ಹಲವಾರು ಬಿಸಿನೆಸ್ ಶುರು ಮಾಡಬಹುದು ಅದರಲ್ಲಿ ಸ್ಯಾರಿ ಬಿಸಿನೆಸ್ ಮಾಡಿ ಲಾಭ ಗಳಿಸಬಹುದು ಆದರೆ ಬಿಸಿನೆಸ್ ಬಗ್ಗೆ ಮಾಹಿತಿ ತಿಳಿದಿರಬೇಕು. ಹಾಗಾಗಿ ಸ್ಯಾರಿ ಬಿಸಿನೆಸ್ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಸ್ಯಾರಿ ಬಿಸಿನೆಸ್ ಮಾಡಲು ಸೀರೆ ಮಾರಲು ಸ್ಕಿಲ್ ಬೇಕು ಅದನ್ನು ಬಿಸಿನೆಸ್ ಮಾಡುತ್ತಾ ಕಲಿಯಬಹುದು. ಸ್ಯಾರಿ ಬಿಸಿನೆಸ್ ಮಾಡುವವರ ಬಳಿ 1-2 ತಿಂಗಳು ಇದ್ದರೆ ಸೀರೆ ಬಗ್ಗೆ ಚೆನ್ನಾಗಿ ಕಲಿತುಕೊಳ್ಳಬಹುದು. ಲೊಕೇಷನ್ ಬಹಳ ಮುಖ್ಯ ಸೀರೆ ಬಿಸಿನೆಸ್ ನ್ನು ಹೆಚ್ಚು ಜನರು ಓಡಾಡುವ ಪ್ರದೇಶದಲ್ಲಿ ಮಾಡಬೇಕು ನಿಮ್ಮದು ಸೀರೆ ಅಂಗಡಿ ಇದೆ ಎಂದು ಜನರಿಗೆ ಗೊತ್ತಾದರೆ ಮಾತ್ರ ಖರೀದಿಸಲು ಬರುತ್ತಾರೆ. ಸೀರೆಯ ವಿಧಗಳು ಬಹಳ ಮುಖ್ಯ ಸೀರೆಯಲ್ಲಿ ಬಹಳಷ್ಟು ವಿಧಗಳಿವೆ ಒಂದೊಂದು ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಸೀರೆಗಳಿರುತ್ತವೆ. ಸೌತ್ ಇಂಡಿಯಾದಲ್ಲಿ ಸಿಲ್ಕ್ ಸ್ಯಾರಿ, ಬಿಹಾರದಲ್ಲಿ ಸುತ್ತಿ ಸ್ಯಾರಿ, ಮಹಾರಾಷ್ಟ್ರದಲ್ಲಿ ಪೈಟಣಿ ಸ್ಯಾರಿ ಪ್ರಚಲಿತ. ಸೀರೆಯ ಸ್ಟಾಕ್ ಬಗ್ಗೆ ಗೊಂದಲ ಇದ್ದರೆ ಸೀರೆಯ ಮೆನುಫಾಕ್ಚ್ ರ್ ಯಾರ ಬಳಿ ಮಾಡುತ್ತೀರೊ ಅವರ ಹತ್ತಿರ ನಿಮ್ಮ ಅಂಗಡಿ ಯಾವ ಏರಿಯಾದಲ್ಲಿ ಇದೆ ಎಂದು ಹೇಳಿದರೆ ಅವರು ಆ ಏರಿಯಾಕ್ಕೆ ತಕ್ಕ ಹಾಗೆ ಸೀರೆಯನ್ನು ಕೊಡುತ್ತಾರೆ. ಸೀರೆಯ ಶಾಪ್, ಹೋಲಸೇಲ್ ಅಥವಾ ಶೋ ರೂಮ್ ಇಡತೀರಾ ನೋಡಿಕೊಳ್ಳಬೇಕು. ಮೊದಲು ಇನ್ವೆಸ್ಟ್ ಮಾಡುವುದು ರೆಂಟ್ ಗೆ ಸೆಕ್ಯುರಿಟಿ ಡಿಪಾಸಿಟ್ ಕೊಡಬೇಕಾಗುತ್ತದೆ ಸಣ್ಣ ಶಾಪ್ ಅಂದರೂ 7-8,000ಹಣ ಬೇಕು ನಂತರ ಇನ್ ವೆಸ್ಟ್ ಮಾಡಬೇಕಾಗಿರುವುದು ಶಾಪ್ ಸೆಟ್ಅಪ್ ಮಾಡಬೇಕು ನಂತರ ಸ್ಟಾಕ್ ಗೆ ಇನ್ ವೆಸ್ಟ್ ಮಾಡಬೇಕಾಗುತ್ತದೆ. ಸಣ್ಣ ಶಾಪ್ ಆದರೆ 2-2,50,00 ಹಣದಲ್ಲಿ ಬಿಸಿನೆಸ್ ಶುರು ಮಾಡಬಹುದು. ಹೋಲಸೇಲ್ ಮಾಡುವುದಾದರೆ 5-7ಲಕ್ಷ ಇನ್ ವೆಸ್ಟ್ ಮಾಡಬೇಕಾಗುತ್ತದೆ. ಶೋ ರೂಮ್ ಆಗುವುದಾದರೆ ಜಾಸ್ತಿ ಬಂಡವಾಳ ಹಾಕಬೇಕಾಗುತ್ತದೆ ಕೋಟಿ ಅಂದರೂ ಕಡಿಮೆ.
ಇದರ ಲಾಭ ನೋಡುವುದಾದರೆ ಸೀರೆಗಳನ್ನು ಹೆಚ್ಚು ಮಾರಿದಾಗ ಹೆಚ್ಚು ಲಾಭ ಪಡೆಯಬಹುದು ಹೆಚ್ಚಿನ ಬೆಲೆಯ ಸೀರೆಗಳನ್ನು ಖರೀದಿ ಮಾಡಿದರೆ ಜನರಿಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಲೋಡ್ ಮಾಲ್ ಗಳನ್ನು ಖರೀದಿ ಮಾಡಬೇಕಾಗುತ್ತದೆ ಅಂದರೆ ಹೋಲ್ ಸೇಲ್ ರ ಬಳಿ ಇರುವ ಸ್ಟಾಕ್ ಕಡಿಮೆ ಬೆಲೆಗೆ ಸಿಗುತ್ತದೆ. ಇದರಿಂದ ಲಾಭ ದೊರೆಯುತ್ತದೆ. ಇನ್ನು ರೇಂಜ್ ಮೇಲೆಯೂ ಲಾಭ ಗಳಿಸಬಹುದು 200-300ರೂ ಸೀರೆಗಳಿಗೆ ,40-50ರೂ ಲಾಭ ಗಳಿಸಬಹುದು 500ಕ್ಕಿಂತ ಹೆಚ್ಚು ಬೆಲೆಯ ಸೀರೆಗಳಿಂದ 200-300ರೂ ಸಿಗುತ್ತದೆ. ರೀಟೇಲರಸಗೆ 15-20% ಲಾಭ, ಹೋಲಸೇಲರಸಗೆ 40-50% ಲಾಭ, ಶೋ ರೂಮ್ ಗೆ 50%ಕ್ಕಿಂತ ಹೆಚ್ಚು ಲಾಭ ದೊರೆಯುತ್ತದೆ. ಸೀರೆ ಬಿಸಿನೆಸ್ ಶುರು ಮಾಡಲು ಮೊದಲು ಹೋಲಸೇಲರಸ ಬಳಿ ಹೋದರೆ ಸೀರೆಯ ಬಗ್ಗೆ ತಿಳಿಯಬಹುದು. ಗೂಡ್ಸ್ ರಿಟರ್ನ್ ಪೊಲಿಸಿ ಬಗ್ಗೆ ತಿಳಿದಿರಬೇಕು ಯಾವ ಸೀರೆಗಳು ಮಾರಾಟವಾಗುತ್ತದೆ ಎಂಬುದು ತಿಳಿದಿರುವುದಿಲ್ಲ ಹಾಗಾಗಿ ಸೀರೆಗಳು ಮಾರಾಟವಾಗದಿದ್ದರೆ ವಾಪಸ್ ಕೊಡಬಹುದು. ಕೊನೆಯದಾಗಿ ಮಾರ್ಕೆಟಿಂಗ್ ಮುಖ್ಯ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳಬಹುದು.