ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಭರ್ಜರಿ 350 ಕೋಟಿ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಮಟ್ಟದ ದಾಖಲೆಯನ್ನು ನಿರ್ಮಿಸಿದೆ. ಕೇವಲ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಮಾಡಿರುವ ಪ್ರತಿಯೊಂದು ದಾಖಲೆ ಕೂಡ ಅಪೂರ್ವ ಹಾಗೂ ವಿಶೇಷವಾದದ್ದು ಎಂದು ಹೇಳಬಹುದಾಗಿದೆ.
ಇನ್ನು ಈ ಸಿನಿಮಾದಲ್ಲಿ ನಾಯಕನಾಗಿ ರಿಷಬ್ ಶೆಟ್ಟಿ ಎಷ್ಟರಮಟ್ಟಿಗೆ ಎಲ್ಲರ ಗಮನವನ್ನು ಸೆಳೆದಿದ್ದಾರೋ ಅಷ್ಟೇ ಪ್ರಾಮುಖ್ಯತೆಯನ್ನು ನಾಯಕಿ ಲೀಲಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ಸಪ್ತಮಿ ಗೌಡ ಅವರು ಕೂಡ ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಈ ಹಿಂದೆ ಡಾಲಿ ಧನಂಜಯ್ ನಾಯಕನಟನಾಗಿ ಕಾಣಿಸಿಕೊಂಡಿರುವ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಆದರೆ ಆ ಪಾತ್ರ ಅಷ್ಟೊಂದು ಗಮನ ಸೆಳೆದಿರಲಿಲ್ಲ.
ಕಾಂತಾದ ಸಿನಿಮಾದಲ್ಲಿ ಹಳ್ಳಿ ಸೊಗಡಿನ ಲೀಲಾ ಪಾತ್ರಧಾರಿಯಾಗಿ ಸಪ್ತಮಿ ಗೌಡ ಅವರು ನೂರಕ್ಕೆ ನೂರರಷ್ಟು ತಮ್ಮ ನಟನೆಯ ಪ್ರದರ್ಶನವನ್ನು ತೋರಿಪಡಿಸಿದ್ದಾರೆ ಹೀಗಾಗಿ ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ನಾಯಕನ ಪಾತ್ರವೇ ಡಾಮಿನೇಟ್ ಆಗುತ್ತಿದ್ದರೂ ಕೂಡ ತನ್ನ ನಟನೆಯ ಝಲಕ್ ಅನ್ನು ಕೂಡ ಪರದೆ ಮೇಲೆ ತೋರಿಸಲು ಯಶಸ್ವಿಯಾಗಿದ್ದಾರೆ ಸಪ್ತಮಿ ಗೌಡ. ಸಪ್ತಮಿ ಗೌಡ ಅವರ ಹಿನ್ನೆಲೆ ಕೇಳಿದರೆ ನೀವು ಕೂಡ ಕೊಂಚಮಟ್ಟಿಗೆ ಬೆಚ್ಚಿ ಬೀಳೋದು ಗ್ಯಾರಂಟಿ.
ಸಪ್ತಮಿ ಗೌಡ ಯಾವುದೇ ಸಿನಿಮಾ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿಲ್ಲ ನಿಜ ಆದರೆ ಅವರ ತಂದೆ ಕರ್ನಾಟಕ ಪೊಲೀಸ್ ಇಲಾಖೆ ಕಂಡಂತಹ ಅತ್ಯಂತ ಶಿಸ್ತುಬದ್ಧ ಹಾಗೂ ದಕ್ಷ ಪೊಲೀಸ್ ಅಧಿಕಾರಿ ಆಗಿರುವ ಎಸ್ ಕೆ ಉಮೇಶ್. ಇನ್ನು ನಟನೆ ಹೊರತುಪಡಿಸಿ ಈಜುವಿಕೆಯಲ್ಲಿ ಕೂಡ ಸಪ್ತಮಿ ಗೌಡ ಅವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ನ್ಯಾಷನಲ್ ಲೆವೆಲ್ ನಲ್ಲಿ ಸಾಬೀತುಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಸಪ್ತಮಿ ಗೌಡ ಅವರಿಗೆ ಇನ್ನಷ್ಟು ಅವಕಾಶಗಳು ಕನ್ನಡ ಚಿತ್ರರಂಗದಲ್ಲಿ ದೊರೆಯಲಿ ಎಂಬುದಾಗಿ ಆಶಿಸೋಣ.