Ration Card Update Karnataka: ರೇಷನ್ ಕಾರ್ಡ್ ಬಹಳ ಮುಖ್ಯವಾದದ್ದು ಪ್ರತಿಯೊಂದು ಕೆಲಸಕ್ಕೂ ಈಗ ರೇಷನ್ ಕಾರ್ಡ್ ದಾಖಲೆಯನ್ನು ಕೇಳುತ್ತಾರೆ. ಮಕ್ಕಳ ಸ್ಕಾಲರ್ಶಿಪ್ ಗೆ ಹಾಗೂ ಇತ್ಯಾದಿ ಕೆಲಸಕ್ಕೆ ರೇಷನ್ ಕಾರ್ಡ್ ಬೇಕಾಗುತ್ತದೆ. ಪ್ರತಿಯೊಬ್ಬರೂ ರೇಷನ್ ಕಾರ್ಡ್ ಮಾಡಿಸಿಕೊಳ್ಳಲೇ ಬೇಕು. ಆರು ವರ್ಷದ ಒಳಗಿನ ಮಕ್ಕಳನ್ನು ರೇಷನ್ ಕಾರ್ಡ್ ಕಾರ್ಡಿನಲ್ಲಿ ಹೆಸರು ಹೇಗೆ ನೋಂದಾಯಿಸುವುದು ಹಾಗೂ ಯಾವ ಯಾವ ದಾಖಲಾತಿ ಬೇಕೆಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೆವೆ.
ಬೇಕಾಗುವ ದಾಖಲಾತಿಗಳು :
ಮಗುವಿನ ಜನನ ಪ್ರಮಾಣ ಪತ್ರ
ಮಗುವಿನ ಆಧಾರ್ ಕಾರ್ಡ್
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ನೊಂದಣಿ ಆಗಿರಬೇಕು.
ಆಧಾರ್ ಕಾರ್ಡ್ ನಲ್ಲಿ ಇಂಗ್ಲಿಷ್ ಹಾಗು ಕನ್ನಡ ಎರಡರಲ್ಲೂ ಹೆಸರು ಇರಬೇಕು.
ಮಗುವಿನ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರಿಸುವ ವಿಧಾನ:
ಮೊದಲು ahara.kar.nic.in ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ನಾವು ಪಡಿತರ ಚೀಟಿಯ ತಿದ್ದುಪಡಿ ಹಾಗೂ ಹೊಸ ಪಡಿತರ ಚೀಟಿಗೆ ಈ ಮೇಲಿರುವ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.
ವೆಬ್ಸೈಟ್ಗೆ ಭೇಟಿ ನೀಡಿದ ನಂತರ ಅಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಂತರ ಪಡಿತರ ಸೇವೆಗಳ ಮೇಲೆ ಹೋಗಿ ತಿದ್ದುಪಡಿ ವಿನಂತಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
ನಂತರ ಹೊಸಪುಟದಲ್ಲಿ ನೀವು ಯಾವ ಜಿಲ್ಲೆಗೆ ಸೇರಿದವರು ಎಂದು ಕೇಳಿರುತ್ತಾರೆ ಅದನ್ನು ನೀವು ಭರ್ತಿ ಮಾಡಿ ನಂತರ ನಿಮಗೆ ಯಾವ ಭಾಷೆ ಬೇಕು ಎಂದು ಕೇಳಲಾಗುತ್ತದೆ ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಆಪ್ಷನ್ ಇರುತ್ತದೆ ನಿಮಗೆ ಯಾವುದು ಬೇಕು ಅದನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಕುಟುಂಬಕ್ಕೆ ನೀಡಿರುವ ಪಡಿತರ ಚೀಟಿಯ ಸಂಖ್ಯೆಯನ್ನು ಭರ್ತಿ ಮಾಡಿದ ಮೇಲೆ ಕುಟುಂಬದ ಎಲ್ಲಾ ಸದಸ್ಯರ ಹೆಸರು ತೋರಿಸುತ್ತದೆ.
ಅದರಲ್ಲಿ ನಾವು ಒಬ್ಬರನ್ನು ಆಯ್ಕೆ ಮಾಡಿಕೊಂಡು ಅವರ ಥಂಬ್ ಇಂಪ್ರೆಶನ್ ಹಾಕಿ ನಂತರ ಅಲ್ಲಿ ಕಾಣಿಸುವ ಕ್ಯಾಪ್ಚಾ ಕೂಡ ಹಾಕಬೇಕು. ಇಷ್ಟು ಆದ ನಂತರ ಸಬ್ಮಿಟ್ ಅನ್ನು ಕ್ಲಿಕ್ ಮಾಡಿ. ಮತ್ತೊಂದು ಹೊಸಪುಟ ಬರುತ್ತದೆ ಅಲ್ಲಿ ನಮಗೆ ಎರಡು ಆಪ್ಷನ್ ಕಾಣಿಸುತ್ತದೆ ಮೊದಲನೆಯದು ಹೆಸರನ್ನು ನೋಂದಾಯಿಸುವುದು ಎರಡನೆಯದು ಎಡಿಟ್ ಮಾಡುವ ಆಯ್ಕೆ ಕೇಳಲಾಗಿರುತ್ತದೆ. ಅದನ್ನು ಸೆಲೆಕ್ಟ್ ಮಾಡಿ. ಎಲ್ಲ ಸದಸ್ಯರ ಹೆಸರನ ಸೇರ್ಪಡೆಗೂ ಇದೇ ಮಾದರಿಯಲ್ಲಿ ಅನುಸರಿಸಲಾಗುತ್ತದೆ. ಆದರೆ ಅಲ್ಲಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಪ್ರತ್ಯೇಕವಾದ ಒಂದು ಆಪ್ಷನ್ ಇರುತ್ತದೆ ಅದನ್ನು ಅಲ್ಲಿ ಮೆಂಷನ್ ಕೂಡ ಮಾಡಲಾಗಿರುತ್ತದೆ. 6 ವರ್ಷದಿಂದ ಒಳಗಿರುವ ಮಕ್ಕಳ ಸೇರ್ಪಡೆಗೆ ಎನ್ನುವ ಆಕ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರಿಯಬೇಕು.
ಸಂಪೂರ್ಣವಾಗಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ನಿಮ್ಮ ಮಕ್ಕಳ ಹೆಸರು ರೇಷನ್ ಕಾರ್ಡ್ ಗೆ ಸೇರ್ಪಡೆ ಆಗುತ್ತದೆ. ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದನ್ನೂ ಓದಿ Gruha Lakshmi Yojane: ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ಚಾಲನೆ, ರಾಜ್ಯದ ಮಹಿಳೆಯರಿಗೆ ಸಿಗಲಿದೆ ಪ್ರತಿ ತಿಂಗಳು 2000 ರೂಪಾಯಿ ಅರ್ಜಿ ಸಲ್ಲಿಸೋದು ಹೇಗೆ? ತಿಳಿದುಕೊಳ್ಳಿ