ಜೀವನದಲ್ಲಿ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡು ಬದುಕುವುದು ತುಂಬಾ ಕಷ್ಟವಾದ ಮಾತು. ಒಬ್ಬ ಪರಿಪೂರ್ಣವಾದ ವ್ಯಕ್ತಿ ಆಗುವುದು ಅಂದರೆ ಅದು ಸಾಧಾರಣವಾದ ಮಾತೇ ಅಲ್ಲ. ಬದುಕಿನ ಉದ್ದಕ್ಕೂ ಎಲ್ಲರಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಹಾಗೂ ಸತ್ಯವಾಗಿ ನಡೆದುಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಸಮಯ ಸಂದರ್ಭಗಳು ಎಲ್ಲರನ್ನೂ ಬದಲಾಯಿಸುತ್ತವೆ ಎನ್ನುವುದು ಅತಿ ದೊಡ್ಡ ಸತ್ಯ. ನಮ್ಮ ಭಾರತ ದೇಶದಲ್ಲಿ ಇರುವಂತಹ ಜ್ಯೋತಿಷ್ಯ ಶಾಸ್ತ್ರ ಪ್ರಪಂಚದ ಯಾವುದೇ ವಿದ್ಯೆಗು ಕಡಿಮೆ ಏನು ಇಲ್ಲ. ನಿಖರವಾಗಿ ಎಲ್ಲರ ಭವಿಷ್ಯವನ್ನು ಹೇಳುವ ಒಂದು ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಜ್ಯೋತಿಷ್ಯ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವವರ ಮೇಲೆ ಅದು ನಿರ್ಧಾರ ಆಗಿರುತ್ತದೆ. ಬ್ರಿಟಿಷರು ಭೂಮಿ, ಸೂರ್ಯ, ಗ್ರಹಗಳ ಚಲನೆ ಇವುಗಳ ಬಗ್ಗೆ ಅಧ್ಯಯನ ಮಾಡುವ ಮೊದಲೇ ನಮ್ಮ ಶಾಸ್ತ್ರದಲ್ಲಿ ಭೂಮಿ ಸೂರ್ಯನ ಚಲನೆಯನ್ನು ಬಗ್ಗೆ ಮೊದಲೇ ಉಲ್ಲೇಖ ಆಗಿತ್ತು. ಇನ್ನು ಮುಖ್ಯ ವಿಷಯಕ್ಕೆ ಬರುವುದಾದರೆ, ಸಾಮಾನ್ಯವಾಗಿ ಹೆಸರಿನ ಮೂಲಕ ಒಬ್ಬ ವ್ಯಕ್ತಿ ಹೀಗೆ ಇರಬಹುದು ಎಂದು ಹೇಳಲಾಗುತ್ತದೆ ಎಂಬುದನ್ನು ಹೇಳುತ್ತದೆ ನಮ್ಮ ಜ್ಯೋತಿಷ್ಯ ಶಾಸ್ತ್ರ. ಆದರೆ ಇದು ಎಷ್ಟರ ಮಟ್ಟಿಗೆ ಅನ್ವಯ ಆಗುತ್ತದೋ ಗೊತ್ತಿಲ್ಲ. ಆಂಗ್ಲ ಭಾಷೆಯ “S” ಇಂದ ಆರಂಭ ಆಗುವ ವ್ಯಕ್ತಿಗಳು ಜೀವನದಲ್ಲಿ ಹೀಗೆ ಇರುತ್ತಾರೆ ಎಂದು ಹೇಳುತ್ತಾರೆ.
ಈ ಹೆಸರಿನ ಜನರು ತುಂಬಾ ಶ್ರಮ ಜೀವಿಗಳು ಎಂದು ಹೇಳುತ್ತಾರೆ. ಅವರು ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಮತ್ತು ಪರಿಶ್ರಮದ ಮೇಲೆ ಗುರಿಯನ್ನು ಸಾಧಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಜನರು ಬಹಳ ಬುದ್ಧಿವಂತರು ಮತ್ತು ಎಲ್ಲಾ ಜ್ಞಾನಗಳನ್ನು ಪಡೆದಿರುತ್ತಾರೆ. ಇವರುಸಾಮಾನ್ಯವಾಗಿ ನೋಡಲು ಬಹಳ ಆಕರ್ಷಿತರಾಗಿ ಇರುತ್ತಾರೆ. ವಿಶೇಷವಾಗಿ ಹುಡುಗಿಯರಿಗೆ ಇರುವ ಗುಣಗಳು ತುಂಬಾ ಇಷ್ಟ ಆಗತ್ತೆ. S ಅಕ್ಷರದಿಂದ ಆರಂಭ ಆಗುವ ಹೆಸರಿನ ವ್ಯಕ್ತಿಗಳು ಪ್ರೀತಿಯ ಬಗ್ಗೆ ಸ್ವಲ್ಪ ಗಂಭೀರ ಆಗಿರುತ್ತಾರೆ. ಅವರು ತಮ್ಮ ವೈವಾಹಿಕ ಜೀವನದಲ್ಲಿ ಕೂಡ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಹೆಚ್ಚಾಗಿ ಇವರನ್ನು ನಿಷ್ಠಾವಂತರು ಎಂದು ಪರಿಗಣಿಸಲಾಗುತ್ತದೆ. ಚಿಕ್ಕ ಪುಟ್ಟ ವಿಷಯಗಳಿಗೂ ಸಹ ಕ್ಷಮೆ ಕೇಳುವ ಮನಸ್ಸು ಇವರಿಗೆ ಇರತ್ತೆ. ಇನ್ನೊಬ್ಬರನ್ನು ನಗಿಸಿ ಅವರು ನಗುವ ಜೀವನ ಇವರದ್ದಾಗಿರುತ್ತದೆ.
ತಮ್ಮ ಪ್ರೀತಿ ನಡವಳಿಕೆಯಿಂದ ಜನರ ಹೃದಯ ಗೆಲ್ಲುತ್ತಾರೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ. ಯಾವುದೇ ಸುಖ ಹಾಗೂ ದುಖದಲ್ಲಿ ಒಟ್ಟಾಗಿ ನಿಲ್ಲುತ್ತಾರೆ. ಹೆಚ್ಚು ಭಾವನಾ ಜೀವಿ ಆಗಿರುತ್ತಾರೆ ಮತ್ತು ಅವರ ವೈಫಲ್ಯಗಳನ್ನು ಎಲ್ಲರ ಮುಂದೆ ಹೇಳಿಕೊಳಲು ಇಷ್ಟ ಪಡುವುದಿಲ್ಲ. S ಅಕ್ಷರದಿಂದ ಆರಂಭ ಆಗುವ ವ್ಯಕ್ತಿಗಳು ಯಾರಾದರೂ ತೊಂದರೆಯಲ್ಲಿ ಇದ್ದರೆ ಅವರಿಗೆ ಸಹಾಯ ಮಾಡಲು ಮೊದಲು ಮುಂದೆ ಬರುತ್ತಾರೆ. S ಅಕ್ಷರದ ವ್ಯಕ್ತಿಗಳು ಮನದ ಒಳಗೆ ಒಂದು ಸ್ವಭಾವ ಹಾಗೂ ಮನದ ಹೊರಗೆ ಒಂದು ಸ್ವಭಾವ ಈ ರೀತಿಯ ಎರಡು ಬಗೆಯ ಸ್ವಭಾವವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳು ಮೇಲ್ನೋಟಕ್ಕೆ ತುಂಬಾ ಸಂತೋಷವಾಗಿ ಕಂಡರೂ ತುಂಬಾ ಸೂಕ್ಷ್ಮ ಜೀವಿಗಳು ಆಗಿರುತ್ತಾರೆ. ಅಂದರೆ ಅವರು ಮನಸ್ಸಿನ ಒಳಗೆ ಒಂದು ಹಾಗೂ ಮನಸ್ಸಿನ ಹೊರಗೆ ಒಂದು ರೀತಿಯ ಭಾವನೆಗಳನ್ನು ಹೊಂದಿರುತ್ತಾರೆ. ಆದರೆ ಆ ಭಾವನೆಗಳು ಯಾವುದೇ ಕೆಟ್ಟ ಸ್ವಭಾವವನ್ನು ತೋರುವುದಿಲ್ಲ. ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ಹುಡುಕಲು ಪ್ರಯತ್ನಿಸುತ್ತಾರೆ.ಇದು S ಅಕ್ಷರದಿಂದ ಆರಂಭ ಆಗುವ ಹೆಸರಿನ ವ್ಯಕ್ತಿಗಳ ಭವಿಷ್ಯ