ನಾವು ದೇವರನ್ನು ಹಲವಾರು ರೂಪದಲ್ಲಿ ಪೂಜೆ ಮಾಡುತ್ತೇವೆ. ಎಲ್ಲರ ಭಕ್ತಿ ಒಂದೇ ಆದರೂ ಆರಾಧ್ಯ ದೈವ ಬೇರೆ ಬೇರೆ ಆಗಿರುತ್ತದೆ. ನಮ್ಮ ಹಿಂದೂ ಶಾಸ್ತ್ರವು ಸುಮಾರು 33ಕೋಟಿಗೂ ಹೆಚ್ಚು ದೇವರನ್ನು ಒಳಗೊಂಡಿದೆ. ಶಿವನನ್ನು ಲಿಂಗದ ರೂಪದಲ್ಲಿ ಪೂಜಿಸುವುದು ಸಾಮಾನ್ಯ. ಹಾಗೆಯೇ ಅದರ ಜೊತೆಗೆ ಪ್ರಪಂಚಾದ್ಯಂತ ಶಿವ ದೇಗುಲಗಳೂ ಇವೆ. ಆದರೆ ಶಿಲಾರೂಪದ ವಿಷ್ಣುವೇ ಸಾಲಿಗ್ರಾಮ. ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗವನ್ನು ನೋಡುವುದು ಮತ್ತು ಪೂಜಿಸಿದಕ್ಕೆ ಸಮಾನ. ಆದ್ದರಿಂದ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕೋಟ್ಯಾಂತರ ವರ್ಷಗಳ ಹಿಂದೆಯೇ ಸಾಲಿಗ್ರಾಮ ಇದೆ ಎಂದು ಸಂಶೋಧಕರು ಕಂಡು ಹಿಡಿದಿದ್ದಾರೆ. ಪದ್ಮ ಪುರಾಣದಲ್ಲಿ ಶಿವನು ಸಾಲಿಗ್ರಾಮವನ್ನು ಹೀಗೆ ಹೇಳಿದ್ದಾನೆ. ಶಿಲಾ ರೂಪದಲ್ಲಿ ಇರುವ ವಿಷ್ಣುವೇ ಸಾಲಿಗ್ರಾಮ ಎಂದು. ಒಂದು ಸಾಲಿಗ್ರಾಮವನ್ನು ಪೂಜಿಸಿದರೆ 100 ಶಿವಲಿಂಗವನ್ನು ಪೂಜೆ ಮತ್ತು ಆರಾಧನೆ ಮಾಡಿದಂತೆ ಎಂದು ಪುರಾಣಗಳು ಹೇಳುತ್ತವೆ. ನೇಪಾಳದ ಮಸ್ತಾಂಗ್ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿ ಹರಿಯುವ ಕಾಲೀಘಂಡಕಿ ನದಿ ಇದೆ. ಈ ನದಿಯ ಸಮೀಪದಲ್ಲಿ ಶಾಲಿಗ್ರಾಮ ಎನ್ನುವ ಸ್ಥಳವಿದೆ. ಅಲ್ಲಿ ಈ ಕಲ್ಲು ಸಾಲಿಗ್ರಾಮದ ರೂಪ ಪಡೆಯುತ್ತದೆ. ಆದ್ದರಿಂದ ಈ ಪ್ರದೇಶವನ್ನು ಶಾಲಿಗ್ರಾಮಶಿಲಾ ಎಂದು ಕರೆಯುತ್ತಾರೆ. ಈ ನದಿಯ ಗರ್ಭದಲ್ಲಿ ಸಾಲಿಗ್ರಾಮದ ಶಿಲೆ ಯಥೇಚ್ಛವಾಗಿ ದೊರೆಯುತ್ತದೆ. ಹಿಂದುಗಳ ಸಂಪ್ರದಾಯದ ಪ್ರಕಾರ ವಜ್ರಕೀಟ ಎಂಬ ಹುಳಕ್ಕೆ ಈ ಕಲ್ಲು ಆಶ್ರಯ ನೀಡುತ್ತದೆ.
ವಜ್ರದ ಹಲ್ಲನ್ನು ಹೊಂದಿರುವ ಈ ಕೀಟ ಕಲ್ಲನ್ನು ಹಲ್ಲಿನಿಂದ ಕೊರೆದು ಒಳಗೆ ಹೋಗುತ್ತದೆ. ಇದರಿಂದ ಚಕ್ರದ ರೀತಿಯ ಕೆತ್ತನೆ ಆಗುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪಾದನೆ ಆಗುತ್ತದೆ. ಪಾಲಿಶ್ ಮಾಡಿದ ಸಾಲಿಗ್ರಾಮಗಳು ದುಬಾರಿಯಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ ಎಲ್ಲಾ ಸಾಲಿಗ್ರಾಮಗಳು ಅಸಲಿ ಅಲ್ಲ. ಅಸಲಿ ಸಾಲಿಗ್ರಾಮವನ್ನು ಪೂಜಿಸಿದರೆ ಮಾತ್ರ ಪುಣ್ಯ ದೊರಕುತ್ತದೆ. ಇವುಗಳು ನೀಲಿ, ಕಪ್ಪು, ಹಸಿರು ಮತ್ತು ಹಳದಿ ಬಣ್ಣದಲ್ಲಿ ದೊರಕುತ್ತದೆ. ಚಿನ್ನ ಮತ್ತು ಹಳದಿ ಬಣ್ಣದ ಸಾಲಿಗ್ರಾಮವು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಇದನ್ನು ಪೂಜಿಸಿದರೆ ಆರ್ಥಿಕ ಸುಧಾರಣೆ ಆಗುತ್ತದೆ ಮನಸ್ಸಿಗೆ ಶಾಂತಿ ದೊರಕುತ್ತದೆ ಮತ್ತು ಹಲವಾರು ತೊಂದರೆಗಳು ನಿವಾರಣೆ ಆಗುತ್ತವೆ ಎಂದು ಹೇಳುತ್ತಾರೆ.
ಇದನ್ನು ಅಂಗಡಿಯಲ್ಲಿ ದೇವರ ಪೂಜೆ ಮಾಡಿಯೇ ವ್ಯಾಪಾರಕ್ಕೆ ಇಡುತ್ತಾರೆ. ಆದರೆ ಕಪ್ಪು ಬಣ್ಣದ ಸಾಲಿಗ್ರಾಮವನ್ನು ಪೂಜೆ ಮಾಡುವವರೇ ಜಾಸ್ತಿ. ಕಪ್ಪು ಬಣ್ಣ ಇರುವ ಸಾಲಿಗ್ರಾಮವು ನಂತರದಲ್ಲಿ ಬಣ್ಣ ಬದಲು ಆಗುತ್ತಾ ಹೋಗುತ್ತದೆ. ತಾಮ್ರದ ತಟ್ಟೆಯಲ್ಲಿ ಸಾಲಿಗ್ರಾಮವನ್ನು ಇಟ್ಟು ಹಣ್ಣು ಮತ್ತು ಹೂವುಗಳಿಂದ ಪೂಜಿಸುತ್ತಾರೆ. ಪೂಜೆಯನ್ನು ಬೆಳಿಗ್ಗೆ ಅಥವಾ ಸಂಜೆ ಮಾಡಬೇಕು. ಸಾಲಿಗ್ರಾಮವನ್ನು ತೊಳೆಯಲು ಬಳಸುವ ನೀರು ಪವಿತ್ರವಾಗಿ ಇರಬೇಕು. ಮನೆಯಲ್ಲಿ ಇದನ್ನು ಇಟ್ಟು ಪೂಜೆ ಮಾಡುವುದರಿಂದ ಆರೋಗ್ಯ, ಸಂಪತ್ತು ಮತ್ತು ಧನ ಮುಂತಾದವುಗಳನ್ನು ಪಡೆಯಬಹುದು. ಮನೆಯಲ್ಲಿ ಇರುವ ಋಣಾತ್ಮಕ ಶಕ್ತಿಯನ್ನು ಇದು ಹೋಗಲಾಡಿಸಿ ಕೆಟ್ಟ ದೃಷ್ಟಿಯಿಂದ ಮನೆಯನ್ನು ರಕ್ಷಿಸುತ್ತದೆ. ಮೃತ ವ್ಯಕ್ತಿ ವೈಕುಂಠ ಸೇರಬೇಕು ಎಂದು ಸಾಲಿಗ್ರಾಮದ ನೀರನ್ನು ಹಾಕಲಾಗುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466