ಸಾಧುಕೋಕಿಲ ಹಾಸ್ಯನಟರಾಗಿ ಕನ್ನಡ ಸಿನಿ ಪ್ರಿಯರಿಗೆ ಗೊತ್ತು. ಭಾರತದ ಪ್ರಸ್ತುತ ಖ್ಯಾತ ಹಾಸ್ಯನಟರ ಸಾಲಿನಲ್ಲಿ ನಿಲ್ಲುವ ಸಾಧುಕೋಕಿಲ, ಕನ್ನಡ ಸಿನಿಮಾ ರಂಗದ ಈಗಿನ ನಂಬರ್ 1 ಹಾಸ್ಯ ನಟ. ಆದರೆ ಸಾಧುಕೋಕಿಲ ಕೇವಲ ಹಾಸ್ಯನಟರಷ್ಟೇ ಅಲ್ಲ. ಅವರದ್ದು ಬಹುಮುಖ ಪ್ರತಿಭೆ. ಸಂಗೀತ ನಿರ್ದೇಶಕ, ಗಾಯಕ ಜೊತೆಗೆ ಅತ್ಯುತ್ತಮ ಸಿನಿಮಾ ನಿರ್ದೇಶಕರೂ ಹೌದು. ಇಂತಹ ಅದ್ಭುತ ಪ್ರತಿಭೆಯ ಬಗ್ಗೆ ನಾವು ಈ ಲೇಖನದ ಮೂಲಕ ಕೆಲವು ಅಂಶಗಳನ್ನು ತಿಳಿದುಕೊಳ್ಳೋಣ.
ಸಂಗೀತ ನಿರ್ದೇಶಕರಾಗುವ ಕನಸು ಹೊತ್ತು ಸಿನಿಮಾ ರಂಗ ಪ್ರವೇಶಿಸಿದ ಸಾಧುಕೋಕಿಲ ಅವರಿಗೆ ನಟನೆಯ ಅವಕಾಶವೂ ದೊರೆಯಿತು, ಅದನ್ನು ಅವರು ಅದ್ಭುತವಾಗಿ ಬಳಸಿಕೊಂಡರು, ನಂತರ ನಿರ್ದೇಶಕನಾಗುವ ಅವಕಾಶವೂ ದೊರೆಯಿತು ಅದನ್ನೂ ಅವರು ಚೆನ್ನಾಗಿ ಬಳಸಿಕೊಂಡರು. ಸಾಧುಕೋಕಿಲ ಆಯ್ಕೆ ಮಾಡಿಕೊಂಡಿದ್ದ ಕ್ಷೇತ್ರ ಸಂಗೀತ ಕ್ಷೇತ್ರ. ಆದರೆ ನಿರ್ದೇಶನ ಹಾಗಲ್ಲ ಅದು ಅವರಿಗೆ ಬಯಸದೇ ಬಂದ ಭಾಗ್ಯ. ಸಾಧುಕೋಕಿಲ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಕ್ತ ಕಣ್ಣೀರು’. ಉಪೇಂದ್ರ, ರಮ್ಯಾಕೃಷ್ಣ, ಅಭಿರಾಮಿ, ಕುಮಾರ್ ಬಂಗಾರಪ್ಪ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಸಾಧುಕೋಕಿಲ ಅವರಿಗೆ ಸಿನಿಮಾ ನಿರ್ದೇಶನದ ಅವಕಾಶಗಳು ಹುಡುಕಿಕೊಂಡು ಬಂದವು.
ಆದರೆ ರಕ್ತ ಕಣ್ಣೀರು ಸಿನಿಮಾದ ನಿರ್ದೇಶಕ ಸಾಧುಕೋಕಿಲಾ ಆಗಿರಲಿಲ್ಲ, ಸಿನಿಮಾದ ನಿರ್ಮಾಪಕ ಮುನಿರತ್ನ, ರಕ್ತ ಕಣ್ಣೀರು ಸಿನಿಮಾದ ನಿರ್ದೇಶನಕ್ಕಾಗಿ ಆಯ್ಕೆ ಮಾಡಿದ್ದಿದ್ದು ಶಿವಮಣಿ ಅವರನ್ನು. ಗೋಲಿಬಾರ್ ಸಿನಿಮಾ ಖ್ಯಾತಿಯ ಶಿವಮಣಿ, ಉಪೇಂದ್ರ, ಮುನಿರತ್ನ ಒಟ್ಟಾಗಿಯೇ ರಕ್ತ ಕಣ್ಣೀರು ಸಿನಿಮಾದ ಘೋಷಣೆ ಮಾಡಿದ್ದರು. ಆದರೆ ಆ ನಂತರ ಶಿವಮಣಿ ಅವರು ನಟನೆಯಲ್ಲಿ ಬ್ಯುಸಿ ಆಗಿಬಿಟ್ಟರು. ಉಪೇಂದ್ರ ಅವರು ಕಾಲ್‌ಶೀಟ್ ಅನ್ನು ಪಡೆದುಕೊಂಡು ಬಿಟ್ಟಿದ್ದ ಮುನಿರತ್ನ ಅವರ ಬಳಿ ಹೆಚ್ಚು ಸಮಯ ಇರಲಿಲ್ಲ. ಆಗ ಉಪೇಂದ್ರ ಅವರ ಸಲಹೆಯನ್ನೂ ಪಡೆದುಕೊಂಡು ಸಾಧುಕೋಕಿಲ ಅವರನ್ನು ನಿರ್ದೇಶಕರನ್ನಾಗಿ ಘೋಷಿಸಿಬಿಟ್ಟಿರು ಮುನಿರತ್ನ. ಅವಕಾಶವನ್ನು ಕೈಚೆಲ್ಲಲಿಲ್ಲ ಸಾಧುಕೋಕಿಲ ಹಠಾತ್ ಎಂದು ಬಂದ ಅವಕಾಶವನ್ನು ಸುಮ್ಮನೆ ಹೋಗಲು ಬಿಡಲಿಲ್ಲ ಸಾಧುಕೋಕಿಲ. ಬಹುಕಾಲದ ಗೆಳೆಯ ಹಾಗೂ ನಿರ್ದೇಶಕ ಉಪೇಂದ್ರ ಅವರ ಬೆಂಬಲವೂ ಸಾಧುಕೋಕಿಲ ಅವರಿಗೆ ಇತ್ತು, ಹಾಗಾಗಿ ಧೈರ್ಯವಾಗಿ ಸಿನಿಮಾ ನಿರ್ದೇಶಿಸಿ ತೆರೆಗೆ ತಂದರು. ಆ ನಂತರ ನಡೆದಿದ್ದು ಇತಿಹಾಸ ಎಂದೇ ಹೇಳಬಹುದು. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ರಕ್ತ ಕಣ್ಣೀರು ಸಿನಿಮಾ ಉಪೇಂದ್ರ ಅವರದ್ದು, ಹೆಸರಿಗೆ ಮಾತ್ರವೇ ಸಾಧುಕೋಕಿಲ ನಿರ್ದೇಶಕ ಎಂದು ಈಗಲೂ ಕೆಲವರು ಹೇಳುತ್ತಾರೆ. ರಕ್ತ ಕಣ್ಣೀರು ನಂತರ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ಹಿಟ್ ನೀಡಿದ ಸಾಧುಕೋಕಿಲ ಅವರ ಬಾಯಿ ಮುಚ್ಚುವಂತೆ ಮಾಡಿದರು.
ರಕ್ತ ಕಣ್ಣೀರು ಬಳಿಕ ಶಿವರಾಜ್ ಕುಮಾರ್ ನಟನೆಯ ರಾಕ್ಷಸ ಸಿನಿಮಾ ನಿರ್ದೇಶಿಸಿದರು ಸಾಧು, ಅದೂ ಸಹ ಸೂಪರ್ ಹಿಟ್ ಆಯಿತು. ದರ್ಶನ್ ಜೊತೆ ಸುಂಟರಗಾಳಿ, ದರ್ಶನ್-ಉಪೇಂದ್ರ ಕಾಂಬಿನೇಶನ್ ನಲ್ಲಿ ಅನಾಥರು, ಸುದೀಪ್ ಜೊತೆ ತೀರ್ಥ, ಹೀಗೆ ಒಟ್ಟು ಹತ್ತು ಸಿನಿಮಾ ನಿರ್ದೇಶನಾ ಮಾಡಿದ್ದಾರೆ ಸಾಧುಕೋಕಿಲ ಅವರು. ತಮಗೆ ದೊರೆತ ಅವಕಾಶಗಳನ್ನು ಕೈಚೆಲ್ಲಿ ಹೋಗಲು ಬಿಡದೆ ತಾವೊಬ್ಬ ಬಹುಮುಖ ಪ್ರತಿಭೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಅವರು. ಇನ್ನು ಸಾಧು ಕೋಕಿಲ ಅವರ ಮೂಲ ಹೆಸರು ಸಹಾಯ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇವರು ಶ್!!! ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.