ಮನೆಯಲ್ಲಿ ದೀಪ ಹಚ್ಚುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಅಲ್ಲದೆ ಮನೆ ಬೆಳಕಿನಿಂದ ತುಂಬಿರುತ್ತದೆ. ದೀಪದಲ್ಲಿ ಹಲವಾರು ರೀತಿಯ ದೀಪಗಳಿವೆ. ನಿಂಬೆಹಣ್ಣಿನ ದೀಪ, ತುಪ್ಪದ ದೀಪ, ತೆಂಗಿನೆಣ್ಣೆಯ ದೀಪ, ಕಾಮಾಕ್ಷಿ ದೀಪ, ಉಪ್ಪಿನ ದೀಪ. ಎಲ್ಲಾ ರೀತಿಯ ದೀಪಗಳು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಇವುಗಳಲ್ಲಿ ಉಪ್ಪಿನ ದೀಪವು ಕೂಡ ಮಹತ್ವವಾದದ್ದು. ಉಪ್ಪಿನ ದೀಪವನ್ನು ಹೇಗೆ ಹಚ್ಚಬೇಕು ಹಾಗೂ ಉಪ್ಪಿನ ದೀಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕವಡೆ, ಉಪ್ಪು, ಶಂಖ, ಚಕ್ರ ಇವುಗಳನ್ನು ಬಳಸಿ ಮನೆಯಲ್ಲಿ ದೀಪ ಹಚ್ಚಬೇಕು ಏಕೆಂದರೆ ಇವುಗಳನ್ನು ಮಹಾಲಕ್ಷ್ಮೀಯ ಸಂಭೂತ ಎಂದು ಕರೆಯುತ್ತಾರೆ. ಸಮುದ್ರ ಮಥನ ಆಗುತ್ತದೆ ಆಗ ಸಮುದ್ರದಿಂದ ಕಾಮಧೇನು, ಮಹಾಲಕ್ಷ್ಮೀ ಹೀಗೆ ಅನೇಕ ವಸ್ತುಗಳು, ಸಂಗತಿಗಳು ಹೊರ ಬರುತ್ತದೆ. ಉಪ್ಪು ಸಮುದ್ರದಲ್ಲಿ ಸಿಗುವುದರಿಂದ ಮಹಾಲಕ್ಷ್ಮೀಯು ಸಮುದ್ರದಿಂದಲೇ ಹೊರಬಂದಿರುವುದರಿಂದ ಉಪ್ಪು ದೇವರಿಗೆ ಶ್ರೇಷ್ಠ ಆದ್ದರಿಂದ ಉಪ್ಪಿನ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಶಾಂತಿ ನೆಮ್ಮದಿ ನೆಲೆಸುತ್ತದೆ.

ಯಾವುದೇ ದೀಪ ಹಚ್ಚಬೇಕಾದರೆ ಅದನ್ನು ನೆಲದ ಮೇಲೆ ಇಡಬಾರದು ತಾಮ್ರ, ಬೆಳ್ಳಿ, ಮಣ್ಣು ಅಥವಾ ಪಂಚಲೋಹದ ತಟ್ಟೆಯ ಮೇಲೆ ಇಡಬೇಕು. ಉಪ್ಪಿನ ದೀಪವನ್ನು ಸಹ ತಾಮ್ರ, ಬೆಳ್ಳಿ, ಮಣ್ಣು, ಪಂಚಲೋಹದ ತಟ್ಟೆಯ ಮೇಲೆ ಇಟ್ಟು ಹಚ್ಚಬೇಕು. ಮಣ್ಣಿನ ಬೌಲ್ ಅಥವಾ ಮಣ್ಣಿನ ದೊಡ್ಡ ಹಣತೆಯನ್ನು ತೆಗೆದುಕೊಳ್ಳಬೇಕು ನಂತರ ತೆಗೆದುಕೊಂಡ ಮಣ್ಣಿನ ಹಣತೆಗೆ ಅರಿಶಿಣ ಲೇಪನ ಮಾಡಿ, ಹಣತೆಯ ನಾಲ್ಕು ಬದಿಗೆ ಕುಂಕುಮದ ಬೊಟ್ಟನ್ನಿರಿಸಿ, ತಟ್ಟೆಯ ಮೇಲಿರಿಸಿ ಆ ಹಣತೆಯಲ್ಲಿ ದಪ್ಪ ಉಪ್ಪನ್ನು ಹಾಕಿ ಅದರ ಅಕ್ಕ ಪಕ್ಕ ಕೆಂಪು ಮತ್ತು ಅರಿಶಿಣ ಬಣ್ಣದ ಹೂವನ್ನು ಇರಿಸಬೇಕು.

ನಂತರ ದೊಡ್ಡ ಮಣ್ಣಿನ ಹಣತೆಯ ಮೇಲೆ ಚಿಕ್ಕ ಹಣತೆಯನ್ನು ಇರಿಸಿ ಇದಕ್ಕೂ ಅರಿಶಿಣ, ಕುಂಕುಮ ಹಚ್ಚಿ. ಅದಕ್ಕೆ ತುಪ್ಪ, ಎಳ್ಳೆಣ್ಣೆ ಹಾಕಿ ಜೋಡಿ ಬತ್ತಿಗಳನ್ನು ಇಟ್ಟು ದೀಪವನ್ನು ಹಚ್ಚಬೇಕು. ಶುಕ್ರವಾರದ ದಿನ ಉಪ್ಪಿನ ದೀಪವನ್ನು ಹಚ್ಚಿದರೆ ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ ಹೀಗೆ ಮುಂತಾದ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಉಪ್ಪನ್ನು ಬದಲಿಸಬೇಕು.

ಉಪ್ಪನ್ನು ಬದಲಾಯಿಸುವಾಗ ಹಳೆಯ ಉಪ್ಪನ್ನು ಒಂದು ಬೌಲ್ ನಲ್ಲಿ ನೀರು ಹಾಕಿ ಅದರಲ್ಲಿ ಉಪ್ಪನ್ನು ಕರಗಿಸಿ ಈ ನೀರನ್ನು ಯಾರು ಓಡಾಡದ ಜಾಗದಲ್ಲಿ ಹಾಕಬೇಕು. ಹೀಗೆ ಉಪ್ಪಿನ ದೀಪವನ್ನು ಹಚ್ಚಬೇಕು ಇದರಿಂದ ಮನೆಗೆ ಒಳ್ಳೆಯದಾಗುತ್ತದೆ. ಪ್ರತಿದಿನ ಉಪ್ಪಿನ ದೀಪ ಹಚ್ಚುವುದು ಒಳ್ಳೆಯದು. ಈ ಮಾಹಿತಿ ಬಹಳ ಪ್ರಯೋಜನವಾಗಿದ್ದು ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!