ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಖಾಯಿಲೆಗಳು ಬರುವುದು ಸಹಜ. ಹಾಗೆಯೇ ಮನುಷ್ಯನಿಗೆ ಬರುವ ಖಾಯಿಲೆಗಳಲ್ಲಿ ಸಕ್ಕರೆ ಖಾಯಿಲೆ ಕೂಡ ಒಂದು. ಇದು ಹೆಚ್ಚಾಗಿ 40ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಇದು ಚಿಕ್ಕ ವಯಸ್ಸಿನವರಿಗೆ ಬರುವುದಿಲ್ಲ. ಸಕ್ಕರೆ ಖಾಯಿಲೆ ಇದ್ದವರು ಸಕ್ಕರೆಯನ್ನು ಹಾಕಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಹಾಗೆಯೇ ಬೆಲ್ಲವನ್ನು ಹಾಕಿದ ಪದಾರ್ಥಗಳನ್ನು ತಿನ್ನಬಹುದು. ಹಾಗೆಯೇ ನಾವು ಇಲ್ಲಿ ಸಕ್ಕರೆ ಖಾಯಿಲೆ ಇರುವವರು ತಿನ್ನಬಹುದಾದ ಹಣ್ಣುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದಾಗಿ ಕಿವಿಹಣ್ಣು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ಇರುವ ಒಳಜ್ವರವನ್ನು ತೆಗೆಯುತ್ತದೆ. ಇದು ಅತಿ ಹೆಚ್ಚು ಫೈಬರ್ ಅಂಶ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ನ್ನು ಹೊಂದಿರುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದೇಹದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ಆದರೆ ಇದು ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿ ಹಣ್ಣು ಆಗುತ್ತದೆ. ಏಕೆಂದರೆ ಇದಕ್ಕೆ ಬಹಳ ಬೆಲೆಯಿದೆ. ಹಾಗೆಯೇ ಬೆಣ್ಣೆಹಣ್ಣು ಇದು ಫೈಬರ್ ಅಂಶ ಹೊಂದಿದ್ದು ಒಂದು ಬೆಣ್ಣೆಹಣ್ಣನ್ನು ತಿಂದರೆ ದೇಹಕ್ಕೆ 100ಕ್ಯಾಲೋರಿ ಶಕ್ತಿ ದೊರಕುತ್ತದೆ. 26ಗ್ರಾಮ್ ಕಾರ್ಬೋಹೈಡ್ರೇಟ್ ನ್ನು ಇದು ಹೊಂದಿರುತ್ತದೆ. ಸಿಹಿ ತಿನ್ನಬೇಕು ಅನಿಸಿದರೆ ಈ ಹಣ್ಣನ್ನು ತಿನ್ನಬೇಕು.
ಹಾಗೆಯೇ ಕಿತ್ತಳೆಹಣ್ಣು ಇದು ನೋಡಲು ಕೇಸರಿ ಬಣ್ಣವನ್ನು ಹೊಂದಿದ್ದು ನೈಸರ್ಗಿಕವಾಗಿ ಸಿಹಿ ಮತ್ತು ಹುಳಿಯನ್ನು ಹೊಂದಿದ್ದು ಹೇರಳವಾಗಿ ಸಿ ವಿಟಮಿನ್ ಹೊಂದಿರುತ್ತದೆ. ಹಾಗೆಯೇ ವಿಟಮಿನ್ ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹಾಗೆಯೇ ಪೊಟ್ಯಾಶಿಯಂ ನ್ನು ಕೂಡ ಇದು ಹೊಂದಿದ್ದು ಇದನ್ನು ದಿನನಿತ್ಯ ಸೇವಿಸಿದರೆ ಬಹಳ ಒಳ್ಳೆಯದು. ಸಕ್ಕರೆಯ ಮಟ್ಟವನ್ನು ಇದು ಸಮತೋಲನದಲ್ಲಿ ಇಡುತ್ತದೆ. ಸ್ಟ್ರಾಬೆರಿಯನ್ನು ಸಕ್ಕರೆ ಖಾಯಿಲೆ ಇರುವವರಿಗೆ ಒಳ್ಳೆಯ ಹಣ್ಣು ಎನ್ನಲಾಗಿದೆ. ಏಕೆಂದರೆ ಇದು ವಿಟಮಿನ್ ಗಳನ್ನು ಹೊಂದಿದ್ದು ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ನೀಡುತ್ತದೆ. ಅತೀ ಕಡಿಮೆ ಫೈಬರ್ ಮತ್ತು ವಿಟಮಿನ್ ಸಿಯನ್ನು ಹೊಂದಿರುತ್ತದೆ.
ಹಾಗೆಯೇ ಪೇರಳೆಹಣ್ಣು ಅತಿ ಹೆಚ್ಚು ಲೈಕೋಪೇನ್ ಮತ್ತು ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮತ್ತು ಮ್ಯಾಗ್ನೆಶಿಯಂನ್ನು ಹೊಂದಿರುತ್ತದೆ. ವೈಜ್ಞಾನಿಕ ಸಂಶೋಧನೆ ಪ್ರಕಾರ ಇದರ ಎಲೆ ಕೂಡ ಸಕ್ಕರೆ ಖಾಯಿಲೆ ಇರುವ ರೋಗಿಗಳಿಗೆ ಬಹಳ ಒಳ್ಳೆಯದು. ಇದರಲ್ಲಿ ಇರುವ ಪೊಟ್ಯಾಶಿಯಂ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ನೇರಳೆಹಣ್ಣು ಇದು ಕೂಡ ಬಹಳ ಒಳ್ಳೆಯದು. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿನಿತ್ಯ ಇದನ್ನು ಸೇವನೆ ಮಾಡಿದರೆ ಬಹಳ ಒಳ್ಳೆಯದು. ಹಾಗೆಯೇ ಸೇಬುಹಣ್ಣನ್ನು ಕೂಡ ದಿನನಿತ್ಯ ತಿನ್ನಬೇಕು. ಇದು ಕೂಡ ಸಕ್ಕರೆ ಖಾಯಿಲೆ ಇರುವವರಿಗೆ ಬಹಳ ಒಳ್ಳೆಯದು. ಆದ್ದರಿಂದ ವೈದ್ಯರು ಹೇಳುವ ಹಾಗೆ ಏನಾದರು ಆದಾಗ ಔಷಧಿ ಮಾಡುವ ಬದಲು ಏನೂ ಆಗದಂತೆ ನೋಡಿಕೊಳ್ಳುವುದು ಉತ್ತಮ.