ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಕರ್ತವ್ಯ ನಿರ್ವಹಣೆಯಲ್ಲಿ ತಮಗೆ ಕಿರುಕುಳ ನೀಡುತ್ತಿದ್ದಾರೆ, ಅವರು ನೀಡುತ್ತಿರುವ ಕಿರುಕುಳ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಆರೋಪಿಸಿ ಶಿಲ್ಪಾ ರಾಜೀನಾಮೆ ಘೋಷಿಸಿದ್ದರು. ಇದರ ಬೆನ್ನಲ್ಲೇ ಶಿಲ್ಪಾ ನಾಗ್ ಅವರು ಸಿಎಸ್‌ಆರ್ ಅನುದಾನ ಬಳಕೆಯ ಲೆಕ್ಕ ನೀಡಿಲ್ಲ, ಕೊರೋನಾ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿಲ್ಲ. ಈ ಬಗ್ಗೆ ಕೇಳಿದ್ದಕ್ಕೆ ಅನಗತ್ಯ ವಿವಾದ ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ದೂರಿದ್ದರು. ರಾಜಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ತಿಕ್ಕಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ತೆರೆ ಎಳೆದಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಶನಿವಾರ ತಡರಾತ್ರಿ ವರ್ಗಾವಣೆ ಮಾಡಿದೆ. ಈಗ ರೋಹಿಣಿ ಸಿಂಧೂರಿ ಅವರು ಇನ್ನೊಂದು ಹೊಸ ಆಟವನ್ನು ಆರಂಭಿಸಿದ್ದು ಇದಕ್ಕೆ ರಾಜ್ಯ ಸರ್ಕಾರವೇ ಶಾಕ್ ಆಗಿದೆ. ಹಾಗಿದ್ರೆ ರೋಹಿಣಿ ಸಿಂಧೂರಿ ಅವರ ಮುಂದಿನ ನಡೆ ಏನು ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ. ಆದರೆ ಭೂ ಮಾಫಿಯಾದ ಬಗ್ಗೆ ಅವರು ಹಚ್ಚಿರುವ ಬೆಂಕಿ ಮಾತ್ರ ಇನ್ನೂ ಆರಿದಂತೆ ಕಾಣುತ್ತಿಲ್ಲ. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತು ನಗರಪಾಲಿಕೆ ಆಯುಕ್ತೆಯಾಗಿದ್ದ ಶಿಲ್ಪನಾಗ್ ನಡುವಿನ ಕಿತ್ತಾಟ ಬೀದಿರಂಪವಾಗಿತ್ತು. ಈ ಕಾರಣಕ್ಕೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈಗ ಮೈಸೂರು ಮಾತ್ರವಲ್ಲ ರಾಜ್ಯದಾದ್ಯಂತ ಭೂಮಾಫಿಯಾಕ್ಕೆ ಮಣಿದು ಸರ್ಕಾರ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಗಳು ಸದ್ದು ಮಾಡುತ್ತಿವೆ. ಸರ್ಕಾರ ಭೂಮಾಫಿಯಾ ಬೆನ್ನಿಗೆ ನಿಂತು ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸಂಸದ ಪ್ರತಾಪ್ ಸಿಂಹ ರೋಹಿಣಿ ಸಿಂಧೂರಿ ವರ್ಗಾವಣೆ ಖಚಿತವಾಗುತ್ತಿದ್ದಂತೆಯೇ ಫೇಸ್ ಬುಕ್ ಲೈವ್ ಗೆ ಬಂದು ಒಂದಷ್ಟು ಆರೋಪಗಳನ್ನು ಮಾಡಿದ್ದರು. ಅದಾದ ನಂತರ ಸಾ. ರಾ. ಮಹೇಶ್ ಒಂದಷ್ಟು ಸವಾಲುಗಳನ್ನು ಹಾಕಿದ್ದರು. ಇದೀಗ ಈ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿಯನ್ನು ಸರ್ಕಾರ ಮತ್ತೆ ಮೈಸೂರು ಡಿಸಿಯಾಗಿ ಕಳುಹಿಸದಿದ್ದರೆ ನಾವು ಅವರನ್ನು ಸಂಸದೆಯನ್ನಾಗಿ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂಬ ಸವಾಲುಗಳು ಸಾರ್ವಜನಿಕ ವಲಯದಿಂದ ತೇಲಿ ಬರುತ್ತಿದೆ.
ಭೂಗಳ್ಳ ರಾಜಕಾರಣಿಗಳ ವಿರುದ್ಧ ರಾಜಕೀಯವಾಗಿಯೇ ಸೆಡ್ಡು ಹೊಡೆಯಿರಿ. ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರಿನಿಂದಲೇ ಸ್ಪರ್ಧಿಸಿ ಎಂಬ ಒತ್ತಾಯಗಳನ್ನು ಅಭಿಮಾನಿಗಳು ಮಾಡಿದ್ದಾರೆ. ಇನ್ನೊಂದೆಡೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹರಿಗೆ ಸವಾಲಾಗಲಿದ್ದಾರೆ ಎಂಬಂತಹ ರೋಹಿಣಿ v/s ಪ್ರತಾಪ್ ಎಂಬ ಪೋಸ್ಟರ್ ಗಳು ಹರಿದಾಡುತ್ತಿವೆ. ಜೊತೆಗೆ ನಮ್ಮ ಬೆಂಬಲ ರೋಹಿಣಿ ಸಿಂಧೂರಿಗೆ ಎನ್ನುವ ಬರಹಗಳು ಕಾಣಿಸುತ್ತಿವೆ. ಸದ್ಯದ ಮಟ್ಟಿಗೆ ಶಾಸಕ ಸಾ. ರಾ. ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳಿಗೆ ವೇದಿಕೆ ಮಾಡಿಕೊಟ್ಟಿದೆ. ಒಂದಷ್ಟು ರಾಜಕಾರಣಿಗಳು ಮೌನಕ್ಕೆ ಶರಣಾಗಿದ್ದಾರೆ.
ಆದರೆ ಇದೀಗ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆಗಿ ಒಂದು ವಾರವೇ ಆದರೂ ಅವರ ವರ್ಗಾವಣೆಯ ವಿಚಾರ ಮಾತ್ರ ತಣ್ಣಗೆ ಆಗಲಿಲ್ಲ. ರಾಜಕಾರಣಿಗಳು ತಮ್ಮೆಲ್ಲ ಪ್ರಭಾವನ್ನು ಬಳಸಿ ರಾತ್ರೋ ರಾತ್ರಿ ರೋಹಿಣಿ ಸಿಂಧೂರಿ ಅವರನ್ನ ವರ್ಗಾವಣೆ ಮಾಡಿದರು ಅಷ್ಟಕ್ಕೇ ಸುಮ್ಮನಾಗದೆ, ಇಲ್ಲ ಸಲ್ಲದ ಆಡಿಯೋ ಟೇಪ್ ಗಳನ್ನು ಬಿಡುಗಡೆ ಮಾಡಿ ಅದರಲ್ಲಿಯೂ ರೋಹಿಣಿ ಸಿಂಧೂರಿ ಅವರದ್ದೆ ತಪ್ಪು ಎನ್ನುವ ಹಾಗೆ ಬಿಂಬಿಸಲಾಯಿತು. ಆದರೆ ಜನರು ಇದನ್ನೆಲ್ಲ ನಂಬುವಶ್ಟರ ಮಟ್ಟಿಗೆ ಮೂರ್ಖರಾಗಿರಲಿಲ್ಲ. ಎಲ್ಲದರಲ್ಲೂ ರೋಹಿಣಿ ಸಿಂಧೂರಿ ಅವರ ತಪ್ಪೇನೂ ಇಲ್ಲ ಎಂದು ತಿಳಿದರು. ನಂತರ ರೋಹಿಣಿ ಸಿಂಧೂರಿ ತಾವೂ ಸುಮ್ಮನೆ ಕೂರದೇ , ಮೈಸೂರಿನಲ್ಲಿ ನಡೆಯುತ್ತಿದ್ದ ಭೂ ಮಾಫಿಯಾ ಬಗ್ಗೆ ಮೈಸೂರಿನಲ್ಲಿ ಯಾರೆಲ್ಲ ಅಕ್ರಮ ಮಾಡುತ್ತಾ ಇದ್ದಾರೆ ಎಂದು ಅವರ ಹೆಸರನ್ನು ಸಾಕ್ಷಿ ಸಮೇತ ಬಹಿರಂಗ ಮಾಡಿದರು. ಇಷ್ಟೆಲ್ಲಾ ಆದ ನಂತರ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿಗೆ ಪುನಃ ಕರೆಸಿಕೊಳ್ಳಿ ಎನ್ನುತ್ತಿದ್ದ ಅಲ್ಲಿನ ಜನತೆಗೂ ಹಾಗೂ ರೋಹಿಣಿ ಸಿಂಧೂರಿ ಅವರಿಗೂ ಒಂದು ಉತ್ತಮ ಜಯ ಸಿಕ್ಕ ಹಾಗೆ ಆಗಿದೆ. ಈ ಮೂಲಕ ರೋಹಿಣಿ ಸಿಂಧೂರಿ ಅವರ ಎದುರಾಳಿಗಳಿಗೆ ಒಂದು ದೊಡ್ಡ ನಡುಕ ಎದುರಾಗಿದೆ ಎಂದೇ ಹೇಳಬಹುದು. ಹಾಗಾದ್ರೆ ಅಲ್ಲಿ ನಡೆದಿದ್ದಾದರೂ ಎನು? ಮೈಸೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಭೂ ಮಾಫಿಯಾ ಬಗ್ಗೆ ಮೈಸೂರಿನ ಲಿಂಗಾಬುದಿ ಕೆರೆಯ ಬಳಿ ಎರಡು ಎಕರೆಯಲ್ಲಿ ರೆಸಾರ್ಟ್ ನಿರ್ಮಾಣ , ಕೆರೆಯಲ್ಲಿ ಭೂ ಪರಿವರ್ತನೆ ಮತ್ತು ರಾಜಕಾಲುವೆ ಮೇಲೆ ನಿರ್ಮಾಣವಾದ ಸಾರಾ ಕಲ್ಯಾಣ ಮಂಟಪ ಇವುಗಳ ಕುರಿತು ದೊಡ್ಡ ಸತ್ಯವನ್ನು ರೋಹಿಣಿ ಸಿಂಧೂರಿ ಅವರು ತಿಳಿಸಿದ್ದರು. ಇದೀಗ ಇವರು ಹೇಳಿದ ಎಲ್ಲಾ ಭೂ ಮಾಫಿಯಾ ನಿಜ ಎಂದು ಕಂಡುಬರುತ್ತಿದೆ. ಇದೀಗ ಶಾಸಕ ಸಾರಾ ಮಹೇಶ್ ಒಡೆತನದ ಕಲ್ಯಾಣ ಮಂಟಪ ಇದರ ಸರ್ವೇ ಕಾರ್ಯ ಆರಂಭವಾಗಿದೆ. ಹಾಗೂ ಲಿಂಗಬುದಿ ಪಾಳ್ಯದಲ್ಲಿ ಇರುವ ಎರಡು ಎಕರೆ ಜಮೀನಿನ ಸರ್ವೇ ಕಾರ್ಯ ಈಗಾಗಲೇ ಮುಗಿದಿದೆ ಹಾಗೂ ಕಲ್ಯಾಣ ಮಂಟಪ ಇದರ ಸರ್ವೇ ಕಾರ್ಯ ಮುಗಿದ ಕೂಡಲೇ ತನಿಖೆ ಆರಂಭ ಆಗಲಿದೆ. ಒಂದುವೇಳೆ ನಿಜವಾಗಿಯೂ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಸಾರಾ ಮಹೇಶ್ ಕಥೆ ಅಲ್ಲಿಗೆ ಮುಗಿದಾಹಾಗೆ. ಒಟ್ಟಾರೆಯಾಗಿ ನೋಡುವುದಾದರೆ ಸದ್ಯಕ್ಕೆ ಈ ವಿಚಾರಕ್ಕೆ ಸಂಬಂಧಿಸಿದ ಚರ್ಚೆಗಳು ಇಲ್ಲಿಗೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂದೆ ಏನೆಲ್ಲ ಬೆಳವಣಿಗೆಗಳು ನಡೆಯುತ್ತವೆಯೋ? ಎಂಬುದನ್ನು ಕಾದು ನೋಡಬೇಕಾಗಿದೆ.