ಹೀರೊ, ನಿರ್ದೇಶಕರಾದ ಕೃಷ್ಣ ಅವರು ನಟಿ ಮಿಲನ ನಾಗರಾಜ್ ಅವರೊಂದಿಗೆ ವಿವಾಹವಾಗಲಿದ್ದಾರೆ ಅದರ ಬಗ್ಗೆ ಕೃಷ್ಣ ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಫೆಬ್ರವರಿ 14 ರಂದು ಬೆಂಗಳೂರಿನಲ್ಲಿ ಲವ್ ಮೊಕ್ಟೇಲ್ ಸಿನಿಮಾದಲ್ಲಿ ಆದಿಯಾಗಿ ನಟಿಸಿದ ಕೃಷ್ಣ ಹಾಗೂ ನಿಧಿಮಾ ಆಗಿ ನಟಿಸಿದ ಮಿಲನ ನಾಗರಾಜ್ ಅವರು ವಿವಾಹವಾಗಲಿದ್ದಾರೆ. 7 ವರ್ಷದಿಂದ ಇವರು ಲವ್ ಮಾಡುತ್ತಿದ್ದರು ಒಂದು ಸಿನೆಮಾದಲ್ಲಿ ಗೆದ್ದು ನಂತರ ಮದುವೆಯಾಗುವ ಪ್ಲಾನ್ ಇತ್ತು ಅದೇ ರೀತಿ ಲವ್ ಮೊಕ್ಟೇಲ್ ಸಿನಿಮಾದಲ್ಲಿ ನಟಿಸಿ ಈ ಸಿನಿಮಾ ಜನರ ಮೆಚ್ಚುಗೆ ಗಳಿಸಿದೆ ಎಂದು ಕೃಷ್ಣ ಅವರು ಹೇಳಿದರು. ನಮ್ಮ ಹೆಸರಿಗಿಂತ ಪಾತ್ರದ ಹೆಸರಿನಿಂದ ಗುರುತಿಸುತ್ತಾರೆ ಎಂದರೆ ಒಳ್ಳೆ ಸಿನಿಮಾ ಮಾಡಿದ್ದಾರೆ ಎಂದರ್ಥ ಎಂದು ಅವರು ಹೇಳಿದರು. 7 ವರ್ಷದಿಂದ ಮಿಲನ ಅವರು ಮದುವೆಯ ಬಗ್ಗೆ ಕನಸು ಕಂಡಿದ್ದಾರೆ ಅದರಂತೆ ಮದುವೆಯಾಗುತ್ತದೆ. 2021ರಲ್ಲಿ ಹೊಸ ಹುರುಪು ಬರಲಿ ಎಲ್ಲರಿಗೂ, ನಮ್ಮ ಜೀವನದಲ್ಲೂ ಹೊಸತನ ಬರುತ್ತದೆ ಎಂದು ಕೃಷ್ಣ ಹೇಳಿಕೊಂಡರು. ದಿಡೀರ್ ಮದುವೆಯ ದಿನಾಂಕ ಫಿಕ್ಸ್ ಆಗಿರುವುದು ಕೇಳಿ ಮಿಲನ ಅವರು ಶಾಕ್ ಆದರು ಖುಷಿಯಲ್ಲಿದ್ದಾರೆ. ಪರಿಚಯ ಆಗುವುದಕ್ಕಿಂತ ಮೊದಲು ನಾಯಕಿಯಾಗಿ ಮಿಲನ ಅವರಿಗೆ ಮದರಂಗಿ ಸಿನಿಮಾದಲ್ಲಿ ನಟಿಸಲು ಕೇಳಿದಾಗ ಅವರಿಗೆ ಕಥೆ ಅರ್ಥ ಆಗದೆ ಒಪ್ಪಲಿಲ್ಲ.

ಕೃಷ್ಣ ಅವರೆ ಮೊದಲು ಪ್ರಪೋಸ್ ಮಾಡಿದರು, ಕೃಷ್ಣ ಅವರಿಗೆ ಮಿಲನ ಅವರ ಎಲ್ಲ ಗುಣಗಳು ಇಷ್ಟವಾಗುತ್ತದೆ. ಇತ್ತೀಚೆಗೆ ಫೋಟೋಶೂಟ್ ಮಾಡಿದರು. ಲವ್ ಮೊಕ್ಟೇಲ್ ಸಿನಿಮಾ ಮಾಡಲು ಮಿಲನ ಅವರು ಬಹಳಷ್ಟು ಶ್ರಮವಹಿಸಿದ್ದಾರೆ, ಜೀವನದಲ್ಲೂ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ಕೃಷ್ಣ ಹೇಳಿದ್ದಾರೆ. ಮದುವೆ ಡೇಟ್ ಫಿಕ್ಸ ಆದನಂತರ ತುಂಬಾ ಮೆಸೇಜ್ ಬಂದಿದೆ ಖುಷಿಯಾಗುತ್ತದೆ ಎಂದು ಹೇಳಿದರು. ಮದುವೆ ನಂತರ ಇಬ್ಬರು ನಟನೆಯನ್ನು ಮುಂದುವರೆಸುತ್ತೇವೆ ಎಂದು ಅವರು ಹೇಳಿಕೊಂಡಿದ್ದಾರೆ. ನಮ್ಮ ಮದುವೆ ಕುಟುಂಬದವರಿಗೆ ಖುಷಿ ತಂದಿದೆ ಎಂದು ಹೇಳಿದರು ಒಟ್ಟಿನಲ್ಲಿ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!