ಕನ್ನಡ ಕಿರುತೆರೆ ಲೋಕದಲ್ಲಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮವು ಬಹಳ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ಕಾಮಿಡಿ ಶೋ ಆಗಿದ್ದು ನವರಸ ನಾಯಕ ಜಗ್ಗೇಶ್ ರಕ್ಷಿತಾ ನಿರ್ದೆಶಕರಾದ ಯೋಗರಾಜ್ ಭಟ್ಟರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದು ಅವರ ಜೊತೆಗೆ ಮಾಸ್ಟರ್ ಆನಂದ್ ಕೂಡ ಆಂಕರ್ ಆಗಿ ತನ್ನ ಮಾತಿನ ವೈಖರಿಯ ಮೂಲಕ ಶೋ ಗೊಂದು ಮೆರಗು ತಂದಿದ್ದರು.
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕನ್ನಡ ಕಿರುತೆರೆ ಇತಿಹಾಸದಲ್ಲಿ ದೊಡ್ಡ ಯಶಸ್ಸು ಕಂಡು ಸಾಕಷ್ಟು ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿತು. ಹೌದು ಒಂದಲ್ಲಾ ಎರಡಲ್ಲಾ ಮೂರು ಸೀಸನ್ ಗಳಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಮತ್ತೆ ಎಲ್ಲಾ ಸೀಸನ್ ಗಳ ಕಾಮಿಡಿ ಕಲಾವಿದರೊಟ್ಟಿಗೆ ಚಾಂಪಿಯನ್ ಶಿಪ್ ಶೋ ಕೂಡ ಪ್ರಸಾರವಾಗಿತ್ತು. ಎಲ್ಲಾ ಸೀಸನ್ ಗಳು ಭರ್ಜರಿ ರೇಟಿಂಗ್ ಪಡೆದು ವಾಹಿನಿಗೆ ಲಾಭ ತಂದುಕೊಟ್ಟರೆ ಇತ್ತ ಕಾಮಿಡಿ ಕಿಲಾಡಿಗಳು ಶೋಗೆ ಬಂದ ಬಹುತೇಕ ಕಲಾವಿದರು ಮನೆಮಾತಾಗಿದ್ದಂತು ಸತ್ಯ.ಅಷ್ಟೇ ಅಲ್ಲದೇ ಈ ಶೋನಿಂದ ಬಂದ ಹೆಸರಿನಿಂದ ಸಿನಿಮಾ ಹಾಗೂ ಕಿರುತೆರೆಯಲ್ಲಿ ಅವಕಾಶ ಪಡೆದು ಬದುಕು ಕಟ್ಟಿಕೊಂಡರು.
ಇನ್ನು ಕಾಮಿಡಿ ಕಿಲಾಡಿಗಳು ಶೋಗೆ ಬಂದಿದ್ದ ಬಹುತೇಕರೂ ಗ್ರಾಮೀಣ ಭಾಗದ ಪ್ರತಿಭೆಗಳಾಗಿದ್ದು ಈ ಶೋ ಅವರಿಗೆಲ್ಲಾ ಒಂದೊಳ್ಳೆ ವೇದಿಕೆಯನ್ನು ನೀಡಿತು ಎಂದರೆ ತಪ್ಪಾಗಲಾರದು. ಇನ್ನು ಈ ಶೋನಲ್ಲಿ ಭಾಗವಹಿಸಿದ ನಯನಾ ಶಿವರಾಜ್ ಕೆ ಆರ್ ಪೇಟೆ ಗೋವಿಂದೇ ಗೌಡ ಇನ್ನೂ ಅನೇಕರು ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುತ್ತಿದ್ದು ಅದಾಗಲೇ ಗೋವಿಂದೇ ಗೌಡ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡು ಜನಮನ ಗೆದ್ದರು. ಇನ್ನೂ ಸಾಕಷ್ಟು ಕಲಾವಿದರಿಗೆ ಜೀ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗಿತ್ತಿರುವ ಎಲ್ಲಾ ಧಾರಾವಾಹಿಗಳಲ್ಲಿ ಒಬ್ಬರು ಇಬ್ಬರು ಕಲಾವಿದರಿಗೆ ಅವಕಾಶ ಕೊಟ್ಟಿರುವುದು ಒಳ್ಳೆಯ ವಿಚಾರವಾಗಿದ್ದು ಕೊರೊನಾ ಸಮಯದಲ್ಲಿ ಸಿನಿಮಾ ಅವಕಾಶಗಳಿಲ್ಲದೇ ಇದ್ದ ಅನೇಕ ಕಲಾವಿದರಿಗೆ ಧಾರಾವಾಹಿಗಳಲ್ಲಿ ಮತ್ತು ಶೋಗಳಲ್ಲಿ ಅವಕಾಶ ಕೊಟ್ಟು ಜೀವನಕ್ಕೆ ದಾರಿಯಾಗಿದ್ದು ನಿಜಕ್ಕೂ ಮೆಚ್ಚುವಂತದ್ದು. ಇನ್ನು ಇದೇ ಕಾರ್ಯಕ್ರಮದಿಂದ ಜನ ಮನಗೆದ್ದ ಮತ್ತೊಬ್ಬ ಕಾಮಿಡಿ ನಟ ಸಂಜು ಬಸವಯ್ಯ.
ಸಂಜು ಬಸವಯ್ಯ ಅವರು ದರ್ಶನ್ ಅವರು ಅಭಿನಯದ ಯಜಮಾನ ಸಿನಿಮಾದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಲ್ಲದೇ ಇಂತಿ ನಿಮ್ಮ ಭೈರ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಮಿಂಚುತ್ತಿದ್ದಾರೆ.. ಅಷ್ಟೇ ಅಲ್ಲದೇ ಕಿರುತೆರೆಯ ಶೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜು ಅವರ ತಂದೆ ಬಸಯ್ಯ. ಮೂಲತಃ ಇವರು ಡ್ರಾಮಾ ಕಲಾವಿದರು. ಮದುವೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಬ್ಯಾಂಡ್ ಬಾರಿಸುವುದು ಇವರ ಕಾಯಕ. ಹಾಗಾಗಿ, ತಂದೆಯಂತೆ ಮಗನಿಗೂ ಅಭಿನಯ, ಹಾಡುವ ಆಸಕ್ತಿ ಬೆಳೆಯಿತು. ತಂದೆಯ ಜೊತೆಯಲ್ಲಿ ಹೋಗಿ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಅಥವಾ ಹಾಡನ್ನ ಹೇಳುವ ಮೂಲಕ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡಿದ್ದರು ಮೆಣಸಿನಕಾಯಿ ಬಸಿಯಾ ಎಂಬ ನಾಟಕದಿಂದ ಅದೇ ಹೆಸರಿನಿಂದ ನಾಟಕರಂಗದಲ್ಲಿ ಫೇಮಸ್ ಆಗಿದ್ದರು ಸಂಜು ಸುಮಾರು 8 ರಿಂದ 10 ವರ್ಷದಿಂದ ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಆರ್ಕೆಸ್ಟ್ರಗಳಲ್ಲಿ, ಡ್ರಾಮಾಗಳಲ್ಲಿ ನಟಿಸುತ್ತಿದ್ದರು. ಗೋಕಾಕ್ ಅವರ ಜೊತೆಯಲ್ಲಿ ಜೋಗಳಬಂಧಿ ಕಾಮಿಡಿ ಮಾಡ್ತಿದ್ದರಂತೆ. ಅಲ್ಲಿ ‘ಮೆಣಸಿನಕಾಯಿ ಬಸಿಯಾ’ ಅಂತ ಪಾತ್ರ ಮಾಡ್ತಿದ್ದಾಗ ಅದೇ ಹೆಸರು ಬಂದಿತ್ತು ನಂತರ ಕಾಮಿಡಿ ಕಿಲಾಡಿಗಳಿಗೆ ಬಂದ್ಮೇಲೆ ಮೆಣಸಿನಕಾಯಿ ತೆಗೆದು ಸಂಜು ಬಸಯ್ಯ ಎಂಬ ಹೆಸರು ಬಂದಿತು. ತಮ್ಮ ಮದುವೆ ವಿಚಾರವನ್ನು ಹಂಚಿಕೊಂಡಿರುವ ಸಂಜು ಬಸಯ್ಯ ತಾವು ಮದುವೆಯಾಗುತ್ತಿರುವ ಹುಡುಗಿಯ ಬಗ್ಗೆಯೂ ಕಾಮಿಡಿ ಚಾಂಪಿಯನ್ ಷೋ ನಲ್ಲಿ ಹೇಳಿದ್ದಾರೆ.. ಹೌದು ಸಂಜು ಬಸಯ್ಯ ಅವರು ಮದುವೆಯಾಗುತ್ತಿರುವ ಹುಡುಗಿಯ ಹೆಸರು ಪಲ್ಲವಿ.. ಮೂಲತಃ ಬಳ್ಳಾರಿ ಅವರಾದ ಪಲ್ಲವಿ ಅವರು ಕಳೆದ ಎಂಟು ವರ್ಷಗಳಿಂದ ಸಂಜು ಬಸಯ್ಯ ಅವರ ಸ್ನೇಹಿತರಾಗಿದ್ದರು.ಸಂಜು ಬಸವಯ್ಯ ಅವರು ಕುಳ್ಳ ಆಗಿದ್ದರು ಕೂಡ ಪಲ್ಲವಿ ಅವರು ಅದನ್ನು ಪರಿಗಣಿಸದೆ ಸಮಾಜಕ್ಕೊಂದು ಮಾದರಿಯಂತೆ ನಿಂತಿದ್ದರು ಅದೆಷ್ಟೋ ಜನರಿಗೆ ಪ್ರೇರಣೆ ಕೂಡ ಆಗಿದ್ದರು.
ಅವರಿಬ್ಬರೂ ಜೊತೆಗಿದ್ದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಉಂಟು ಆದರೆ ಒಂದು ಇದೀಗ ಸಂಜು ಬಸವಯ್ಯ ಅವರು ಒಂದು ವಿಡಿಯೋ ಮಾಡಿದ್ದು ಅದರಲ್ಲಿ ಪಲ್ಲವಿ ನನ್ನ ಪ್ರೇಯಸಿ ಅಲ್ಲ ನಾವಿಬ್ಬರೂ ಅಕ್ಕಾ ತಮ್ಮ ನಮ್ಮಿಬ್ಬರ ಮಧ್ಯೆ ಯಾವುದೇ ಪ್ರೀತಿ ಇಲ್ಲ ಸುಖಾಸುಮ್ಮನೆ ಸಂಬಂಧ ಕಟ್ಟಿಬಿಟ್ಟರು ಎಂದು ಹೇಳಿದ್ದಾಗ ಕೆಲವೊಬ್ಬರು ಅವರ ಮಾತನ್ನು ಪ್ರಶ್ನಿಸಿದ್ದರು ಹಾಗಾದ್ರೆ ಝೀ ಕನ್ನಡದಲ್ಲಿ ಹೇಳಿದೆಲ್ಲ ಸುಳ್ಳ ಎಂದಾಗ ಸಂಜು ಅವರು ಇಲ್ಲ ಅದೆಲ್ಲ ಡ್ರಾಮಾ ಅಷ್ಟೇ ಸ್ಕ್ರೀನ್ ಮುಂದೆ ನಾಟಕ ಮಾಡಿದ್ವಿ ಅಷ್ಟೇ ಸ್ಕ್ರೀನ್ ಹಿಂದೆ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ ನಾವಿಬ್ಬರೂ ಫ್ಯೂರ್ ಫ್ರೆಂಡ್ಸ್ ಅಥವಾ ಅಕ್ಕಾ ತಮ್ಮನ ಸಂಬಂಧ ಅಷ್ಟೇ .ನಾವೆಲ್ಲರೂ ಕಲಾವಿದರು ತೆರೆಯ ಮೇಲೆ ನಮ್ಮದು ನಟನೆ ಮಾತ್ರ ತೆರೆಯ ಹಿಂದೆ ನಮ್ಮದು ಸ್ನೇಹ ಮಾತ್ರ ಇದೇ ಎಂದು ಹೇಳಿದ್ದಾರೆ ಇದಕ್ಕೆ ಜನರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಇಬ್ಬರ ನಡುವೆಯೂ ಪ್ರೀತಿ ಇತ್ತು ಅದಕ್ಕೆ ಮನೆಯವರ ಒಪ್ಪಿಗೆ ಇಲ್ಲದೆ ಹೀಗೆ ಹೇಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದರೆ ಇನ್ನೂ ಕೆಲವರು ಝೀ ಕನ್ನಡ ದವರು ತಮ್ಮ TRP ಗಾಗಿ ಅವರನ್ನು ಬಳಸಿಕೊಂಡಿದ್ದಾರೆ ಎಂದಿದ್ದಾರೆ. ಇದರಲ್ಲಿ ಯಾವುದು ಸುಳ್ಳು ,ಯಾವುದು ಸತ್ಯ ಅನ್ನೋದು ಯಾರಿಗೂ ತಿಳಿದಿಲ್ಲ.