ಪ್ರೀತಿ ಪ್ರೇಮ ಎಂದು ಇಂದಿನ ಯುಗದಲ್ಲಿ ಸಂಬಂಧದ ಬೆಲೆಯನ್ನು ಮರೆತು ಜೀವನ ಸಾಗಿಸುತ್ತಾ ಇದ್ದಾರೆ ಎನ್ನುವುದೇ ವಿಷಾದನೀಯ ಸಂಗತಿ ಹಿಂದೆ ತನ್ನ ಗಂಡ ಮಕ್ಕಳು ಅಂಥ ಬಾಳುತ್ತಿದ್ದ ಜನರು ಎಷ್ಟೇ ಕಷ್ಟ ಇದ್ದರೂ ಕೂಡ ಹೊಂದಾಣಿಕೆ ಜೀವನ ಸಾಗಿಸುತ್ತಾ ಇದ್ದರು ಹಾಗೂ ಎಲ್ಲೂ ಅವರನ್ನು ತೊರೆದು ಬಾಳುವ ಬಗ್ಗೆ ಯೋಚನೆ ಮಾಡುವ ಸಾಹಸವನ್ನು ಮಾಡುತ್ತಿರಲಿಲ್ಲ ಆದರೆ ಇಂದಿನ ಯುಗದಲ್ಲಿ ದಿನಾಲೂ ದಿನ ಪತ್ರಿಕೆ ಮಾಧ್ಯಮಗಳಲ್ಲಿ ದಿನಾಲೂ ಹೆಂಡ್ತಿ ಪ್ರಿಯಕರನೂ ಆಕೆಯ ಗಂಡನ ಕೊ ಲೆ ಇಲ್ಲ ತನ್ನ ಪ್ರಿಯತಮೆ ಸಲುವಾಗಿ ಹೆಂಡ್ತಿ ಹಾಗೂ ಮಕ್ಕಳ ಕೊ’ಲೆ ಹೀಗೆ ಹಲವರು ಹೊಸ ಕಥೆ ನೋಡುತ್ತ ಇರುತ್ತೇವೆ.
ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ನಾಣ್ಣುಡಿಯಂತೆ ಹೆತ್ತ ಮಕ್ಕಳು ಎಷ್ಟೇ ಕೆಟ್ಟವರದರು ತಾಯಿ ಯಾವತ್ತೂ ಕೆಟ್ಟವಳಾಗೋದಿಲ್ಲ ಇನ್ನೂ ತಾನು ಬರೀ ಹೊಟ್ಟೆಯಲ್ಲಿ ಇದ್ದರೂ ತನ್ನ ಮಕ್ಕಳನ್ನು ಯಾವತ್ತೂ ಉಪವಾಸ ಕೆಡುವುದಿಲ್ಲ ಅನ್ನೋದು ಸಾಮಾನ್ಯ ಆದರೆ ಸ್ವಂತ ತಾಯಿಯೇ ತನ್ನ ಪ್ರಿಯಕರನ ಜೊತೆ ಮದುವೆ ಆಗಲು ತನ್ನ ಕರುಳ ಬಳ್ಳಿಯನ್ನು ತೊರೆದ ಘಟನೆ ಎಂಥವರ ಮನವನ್ನು ಕೂಡ ಕುಲುಕುವುದು ನಿಜ ಈ ಘಟನೆ ಬೇರೆ ಎಲ್ಲೂ ಅಲ್ಲ ನಮ್ಮ ರಾಜ್ಯದ ರಾಯಚೂರು ಅಲ್ಲಿ ನಡೆದ ಸತ್ಯ ಸಂಗಂತಿ ಈ ಯುವತಿಗೆ ಮೊದಲೇ ಮದುವೆ ಆಗಿದ್ದು ಒಂದೂವರೆ ವರ್ಷದ ಮಗುವಿನ ಜೊತೆ ವಾಸವಾಗಿದ್ದರು
ಇನ್ನು ಆಕೆಯು ಕಾರಣಾಂತರದಿಂದ ಆಕೆಯ ಗಂಡನಿಂದ ದೂರವಾಗಿ ಒಬ್ಬಂಟಿ ಜೀವನ ನಡೆಸುತ್ತಿದ್ದಳು ಇಂದಿನ ಯುವಜನತೆಗೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಹವ್ಯಾಸವನ್ನು ರೀಲ್ಸ್ ಇಲ್ಲವೇ ಸೆಲ್ಫಿಯನ್ನು ಇನ್ಸ್ಟಗ್ರಾಮ್ ಫೇಸ್ಬುಕ್ ಟ್ವಿಟ್ಟರ್ ಮುಂತಾದ ಜಾಲತಾಣದಲ್ಲಿ ಹಾಕಿ ಲೈಕ್ ಹಾಗೂ ಕಮೆಂಟ್ ನೋಡುವುದು ಇತ್ತೀಚೆಗೆ ಒಂದು ಗೀಳಾಗಿ ಬಿಟ್ಟಿದೆ.
ಹಾಗೆ ಈಕೆಯೂ ಕೂಡ ತನ್ನ ಇನ್ಸ್ಟಗ್ರಾಮ್ ಅಲ್ಲಿ ಇದ್ದ ರಘು ಎನ್ನುವ ಮೈಸೂರಿನ ಮೂಲದ ವ್ಯಕ್ತಿಯೊಬ್ಬರ ಪರಿಚಯ ಆಗಿದ್ದು ಸ್ನೇಹ ಕ್ರಮೇಣ ಪ್ರೀತಿಗೆ ಬದಲಾಗಿ ಕೊನೆಗೆ ಪರಸ್ಪರ ಒಪ್ಪಿಗೆ ನೀಡಿ ಮದುವೆಗೆ ಸಿದ್ಧರಾದರು ಆದರೆ ಇವರ ಮದುವೆಗೆ ತೊಡಕಾಗಿದ್ದೆ ಆ ಹಸುಗೂಸು ಮದುವೆ ಆದ ನಂತರ ಈ ಮಗು ಸಮಾಜದ ದೃಷ್ಟಿಗೆ ಹಾಗೂ ಅನ್ಯರ ಬಾಯಿಗೆ ನಾವು ತುತ್ತು ಆಗಬೇಕು ಎಂಬ ಕಾರಣಕ್ಕೆ ಆ ಮಗುವನ್ನು ಬೀದಿಗೆ ಎಸೆಯುವ ಆಲೋಚನೆ ಮಾಡುತ್ತಾರೆ
ಯಾವ ತಾಯಿ ಕೂಡ ಇಷ್ಟೊಂದು ಕೆಟ್ಟವಳು ಇರೋಲ್ಲ ಆದರೆ ಈಕೆ ತನ್ನ ಪ್ರಿಯತಮನಿಗೆ ತನ್ನ ಮಗುವನ್ನು ನೀಡುತ್ತಾಳೆ ಬಳಿಕ ಆ ಯುವಕ ಮಗುವನ್ನು ಎತ್ತಿಕೊಂಡು ರಾಯಚೂರುಯಿಂದ ಮೈಸೂರಿಗೆ ಬಂದು ಅಲ್ಲಿನ ಆರಕ್ಷಕರ ಠಾಣೆಗೆ ಮಗುವಿನ ಸಮೇತ ಹೋಗಿ ಈ ಮಗುವನ್ನು ಯಾವುದೋ ಮಹಿಳೆ ನನ್ನ ಬಳಿ ಇಟ್ಟುಕೊಳ್ಳಿ ಅಂಥ ಕೊಟ್ಟು ವಾಪಾಸ್ಸು ಬರಲೇ ಇಲ್ಲ ಎಂದು ದಯವಿಟ್ಟು ಈ ಮಗುವಿನ ಪಾಲಕರನ್ನು ಹುಡುಕಿ ಅವರ ಜೊತೆ ಸೇರಿಸಿ ಎಂದು ಮನವಿ ಮಾಡಿಕೊಳ್ಳುತ್ತಾನೆ ಅವನ ದೂರನ್ನು ತೆಗೆದುಕೊಂಡ ಪೊಲೀಸರು ಶೀಘ್ರವೇ ಕಾರ್ಯ ಪ್ರವೃತ ಆಗುತ್ತಾರೆ
ಇನ್ನು ತನಿಖೆಯ ಮೂಲಕ ತಿಳಿದ ವಿಷಯ ಸ್ವತಃ ಪೊಲೀಸರನ್ನೇ ಆಶ್ಚರ್ಯಚಕಿತಗೊಳ್ಳುವಂತೆ ಮಾಡಿತ್ತು ಇವರ ಉಪಾಯವನ್ನು ಕೂಡ ತಿಳಿದುಕೊಂಡು ಆ ಮುದ್ದಾದ ಒಂದೂವರೆ ವರ್ಷದ ಮಗುವನ್ನು ಹತ್ತಿರದ ಪುನರ್ ವಸತಿ ಕೇಂದ್ರಕ್ಕೆ ಕೊಟ್ಟು ಅಲ್ಲಿ ಪೋಷಣೆ ಮಾಡಲಾಗುತ್ತಿದೆ ಇದರಿಂದ ಇಂದಿನ ಪೀಳಿಗೆಯ ಸಂಸ್ಕಾರ ತಿಳಿದು ಬರುವುದು ತಾಯಿ ತಂದೆ ಇದ್ದು ಅನಾಥ ಜೀವನ ಸಾಗಿಸುವ ಆ ಮಗುವಿನ ಪರಿಸ್ಥಿತಿ ನೋಡಿ ಮನಕ್ಕೆ ತುಂಬಾ ನೋವು ಉಂಟಾಗಿದೆ ಏನೇ ಆಗಲಿ ಒಂಬತ್ತು ತಿಂಗಳ ಹೆತ್ತು ಹೊತ್ತು ಹಾಲುಣಿಸಿ ಆ ಹಸುಗೂಸನ್ನು ತನ್ನ ಸುಖ ಜೀವನ ಸಲುವಾಗಿ ಬೀದಿಗೆ ಎಸೆಯಲು ಮನಸ್ಸಾದರೂ ಹೇಗೆ ಬಂತು ಹಾಗೆ ಯೋಚಿಸಿದ ಆ ತಾಯಿಯ ಯೋಚನೆಗೆ ದೊಡ್ಡ ನಮನ.