ಮತ್ತು ಅರ್ಹತೆ ಇರುವವರು ತಪ್ಪದೇ ಅರ್ಜಿ ಸಲ್ಲಿಸಿ.

Leave A Reply

Your email address will not be published.