ರೇಷನ್ ಕಾರ್ಡ್ ಪಡೆಯಲು ಸರ್ಕಾರ ಕೆಲವು ನಿಯಮಗಳನ್ನು ತಿಳಿಸಲಾಗಿದೆ. ಆ ನಿಯಮಗಳ ಅನುಸಾರವಾಗಿ ಅರ್ಹತೆ ಇಲ್ಲದವರು ತಮ್ಮ ರೇಷನ್ ಕಾರ್ಡ್ ಸರಂಡರ್ ಮಾಡಬೇಕು. ಸರ್ಕಾರದ ನಿಯಮಗಳನ್ನು ಈ ಕೆಳಗಿನ ಲೇಖನದಲ್ಲಿ ನೋಡೋಣ. ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ರೂಲ್ಸ್ ಮಾಡಿದೆ.

ಸರ್ಕಾರ ಮಾಡಿದ ಅರ್ಹತೆಯನ್ನು ಹೊಂದಿರದ ರೇಷನ್ ಕಾರ್ಡ್ ಗಳನ್ನು ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ರೇಷನ್ ಕಾರ್ಡ್ ಗಳನ್ನು ಕೊಡಬೇಕು ಇಲ್ಲದಿದ್ದಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂಬ ನಿಯಮವನ್ನು ಜಾರಿಗೆ ತಂದಿದೆ.

ವಾಸ್ತವವಾಗಿ ಬಡವರ ಅನುಕೂಲಕ್ಕಾಗಿ ಉಚಿತ ಪಡಿತರ ಚೀಟಿ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಒನ್ ನೇಷನ್ ಒನ್ ರೇಷನ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿ ಸರ್ಕಾರವು ದೇಶದ ಯಾವುದೆ ಭಾಗದಲ್ಲಾದರೂ ಫ್ರಿ ರೇಷನ್ ಪಡೆಯಬಹುದು ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಆದರೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರ್ಹರಿಗೆ ತಲುಪುವ ಬದಲಿಗೆ ಅನರ್ಹ ಪಡಿತರ ಚೀಟಿದಾರರು ಎಂದರೆ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲದವರ ಪಾಲಾಗುತ್ತಿರುವುದು ಸರ್ಕಾರದ ಗಮನಕ್ಕೆ ತಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅಂಥವರಿಗೆ ಪಡಿತರ ಚೀಟಿಯನ್ನು ಸರಂಡರ್ ಮಾಡಲು ನಿಯಮ ಜಾರಿಗೊಳಿಸಿದೆ.

ಸರ್ಕಾರದ ಈ ನಿಯಮವನ್ನು ನಿರ್ಲಕ್ಷಿಸಿ ಸರ್ಕಾರದ ಪಡಿತರ ವ್ಯವಸ್ಥೆಯ ಲಾಭ ಪಡೆಯುವ ಅರ್ಹರಲ್ಲದ ಪಡಿತರ ಚೀಟಿದಾರರಿಗೆ ದಂಡ ವಿಧಿಸಬಹುದು, ಇಲ್ಲವೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂಬ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಅರ್ಹತೆಯಿಲ್ಲದ ರೇಷನ್ ಕಾರ್ಡ್ ಪಡೆದುಕೊಂಡು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ,

ಸರ್ಕಾರ ತನಿಖೆ ನಡೆಸುವ ಸಮಯದಲ್ಲಿ ಸಿಕ್ಕಿಹಾಕಿಕೊಂಡರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಅಥವಾ ದಂಡ ವಿಧಿಸಲಾಗುತ್ತದೆ. ಸರ್ಕಾರ ಇಂತಹ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಸರ್ಕಾರ ರೇಷನ್ ಕಾರ್ಡ್ ಪಡೆಯಲು ಕೆಲವು ಅರ್ಹತೆಯನ್ನು ತಿಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೆ ಎರಡು ಲಕ್ಷ ರೂಪಾಯಿ ಆದಾಯ ಇರಬೇಕು, ನಗರ ಪ್ರದೇಶಗಳಲ್ಲಿ ವರ್ಷಕ್ಕೆ 3 ಲಕ್ಷ ರೂಪಾಯಿ ಆದಾಯ ಹೊಂದಿರಬೇಕು.

ಸರ್ಕಾರ ವಿಧಿಸಿದ ಮಾನದಂಡಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ರೇಷನ್ ಕಾರ್ಡ್ ಪಡೆಯಲು ಅನರ್ಹರಾಗಿರುತ್ತಾರೆ. 100 ಚದರ ಮೀಟರ್ ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಅಥವಾ ಫ್ಲಾಟ್, ನಾಲ್ಕು ಚಕ್ರದ ವಾಹನ ಹೊಂದಿದ್ದರೆ ಅವರು ಪಡಿತರ ಚೀಟಿಯನ್ನು ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಅವರು ತಮ್ಮ ರೇಷನ್ ಕಾರ್ಡ್ ಅನ್ನು ಸರಂಡರ್ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಅನರ್ಹತೆ ಇರುವವರು ತಮ್ಮ ರೇಷನ್ ಕಾರ್ಡ್ ಅನ್ನು ಸರಂಡರ್ ಮಾಡಬೇಕು.

Leave a Reply

Your email address will not be published. Required fields are marked *