ಸಾಮಾನ್ಯವಾಗಿ ನಾವೆಲ್ಲಾ ಅಕ್ಕಿ ತೊಳೆದ ನೀರನ್ನು ಚೆಲ್ಲಿ ಬಿಡುತ್ತೇವೆ.ಆದರೆ ಇದರಿಂದ ಎಷ್ಟೊಂದು ಔಷಧಿ ಗುಣಗಳಿವೆ ಗೊತ್ತಾ. ಈ ಅಕ್ಕಿಯ ತೊಳೆದ ನೀರು ನಮ್ಮ ಚರ್ಮ ಹಾಗೂ ಕೂದಲಿಗೆ ತುಂಬಾ ಒಳ್ಳೆಯದು.ಇದರಲ್ಲಿ ಅಮೀನೋ ಆಸಿಡ್ಸ್, ವಿಟಮಿನ್ ಬಿ, ವಿಟಮಿನ್ ಇ, ಆಂಟಿ ಆಕ್ಸಿಡೆಂಟ್, ಮಿನರಲ್ಸ್ ಗಳು ಹೇರಳವಾಗಿದೆ.
ಇನ್ನು ಜಪಾನ್, ಚೈನಾ, ಕೊರಿಯಾ ದೇಶದ ಮಹಿಳೆಯರು ಹಿಂದಿನ ಕಾಲದಿಂದಲೂ ಚರ್ಮ ಹಾಗೂ ಕೂದಲಿಗೆ ಅಕ್ಕಿ ತೊಳೆದ ನೀರನ್ನೇ ಬಳಸುತ್ತಿದ್ದಾರೆ. ಇವರ ಚರ್ಮದ ತ್ವಚೆ ಹಾಗೂ ಕೂದಲನ್ನು ನೋಡಿದರೆ ಅಶ್ಚರ್ಯ ಪಡುತ್ತಿರ. ಅಕ್ಕಿತೊಳೆದ ನೀರಿನಿಂದ ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.ಹಾಗಾಗಿ ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ. ಈ ನೀರನ್ನು ಸಂಗ್ರಹಿಸಿ ಹೇಗೆ ಬಳಸಬೇಕು ಎಂಬುದನ್ನೂ ತಿಳಿಯೋಣ.
ಮೊದಲನೆದಾಗಿ ಅಕ್ಕಿ ತೊಳೆದ ನೀರನ್ನು ಚೆಲ್ಲಬಿಡಿ.ಇದರಲ್ಲಿನ ಧೂಳು ,ಕಸ ವು ಆ ನೀರಿನಲ್ಲಿ ಹೋಗುತ್ತದೆ . ಮತ್ತೋಮ್ಮೆಅಕ್ಕಿಯನ್ನು ತೊಳೆದ ನೀರನ್ನು ಒಂದು ಬೌಲ್ ಗೆ ಹಾಕಿ ನಿಮ್ಮ ಮುಖದ ಹಾಗೂ ಕೂದಲಿನ ಆರೈಕೆಗೆ ಬಳಸಿ. ಆಥವಾ ರೀತಿಯಾಗಿ ತಯಾರಿಸಿ ಕೊಳ್ಳಬಹುದು. ಒಂದು ಬೌಲ್ ಗೆ ಅಕ್ಕಿ ಹಾಕಿ ತೊಳೆದು ಅ ನೀರನ್ನು ತೆಗೆದು ಮತ್ತೊಮೆ ನೀರನ್ನು ಅಕ್ಕಿಯನ್ನು ನೆನೆಯಲು ಬಿಡಿ ನಂತರ ಇದನ್ನು ನೀವು ನಿಮ್ಮ ಚರ್ಮ ಹಾಗೂ ಕೂದಲಿಗೆ ಬಳಸಿ.
ಮುಖದಲ್ಲಿ ತಕ್ಷಣ ಗ್ಲೋಬಲ್ ಬರಲು ಹಾಗೂ ಚಿಕ್ಕ ವಯಸ್ಸಿನಲ್ಲಿ ಮುಖದ ಮೇಲೆ ನೀರಿಗೆಗಳಾಗಿದ್ದಾರೆ. ಅಕ್ಕಿ ತೊಳೆದ ನೀಡಿದ ಐಸ್ ಕ್ಯೂಬ್ ಮಾಡಿ ಬಳಸಿ. ಒಂದು ಟ್ರೇಗೆ ಅಕ್ಕಿ ತೊಳೆದ ನೀರನ್ನು ಹಾಗಿ ಫ್ರೀಡ್ಜ್ ನಲ್ಲಿ ಇಡಿ.ನಂತರ ಆದು ಐಸ್ ಕ್ಯೂಬ್ ಆದಮೇಲೆ ಮುಖದ ಮೇಲೆ ಏಸ್ ಕ್ಯೂ ಬ್ ನ್ನು ಲೇಪನ ಮಾಡಿದರೆ ನಿಮ್ಮ ಕಾಂತಿ ಹೆಚ್ಚಾಗುತ್ತದೆ.
ಮುಖ ಬಿಸಿಲಿನ ತಾಪಕ್ಕೆ ಕಪ್ಪಗಾಗಿದ್ದರೆ ಒಂದು ಬೌಲ್ ಗೆ ಅಕ್ಕಿ ತೊಳೆದ ನೀರನ್ನು ಹಾಕಿ ಇದಕ್ಕೆ ಅಲೋವೆರಾ ಜೆಲ್ ಹಾಗೂ ರೋಸ್ ವಾಟರ್ ಬೆರಸಿ ಚೆನ್ನಾಗಿ ಕಲಕಿ, ಫೇಸ್ ವಾಶ್ ಮಾಡಿದ ಮೇಲೆ ಮುಖಕ್ಕೆ ಅಪ್ಲೈ ಮಾಡಿ. ಇಪ್ಪತ್ತು ನಿಮಿಷ ಬಿಟ್ಟು ವಾಶ್ ಮಾಡಿ ಈ ರೀತಿ ವಾರಕ್ಕೆ ಎರಡು ಮಾಡಿಕೊಂಡರೆ ನಿಮ್ಮ ಮುಖದ ಅಂದ ಹೆಚ್ಚಾಗುತ್ತದೆ. ಈ ರೀತಿ ಹಲವಾರು ಉಪಯೋಗ ಗಳಿರುವ ಅಕ್ಕಿ ತೊಳೆದ ನೀರನ್ನು ಚೆಲ್ಲದೆ ನಿಮ್ಮ ಚರ್ಮ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಲು ಬಳಸಿ.