Ration Card New Rules Update Karnataka Govt: ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಇಂಥವರಿಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ ದುಡ್ಡು ಇಲ್ಲ ಮಾನದಂಡ ಮೀರಿದವರು ದಂಡ ಕೂಡ ಕಟ್ಟಬೇಕು. ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ. ಕಳೆದ ವಾರದಿಂದ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ರೇಷನ್ ಕಾರ್ಡ್ ವಿತರಣೆಯನ್ನು ಸ್ಥಗಿತಪಡಿಸಲಾಗಿತ್ತು ಈಗ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪ ಅವರು ಮರುಚಾಲನೆ ನೀಡಿದ್ದಾರೆ.

ಯಾರೆಲ್ಲಾ ಬಿಪಿಎಲ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದೀರಾ ಅವರಿಗೆ ಒಂದು ಮುಖ್ಯವಾದ ಅಂಶ ಏನೆಂದರೆ ಬಿಪಿಎಲ್ ಕಾರ್ಡ್ ಪಡೆಯಲು ನಾಲ್ಕು ಚಕ್ರದ ಸ್ವಂತ ಕಾರು ಅಂದರೆ ವೈಟ್ ಬೋರ್ಡ್ ಕಾರ್ ಅನ್ನು ಹೊಂದಿರಬಾರದು ಆ ಕಾರನ್ನು ಹೊಂದಿದ್ದರೆ ನಿಮಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕಾರ ಮತ್ತು ತಿದ್ದುಪಡಿ ಕಾರ್ಯಕ್ರಮ ಚಾಲನೆ ನೀಡುತ್ತಿದ್ದಾರೆ. ಉದ್ಯೋಗಕ್ಕಾಗಿ yellow bord car ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ಹೊಂದಲು ಯಾವುದೇ ರೀತಿಯ ತೊಂದರೆ ಇಲ್ಲ.

ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ವೆ ಕಾರ್ಯ ಆರಂಭವಾಗಿದೆ. ಕೆಲವರು ಸರ್ಕಾರಕ್ಕೆ ಮರೆಮಾಚಿ ನಕಲಿ ದಾಖಲೆ ಕೊಟ್ಟು ಅನೇಕರು ಹೊಸ ಬಿಪಿಎಲ್ ಕಾರ್ಡನ್ನು ಪಡೆದಿರುತ್ತಾರೆ ಅಂತ ಕಾರ್ಡ್ ಗಳನ್ನು ಹಿಡಿದು ರದ್ದು ಮಾಡಲು ಸರ್ಕಾರ ಮುಂದಾಗಿದೆ. ಬಡವರ ಹೊರತು ಉಳಿದವರು ಇದರ ಫಲವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾಗಿ ಇದನ್ನು ತಪ್ಪಿಸಿ ಬಡತನದ ಗೆರೆಯಲ್ಲಿ ಇರುವವರಿಗೆ ಇದರ ಸೌಲಭ್ಯವನ್ನು ಕೊಡಿಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.

ಸದ್ಯಕ್ಕೆ ಈಗ ನಾಲ್ಕುಚಕ್ರ ವಾಹನಗಳನ್ನು ಹೊಂದಿರುವ ಮಾಹಿತಿಯ ಕಲೆ ಹಾಕುತ್ತಿದ್ದು ಇದಕ್ಕೆ RTO ಸಂಸ್ಥೆ ನೆರವಾಗಿದೆ. RTO ಕಚೇರಿಯ ಮೂಲಕ ದಾಖಲೆಯನ್ನು ತರಿಸಿಕೊಂಡು ಯಾರಲ್ಲ ವೈಟ್ ಬೋರ್ಡ್ ಕಾರ್ ಹೊಂದಿದ್ದಾರೆ ಅವರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಅದನ್ನು ರದ್ದು ಮಾಡುತ್ತಿದೆ. ಇದಾದ ನಂತರ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿಯನ್ನು ಕಲೆ ಹಾಕಿ ಅಲ್ಲಿ ಬಿಪಿಎಲ್ ಕಾರ್ಡ್ ಹೊಂದಲು ಅರ್ಹತೆ ಇಲ್ಲದವರಿಗೆ ಅವರ ಕಾರ್ಡುಗಳನ್ನು ರದ್ದು ಮಾಡುತ್ತದೆ.

ಬಿಪಿಎಲ್ ಕಾರ್ಡ್ ಅನ್ನು ಹೊಂದಲು ಬಡತನ ರೇಖೆಗಿಂತ ಕೆಳಗಡೆ ಇರಬೇಕು ಅವರನ್ನು ಹೊರತುಪಡಿಸು ಬೇರೆ ಯಾರೇ ಬಿಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಅದನ್ನು ಸರ್ಕಾರ ರದ್ದು ಮಾಡುವುದಾಗಿ ತಿಳಿಸಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜಾರಿಯಾದ ಮೇಲೆ ರೇಷನ್ ಕಾರ್ಡ್ ಗೆ ವಿಪರೀತ ಡಿಮ್ಯಾಂಡ್ ಹೆಚ್ಚಾಗಿದೆ ರೇಷನ್ ಕಾರ್ಡ್ ಮಾಡಿಸುವವರಿಗೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡು ಮಾಹಿತಿಯನ್ನು ಪರಿಶೀಲನೆ ಮಾಡಿ ರೇಷನ್ ಕಾರ್ಡನ್ನು ನೀಡುತ್ತಿದೆ. ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗದ ಸಮಸ್ಯೆಗಳಿಂದಾಗಿ ಜುಲೈ ತಿಂಗಳ ಅನ್ನ ಭಾಗ್ಯ ಯೋಜನೆ ಹಣದಿಂದ ವಂಚಿತರಾಗಿರುವವರಿಗೆ ಈ ಸಮಸ್ಯೆಯನ್ನು ಬಗೆಹರಿಸಿ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ ಮೊಬೈಲ್ ಮೂಲಕವೇ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್ ರಿನೀವಲ್ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!