ಸಾಮಾನ್ಯವಾಗಿ ಈ ರೀತಿಯ ಸಮಸ್ಯೆ ಬಗ್ಗೆ ನೀವು ಒಮ್ಮೆಯಾದರೂ ಕೇಳಿರುತ್ತೀರ ಅಥವಾ ನಿಮ್ಮ ಮನೆಯಲ್ಲಿಯೇ ಒಂದು ವೇಳೆ ಇಂತಹ ಒಂದು ಸಮಸ್ಯೆಯನ್ನು ನೋಡಿರುತ್ತೀರ. ಮಲಗಿದಾಗ ಆಕಸ್ಮಿಕವಾಗಿ ಕಿವಿಯೊಳಗೆ ಇರುವೆ ಅಥವಾ ಕೀಟಗಳು ಸೇರಿಕೊಂಡರೆ ಕಿವಿಯಲ್ಲಿ ನೋವು ಆಗುವುದು ಹಾಗೂ ನೆಮ್ಮದಿಯಿಂದ ನಿದ್ರಿಸಲು ಆಗೋದಿಲ್ಲ, ಅಷ್ಟೊಂದು ಕಿರಿ ಕಿರಿ ಅನಿಸುತ್ತದೆ. ತಕ್ಷಣಕ್ಕೆ ಏನು ಮಾಡಬೇಕು ಅನ್ನೋದನ್ನ ಕೆಲವು ವಿಧಾನಗಳನ್ನು ತಿಳಿಸಲು ಬಯಸುತ್ತೇವೆ, ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.
ಕೆಲವರು ಈ ರೀತಿಯ ತಪ್ಪು ಕೆಲಸವನ್ನು ಮಾಡುತ್ತಾರೆ, ಕಿವಿಯೊಳಗೆ ಕೀಟಗಳು ಏನಾದ್ರು ಸೇರಿಕೊಂಡರೆ ಪಿನ್ ಬಳಸುತ್ತಾರೆ, ಹಾಗೂ ಬೇರೆ ತರಹ ಯಾವುದೇ ಉಪಕರಣಗಳನ್ನು ಬಳಸಿ ಅದನ್ನು ತಗೆಯಲು ಪ್ರಯತ್ನಿಸುತ್ತಾರೆ. ಇಂತಹ ಕೆಲಸವನ್ನು ಮಾಡಲೇಬೇಡಿ ಯಾಕೆಂದರೆ ಇದರಿಂದ ಬೇರೆಯ ತರಾನೇ ತೊಂದರೆ ಆಗುತ್ತದೆ ಹಾಗಾಗಿ ಕೆಲವೊಂದು ವಿಧಾನಗಳನ್ನು ಅನುಸರಿಸಿ ಇಲ್ಲದಿದ್ದರೆ, ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಿ.
ಕಿವಿಯಲ್ಲಿ ಕೀಟಗಳು ಸೇರಿಕೊಂಡರೆ ಹೆಚ್ಚು ನೋವು ಭಯಪಡುವ ಬದಲು, ಕಿವಿಯನ್ನು ನೆಲಕ್ಕೆ ತಾಕುವಂತೆ ಮಾಡಿ ಕ್ರಿಮಿ ಕೀಟಗಳು ಕೆಳಗೆ ಬೀಳುವಂತೆ ಮಾಡಿ. ಇನ್ನು ಎರಡನೆಯದಾಗಿ ಹೇಳುವುದಾದರೆ ಅಡುಗೆಗೆ ಬಳಸುವಂತ ಉಪ್ಪನ್ನು ಒಂದು ಚಿಕ್ಕ ಗ್ಲಾಸ್ ನೀರಿನಲ್ಲಿ ಹಾಕಿ ಆ ಉಪ್ಪು ನೀರನ್ನು ಕಿವಿಯೊಳಗೆ ಒಂದೆರಡು ಹನಿ ಹಾಕಿ ಒಂದು ನಿಮಿಷ ಬಿಟ್ಟು ಕಿವಿಯನ್ನು ಕೆಳಗೆ ಮಾಡಿ, ಉಪ್ಪು ನೀರು ಕಿವಿಯೊಳಗೆ ಇರುವಂತ ಕೀಟವನ್ನು ಹೊರಗೆ ಬರುವಂತೆ ಮಾಡುತ್ತದೆ.
ಇನ್ನು ಮೂರನೆಯ ವಿಧಾನ ಏನು ಅನ್ನೋದನ್ನ ಹೇಳುವುದಾದರೆ ತಲೆಗೆ ಬಳಸುವಂತ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಒಂದೆರಡು ಹನಿ ಕೊಬ್ಬರಿ ಎಣ್ಣೆಯನ್ನು ಕಿವಿಯೊಳಗೆ ಹಾಕಿ, ಒಂದು ನಿಮಷ ಬಿಟ್ಟು ಕಿವಿಯನ್ನು ಉಲ್ಟಾ ಮಾಡಿದರೆ ಕಿವಿಯಲ್ಲಿ ಸೇರಿಕೊಂಡ ಕೀಟಗಳು ಹೊರ ಬರುತ್ತವೆ. ಈ ವಿಧಾನಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಅನುಸರಿಸಬಹುದಾಗಿದೆ. ಒಂದು ವೇಳೆ ಈ ಮೂರೂ ವಿಧಾನದಿಂದ ಕೂಡ ಪರಿಹಾರ ಸಿಗದೇ ಇದ್ರೆ ಹತ್ತಿರದ ವೈದ್ಯರನ್ನು ಭೇಟಿ ನೀಡುವುದು ಉತ್ತಮ.