Revenue department: ಜಮೀನಿನ ಪಾಹಣಿ ತಂದೆ ತಾಯಿ ಅಥವಾ ತಾತನ ಹೆಸರು ಇದ್ದರೆ ಅದನ್ನು ನಿಮ್ಮ ಹೆಸರಿಗೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಜಮೀನನ್ನ ಒಬ್ಬರ ಹೆಸರಿಂದ ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕಾದರೆ ಅದಕ್ಕೆ ಹಲವಾರು ನಿಯಮ ಮತ್ತು ಪದ್ಧತಿಗಳು ಇರುತ್ತವೆ ಈ ನಿಯಮಗಳಿಗೆ ಸರ್ಕಾರವು ಸಹ ಸಹಕರಿಸುತ್ತದೆ. ಇದರಿಂದ ಜಮೀನು ವರ್ಗಾವಣೆಯ ಕೆಲಸವು ಸುಲಭವಾಗಿ ನೆರವೇರುತ್ತದೆ ಅನಾವಶ್ಯಕವಾಗಿ ಕಾಲಹರಣ ಮಾಡುವ ಅವಶ್ಯಕತೆ ಇರುವುದಿಲ್ಲ.

ಪಹಣಿ ತಿದ್ದುಪಡಿ ಮಾಡುವ ವಿಧಾನದಲ್ಲಿ ಯಾವುದೇ ರೀತಿಯ ದೋಷಗಳು ಎದುರಾದಲ್ಲಿ ಸಾರ್ವಜನಿಕರ ಹಿತಾಸಕ್ತಿಯಿಂದ ಅದನ್ನು ಸರ್ಕಾರವೇ ಸರಿಪಡಿಸುತ್ತಿದೆ ಈ ಕುರಿತು ಸರ್ಕಾರ ಎಲ್ಲಾ ಕಡೆಯಲ್ಲಿ ಆದೇಶವನ್ನು ಹೊರಡಿಸಿದೆ. ಎಲ್ಲಾ ತಾಲೂಕು ಮಟ್ಟದ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಈ ಸಮಸ್ಯೆಯನ್ನ ಸರಿಪಡಿಸುವ ಕುರಿತು ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ..ಮಹಿಳೆಯರಿಗೆ ಗುಡ್ ನ್ಯೂಸ್: ಯಾವುದೇ ಸ್ವಂತ ಉದ್ಯೋಗಕ್ಕಾಗಿ ಬಡ್ಡಿಯಿಲ್ಲದೆ 3 ಲಕ್ಷ ನೀಡುತ್ತೆ ಸರ್ಕಾರ

ಕಂದಾಯ ಇಲಾಖೆಯ ಪ್ರಮುಖ ಕಾರ್ಯವೆಂದರೆ ಪಹಣಿಯ ದಿನಾಂಕದಲ್ಲಿ ಅಥವಾ ಇನ್ಯಾವುದೇ ರೀತಿಯಲ್ಲಿ ದೋಷ ಇದ್ದಲ್ಲಿ ಅದನ್ನು ಸರಿಪಡಿಸುವುದಾಗಿದೆ ಅಂತೆಯೇ ಜಿಲ್ಲಾಧಿಕಾರಿಗಳು ಪ್ರತಿ ಘಟಕದ ತಹಶೀಲ್ದಾರರಿಗೆ ಅತಿ ಹೆಚ್ಚು ಪಹಣಿಗಳ ತಿದ್ದುಪಡಿ ಮಾಡಲು ಆದೇಶವನ್ನು ನೀಡಿದ್ದಾರೆ. ಹೀಗೆ ಸರ್ಕಾರ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಪಹಣಿ ತಿದ್ದುಪಡಿಯ ಕಾರ್ಯವನ್ನು ಮೊದಲಿಗಿಂತ ಸುಲಭಗೊಳಿಸಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!