ನಮಗೆ ಉದ್ಯೋಗ ಸಿಗದಿದ್ದಾಗ ಸರ್ಕಾರವನ್ನು, ಕಂಪನಿಗಳನ್ನು ಸಮಾಜವನ್ನು ದೂಷಿಸುತ್ತೇವೆ. ನಮಗೆ ನಾವೇ ಉದ್ಯೋಗ ಸೃಷ್ಟಿ ಸಿಕೊಳ್ಳವ ಶಕ್ತಿ ಇದ್ದರೂ ಅದನ್ನು ನಿರ್ಲಕ್ಷ್ಯ ಮಾಡಿ ನಮ್ಮನ್ನು ನಾವೇ ಕತ್ತಲೆ ಕೂಪಕ್ಕೆ ನುಕಿಕೊಳ್ಳತ್ತೇವೆ.
ಈ ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಅವರಿಗೆ ತಮ್ಮದೇ ಆದ ಪ್ರತಿಭೆ ಇರುತ್ತದೆ ಅನ್ನೋದನ್ನು ಮರೆಯಬಾರದು. ತನ್ನ ಆಸಕ್ತಿಯನ್ನು ಬಂಡವಾಳ ಮಾಡಿಕೊಂಡು ತಿಂಗಳಿಗೆ 8 ಲಕ್ಷ ಸಂಪಾದಿಸುತ್ತಿರುವ ಈ ಗೃಹಿಣಿ ಕಥೆ ಶುರುವಾಗಿದ್ದು ಹೇಗೆ ಅಂತಾ ತಿಳಿಯೋಣ.
31 ವರ್ಷದ ರೀತು ಕೌಶಿಕ್ ಹರಿಯಾಣ ರಾಜ್ಯದ ಒಂದು ಕುಗ್ರಾಮದಲ್ಲಿ ಹುಟ್ಟಿದ ಇವರಿಗೆ 16 ವರ್ಷಕ್ಕೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದರು.ಆದರೆ ಗಂಡ ಮಾತ್ರ ತುಂಬಾ ಒಳ್ಳೆಯವ ರಾಗಿದ್ದರು.ನಾನು ಕಾಲೇಜಿಗೆ ಹೋಗಿ ಡಿಗ್ರಿ ಮಾಡುತ್ತೇನೆ ಎಂದು ಗಂಡನ ಬಳಿ ರೀತು ಹೇಳಿದಾಗ ಆಕೆಯನ್ನು ಪ್ರೋತ್ಸಾಹಿಸಿದ ಗಂಡ ನಿನ್ನ ಇಷ್ಟ ದಂತೆ ಕಾಲೇಜಿಗೆ ಹೋಗಿ ಡಿಗ್ರಿ ಮಾಡು ಎಂದರು.
ತನ್ನ ಇಬ್ಬರು ಮಕ್ಕಳನ್ನು ಸಾಕುತ್ತಾ ಕಾಲೇಜು ಶಿಕ್ನಣ ಮುಗಿಸಿ ಪದವಿ ಪಡೆದರು. ರೀತಿ ಅವರಿಗೆ ಹ್ಯಾಂಡ್ ಬ್ಯಾಗ್ ಸ್ಪೀಚ್ ಮಾಡುವುದೆಂದರೆ ತುಂಬಾ ಇಷ್ಟ. ಅದೇ ಸಮಯದಲ್ಲಿ ಅಕ್ಕಪಕ್ಕದ ಮನೆಯವರು ವಸ್ತುಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡುವುದನ್ನು ನೋಡಿದ ರೀತು ಅವರು ನಾನ್ಯಾಕೆ ಹ್ಯಾಂಡ್ ಬ್ಯಾಗ್ ತಯಾರಿಸಿ ಆನ್ ಲೈನ್ ನಲ್ಲಿ ಸೇಲ್ ಮಾಡಬಾರದು ಎಂಬ ಆಲೋಚನೆ ರೀತಿ ಅವರಿಗೆ ಬಂತು.
ಆಲೋಚನೆ ಬಂದಿದ್ದೆ ತಡ ಈ ವಿಷಯವನ್ನು ಗಂಡನಿಗೆ ತಿಳಿಸಿದ ರೀತು. ಗಂಡನಿಂದ ಸ್ವಲ್ಪ ಮಟ್ಟಿಗೆ ಕಂಪ್ಯೂಟರ್ ಕಲಿತು ಕೆಲವೊಂದು ಡಿಸೈನ್ ನೊಂದಿಗೆ ಹ್ಯಾಂಡ್ ಬ್ಯಾಗ್ ಸ್ಟೀಚ್ ಮಾಡಿ ಪ್ಲೀಪ್ ಕಾರ್ಟ್ ನಲ್ಲಿ ಸೇಲ್ ಮಾಡಲು ಪ್ರಾರಂಭಿಸಿದರು.
ರೀತು ಅವರ ಹ್ಯಾಂಡ್ ಬ್ಯಾಗ್ ಡಿಸೈನ್ ಹಾಗೂ ಕ್ವಾಲಿಟಿ ಚೆನ್ನಾಗಿದ್ದ ಕಾರಣ ದಿನಕಳೆದಂತೆ ಅವರ ಹ್ಯಾಂಡ್ ಬ್ಯಾಗ್ ಗಳಿಗೆ ಬೇಡಿಕೆ ಹೆಚ್ಚುತ್ತಾ ಹೋಯ್ತು. ಮನೆಯನ್ನು ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತಾ ಆನ್ ಲೇನ್ ನಲ್ಲಿ ಹ್ಯಾಂಡ್ ಬ್ಯಾಗ್ ಮಾರಾಟ ಮಾಡುತ್ತಿರುವ ರೀತು ಅವರು ತಿಂಗಳಿಗೆ 8 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಅಂದ್ರೆ ವರ್ಷಕ್ಕೆ ಸುಮಾರು ಒಂದು ಕೋಟಿ ಗಳಿಸುತ್ತಿದ್ದಾರೆ ರೀತು ಅವರು. ಆಸಕ್ತಿಯ ಕೆಲಸದಿಂದ ಇಷ್ಟು ಹಣ ಸಂಪಾದಿಸುತ್ತಿರುವ ರೀತು ಅವರು ಇತರರಿಗೆ ಮಾದರಿ.ನಿಮಗೂ ಕೂಡ ಇವರ ಈ ಸ್ಪೋರ್ತಿದಾಯಕ ಕೆಲಸ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಲ್ಲಿ ಹಂಚಿಕೊಳ್ಳಿ ಈ ಮೂಲಕ ಬೇರೆಯವರಿಗೆ ಸ್ಪೂರ್ತಿಯಾಗುತ್ತದೆ.