ಐಪಿಎಸ್ ಅಧಿಕಾರಿಯಾಗಿ ತನ್ನ ಸೇವೆಯನ್ನು ಸರಿಯಾಗಿ ನಿಭಾಯಿಸುತ್ತಾ, ಸರಿಯಾದ ಕ್ರಮಗಳನ್ನು ಕೈ ಗೊಳ್ಳುತ್ತಾ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದ ಕರ್ನಾಟಕ ಸಿಂಗಂ ಎಂದೆ ಹೆಸರು ಪಡೆದ ರವಿ ಡಿ ಚೆನ್ನಣ್ಣನವರ್ ಅವರು ಕೆಲಸ ಹಾಗೂ ಜವಾಬ್ದಾರಿಯ ಕುರಿತು ಹೇಳಿದ ಸಣ್ಣ ಮಾತಿನ ತುಣುಕು ಇಲ್ಲಿದೆ. ಕೊಪ್ಪಳದ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದ ಜನರಿಗೆ ಕೇಳುತ್ತಾರೆ. ಬಂದು ಸಿಳ್ಳೆ ಚಪ್ಪಾಳೆ ಹೊಡೆದು ಹೋದರೆ ಆಗುವುದಿಲ್ಲ. ಇಲ್ಲಿ ರವಿ ಚೆನ್ಬಣ್ಣನವರ್ ಎಂದು ಮುಖ್ಯವಲ್ಲ. ರವಿ ಚೆನ್ನಣ್ಣನವರ್ ಬಗ್ಗೆ ಕೆಲವು ದಂತ ಕಥೆಗಳಿದೆ, ಹೈಪ್ ಇದೆ ಆದರೆ ಅದು ಹಾಗಿಲ್ಲ ಪೋಲಿಸ್ ಅಧಿಕ್ಷಕನಾಗಿ ಎಲ್ಲರಂತೆ ಸರಕಾರ ಕೊಟ್ಟ ಕೆಲಸ ಮಾಡುವ ಸಾಮಾನ್ಯ ಪೋಲಿಸ್. ಶೇ. ಎಪ್ಪತ್ತರಷ್ಟು ನನ್ನ ಕೆಲಸ ಮಾಡಿದ್ದಿನಿ. ಶೇ. ಎಪ್ಪತ್ತರಷ್ಟು ಕೆಲಸಕ್ಕೆ ಯಾವುದೋ ಹಾಡಿಗೆ ನನ್ನ ಪೋಟೊ ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಾಯಕ ಎಂದು ಬಿಂಬಿಸಿದರೆ ಇನ್ನೂ ನೂರರಷ್ಟು ಮಾಡಿದಾಗ ಏನು ಮಾಡಬಹುದು.. ಮಾಡುವ ಕೆಲಸಕ್ಕೆ ನನಗೆ ಸಂಬಳ ಬರುತ್ತದೆ. ತುಂಬಾ ಜನ ಬುದ್ದಿವಂತರು ತರಬೇತಿಯನ್ನು ನೀಡಿದ್ದಾರೆ. ಆಡಳಿತದ ವೈಕರಿಯ ಬಗ್ಗೆ ಬಹಷ್ಟು ವಿದ್ವಾಂಸರು ತಿಳಿಸಿ ಕೊಟ್ಟಿದ್ದಾರೆ. ಅದರ ಅನುಭವದ ಆಧಾರದ ಮೇಲೆ ನನಗೆ ತಿಳಿದ ಮಟ್ಟಿಗೆ ಒಂದು ನಾಲ್ಕು ಜಿಲ್ಲೆಯಲ್ಲಿ ಕೆಲಸಮಾಡಿರುವೆ ಅಷ್ಟೇ. ಸಾಮಾಜಿಕ ಜಾಲತಾಣದಲ್ಲಿನ ರವಿ ಚೆನ್ನಣ್ಣನವರ್ ನಿಜವಾದ ಚೆನ್ನಣ್ಣನವರ್ ಅಲ್ಲ.
ನಾನು ಸಿಂಗಂ ಅಲ್ಲ. ಒಬ್ಬ ರವಿ ಚೆನ್ನಣ್ಣನವರ್ ಸಾಕಾ ಎಲ್ಲರಿಗೂ ಒಬ್ಬ ಸುರೇಶ್, ಒಬ್ಬ ಧೀರೇಂದ್ರ, ಅಶೋಕ್ ಸಾಕಾಗುವುದಾ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಹೋಲಿಕೆ ಮಾಡಿದರೆ… ವೈರುದ್ಯವಾಗಲಿ, ವಿಭಿನ್ನತೆ ತೋರುವಂತೆ ಅಲ್ಲ ಅಲ್ಲಿರುವವರೆಲ್ಲರೂ ಐಎಎಸ್, ಐಪಿಎಸ್, ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಆದರೆ ನಮ್ಮ ಕಡೆ ಹೆಡ್ ಕಾನ್ಸ್ಟೇಬಲ್, ಪಿಸಿ, ಎಸ್ ಡಿಎ, ಎಪ್ ಡಿಎ, ಟೀಚರ್ ಹೀಗೆ ಆಗ್ತಾರೆ ಯಾವ ಶಕ್ತಿ ನಮ್ಮನ್ನು ತಡೆದು ಹಿಡಿದಿರುವುದು, ಯಾವ ವ್ಯತ್ಯಾಸ ಇರುವುದು ನಮ್ಮಲ್ಲಿ, ಪ್ರತಿಭಾವಂತರು ಕೂಡ ಮಾಡೊಕೆ ಅಡ್ಡಿಯಾಗಿದ್ದು ಏನು, ನಾವು ಯಾಕೆ ಹಾಗೆ ಆಗಬಾರದು ಎಂದು ಪ್ರಶ್ನಿಸಿಕೊಂಡು ನೋಡಿದರೆ ತಿಳಿದು ಬಂದಿದ್ದು ಏನೆಂದರೆ ಕೀಳರಿಮೆ. 2006-07 ಡಿಗ್ರಿ ಮುಗಿಸಿದ್ದು, 2008 ರಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದ್ದಿದ್ದು, 2009 ರಿಂದ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿದ್ದು, ಹನ್ನೊಂದು ವರ್ಷಗಳ ಅನುಭವ ಹೊಂದಿರುವೆ. ಅಲ್ಲಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರೊಫೆಷನರ್, ಎ.ಎಸ್.ಪಿ, ಎಸ್.ಪಿ, ಡಿ.ಸಿ.ಪಿಯಾಗಿ ಕೆಲಸ ನಿರ್ವಹಿಸಿದ್ದೆನೆ. ನೂರಾರು ಶಾಲೆಗಳಲ್ಲಿ, ನೂರಾರು ಮಕ್ಕಳೊಂದಿಗೆ ಬೆರೆತಾಗ, ಗೊತ್ತಿರುವುದು ಹೇಳಿ ಕೊಟ್ಟಾಗ ಅನಿಸಿದ್ದು ಕೀಳರಿಮೆ ಭಾವನೆ ನಮ್ಮನ್ನು ತುಂಬಾ ದೊಡ್ಡದಾಗಿ ಕಾಡುತ್ತಿದೆ. ದೊಡ್ಡ ದೊಡ್ಡ ಹುದ್ದೆಗಳು ನಮಗಲ್ಲ, ನನ್ನಿಂದ ಅದು ಆಗಲ್ಲ, ನಾನು ಹಳ್ಳಿಯ ಬಡಕುಟುಂಬದವನು, ಅದಕ್ಕೆ ದುಡ್ಡು ಹಾಕಬೇಕಂತೆ, ಇಂಗ್ಲಿಷ್ ಬರಲ್ಲ ಅರ್ಥ ಮಾಡಿಕೊಳ್ಳಲು ಬರಲ್ಲ, ಸೈನ್ಸ್ ಆ್ಯಂಡ್ ಟೆಕ್ನಾಲಜಿ ಅರ್ಥ ಆಗಲ್ಲ. ವರ್ಷಗಳು ಬೇಕಂತೆ, ರ್ಯಾಂಕ್, ಗೋಲ್ಡ್ ಮೆಡಲ್ ಇರಬೇಕಂತೆ, ಗೈಡ್ ಇರಬೇಕಂತೆ… ಇದೆಲ್ಲಾ ಬರಿಯ ಸುಳ್ಳು.
ಇದಕ್ಕೆ ಒಂದು ಉದಾಹರಣೆ ಎಂದರೆ ಶರಣಬಸಪ್ಪ ಕಪ್ಪತ್ತನವರ್ ಎಂಬ ಹುಡುಗ ಶಿರಹಟ್ಟಿ ತಾಲೂಕಿನವನು. ಆ ಹುಡುಗ S.S.L.C ಫೇಲ್, ಪಿಯುಸಿ ಫೇಲ್, ಡಿಗ್ರಿಯಲ್ಲಿ ಇಂಗ್ಲಿಷ್ ಫೇಲ್, ಬಿಎಡ್ ಗೆ ಸೀಟು ಸಿಗಲಿಲ್ಲ. ಯಾರೋ ಸಂಬಂಧಿಕರ ಮನೆಗೆ ಹೋದವನು ಓದಿ ಮೂರು, ನಾಲ್ಕು ಸಲ ಪರೀಕ್ಷೆ ಬರೆದು 365-366 ರ್ಯಾಂಕ್ ಪಡೆದು 2013-14 ರಲ್ಲಿ ಐ.ಆರ್.ಎಸ್ ಅಧಿಕಾರಿಯಾಗಿ ಶಿರಹಟ್ಟಿಗೆ ಮರಳಿ ಬರುತ್ತಾನೆ. ಹಾಗೆ ಅವನು ಬಂದಾಗ ಊರಲ್ಲಿ ಶರಣಬಸಪ್ಪ ಊರಿಗೆ ಡಿಸಿ ಆಗಿ ಬಂದಿದ್ದಾನೆ ಎಂದರೆ ಯಾರು ಹತ್ತನೆಯ ಕ್ಲಾಸ್ ಫೇಲ್ ಆದವನಾ, ಪಿಯುಸಿ ಫೇಲ್ ಆದವನಾ ಎನ್ನುತ್ತಿದ್ದರಂತೆ. ಇಂಗ್ಲಿಷ್ ಬರದಿದ್ದವ ಅವನು ಮಾಡಿದ್ದ ಅಂದರೆ ನಾವು ಯಾಕೆ ಮಾಡಬಾರದು. ಅವನೇನು ಓದಿದ, ಅವನೆಲ್ಲಿ ಹೋಗಿದ್ದ, ಅವನ ಪರೀಕ್ಷೆ ಪೇಪರ್ ತರಿಸಿ ಅದರ ಬಗ್ಗೆ ತಿಳಿದುಕೊಳ್ಳುವ , ಅವನ ಪುಸ್ತಕಗಳ ತರಿಸಿ ನೋಡುವ, ಹೇಗೆ ಇತ್ತು ಪರೀಕ್ಷೆ, ಹೇಗೆ ತಯಾರಿ ನಡೆಸಿದೆ ಎಂದೆಲ್ಲ ಮಾತನಾಡಿದರೆ ನಮಗೂ ಮಾಹಿತಿ ಸಿಗುತ್ತದೆ ನಾವೂ ಮಾಡಬಹುದು, ಓದಬಹುದು. ಎಲ್ಲರಿಗೂ ಹೆದರಿಕೆ ಇರುವುದು ಸಹಜ, ಹಾಗೆಯೆ ಅವನಿಗೂ ಹೆದರಿಕೆ ಇದೆ, ನಮಗೂ ಇದೆ. ಹಾಗೆಂದು ಅದನ್ನು ಎದುರಿಸದೆ ಹೋದರೆ,,, ನಮ್ಮಲ್ಲಿ ಕೊರತೆ ಇರುವುದೆ ಆದರೆ ಅದು ಇಚ್ಛಾಶಕ್ತಿ ಮಾತ್ರ.
ಒಂದು ಮಾತಿದೆ ನಮ್ಮ ಇಚ್ಛಾಶಕ್ತಿ, ಸಂಕಲ್ಪ ಸರಿಯಾಗಿ ಇದ್ದು, ಸದೃಢವಾದ ಹೆಜ್ಜೆ ಇಡುವಲ್ಲಿ ನಾವು ಕ್ಷಮತೆ ಹೊಂದಿದರೆ ಇಡಿ ಜಗತ್ತು ನಮ್ಮ ಬೆನ್ನಿಗೆ ನಿಲ್ಲುತ್ತದೆ ನಮ್ಮ ಇಚ್ಛೆ ಪೂರೈಸಲು. ನಾವು ಆರಿಸಿಕೊಳ್ಳುವ ರಂಗ ಯಾವುದೆ ಇರಲಿ, ಆಧ್ಯಾತ್ಮ, ಉದ್ಯೋಗ, ಕೃಷಿ, ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳುವುದಿರಲಿ ಎಲ್ಲವುಗಳಿಗೆ ಮೂಲವಾಗಿ ಬೇಕಾಗಿರುವುದು ಇಚ್ಛಾಶಕ್ತಿ. ನಾವು ಮಾಡುವ ಬಹುದೊಡ್ಡ ತಪ್ಪು ಎಂದರೆ ಒಣ ಹರಟೆ. ಹಳ್ಳಿಯ ಒಂದು ಕಟ್ಟೆಯ ಮೇಲೆ ಕುಳಿತು ಅವರು ಹಾಗೆ ಮಾಡಿದರೂ, ಇವರು ಹೀಗೆ ಮಾಡಬಾರದಿತ್ತು ಎನ್ನುವ ಒಣ ಹರಟೆ. ಉದ್ದಾರ ಆಗಬೇಕಾದರೆ ಯಾವುದೇ ಕೆಲಸವಿರಲಿ ಕೆಲಸ ಮಾಡುತ್ತಲೇ ಇರಬೇಕು, ಖಾಲಿ ಕುಳಿತುಕೊಳ್ಳುವ ಹಾಗಿರಬಾರದು. ನಮ್ಮ ಕೊರತೆ ಎಂದರೆ ಒಮದು ಕೆಲಸಕ್ಕೆ ಉತ್ತಮ ಹಾಗೆ ಇನ್ನೊಂದು ಕೆಲಸ ಕನಿಷ್ಠ ಎಂದು ತಿಳಿದುಕೊಂಡಿರುವುದು. ಕೆಲಸದ ಶ್ರೇಷ್ಠತೆ ಇರುವುದು ಆ ಕೆಲಸವನ್ನು ಮಾಡುವ ರೀತಿಯಲ್ಲಿ ಹಾಗೂ ಪ್ರೀತಿಸುವ ರೀತಿಯಲ್ಲಿ. ಇದನ್ನು ಆರ್.ಆರ್.ಪಟ್ಟಣ ಎಂಬ ಗುರುವಿನಿಂದ ಕಲಿತು ಎ.ಪಿ.ಎಮ್.ಸಿ ನಲ್ಲಿ ಚೀಲ ಹೋಲಿಯುವುದರಿಂದ, ಟಾಕೀಸ್ ನಲ್ಲಿ ಕೆಲಸ, ಹೋಟೆಲ್ ನಲ್ಲಿ ಕೆಲಸ ಮಾಡಿದ್ದೆ. ಹೋಟೆಲ್ ನಲ್ಲಿ ಎಂಟು ಟೇಬಲ್ ಗಳಿಗೆ ಒಬ್ಬನೇ ಸರ್ವ್ ಮಾಡುತ್ತಿದ್ದೆ ಸುಲಭವಾಗಿರಲಿಲ್ಲ ಎಂದರು. ಪುತ್ತುರು, ಗೋವಾದಲ್ಲಿ ಕನ್ಸ್ ಸ್ಟ್ರಕ್ಟರ್ ಬಿಲ್ಡರ್ ಆಗಿ ಕೆಲಸ ಮಾಡಿದ್ದು ಉಂಟು. ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಅಂದಾಗ ಮಾಡುವ ಕೆಲಸದಲ್ಲಿ ಯಶಸ್ಸು ಹಾಗೂ ಪ್ರಸಿದ್ದಿ ಸಿಗುವುದು, ಕಾಯಕ ತತ್ವ ಇದೇ ಆಗಿದೆ. ಯಾವುದೇ ಕೆಲಸವು ಶ್ರೇಷ್ಠ ಹಾಗೂ ಕನಿಷ್ಠತೆ ಹೊಂದಿಲ್ಲ. ಉದಾಹರಣೆಗೆ ಒಬ್ಬ ಇನೊವಾ ಕಾರಿನಲ್ಲಿ ಬಂದರೆ ನಮಗೆನು? ನಮಗೆ ಕಾರಿಲ್ಲ ಎಂದು ಬೇಸರಿಸುವ ಬದಲು, ಇರುವ ಸೈಕಲ್ ಗೆ ಅಲಂಕಾರ ಮಾಡಿ ಅಕ್ಕ, ತಂಗಿ, ಅಮ್ಮ, ಹೆಂಡತಿ ಕುರಿಸಿಕೊಂಡು ಬಂದು ಸಂತೋಷ ಪಡುವುದು ಒಳಿತು. ಎಷ್ಟು ಸತ್ಯವಾದ ಮಾತುಗಳು. ಯಾರನ್ನೋ ಕಂಡು ನಾವು ಹಾಗಿಲ್ಲ ಎಂದು ಬೇಸರಿಸಿಕೊಂಡು ಮೂಲೆ ಸೇರುವ ಬದಲು ಇರುವುದರಲ್ಲಿ ಖುಷಿಯಾಗಿ ಹೆಮ್ಮೆಯ ಜೀವನ ನಡೆಸುವುದು ಸುಖ ಅಲ್ಲವೇ.