ಸ್ಯಾಂಡಲ್‌ವುಡ್ ಸ್ಟಾರ್ ಕಿಚ್ಚ ಸುದೀಪ್ ಬಗ್ಗೆ ಸೌತ್ ಇಂಡಿಯನ್ ಕ್ರಶ್ ಖ್ಯಾತಿ ನಟಿ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಲೈವ್ ಬಂದ ನಟಿ ರಶ್ಮಿಕಾ ಮಂದಣ್ಣ ಸುದೀಪ್ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ನಾವು ಇಲ್ಲಿ ಕಾಣಬಹುದು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಚಿತ್ರರಂಗದವರಿಗೂ ಚಿರಪರಿಚಿತರು. ಅನೇಕ ವರ್ಷಗಳ ಹಿಂದೆಯೇ ಸುದೀಪ್ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಭಿನಯ ಚಕ್ರವರ್ತಿಯ ನಟನೆಯನ್ನು ಅನೇಕ ಸ್ಟಾರ್ ಕಲಾವಿದರೂ ಕೊಂಡಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ‘ಈಗ’ ಸಿನಿಮಾದಲ್ಲಿ ನಟಿಸಿದ್ದ ಸುದೀಪ್ ಗೆ ಆ ಪಾತ್ರ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು ಹಾಗೂ ಅದರ ಜೊತೆಗೆ ಕಿಚ್ಚ ಗಡಿಗೂ ಮೀರಿ ಬೆಳೆದುನಿಂತರು. ಸದ್ಯ ಬಣ್ಣದ ಲೋಕದಲ್ಲಿ 25 ವರ್ಷಗಳನ್ನು ಪೂರೈಸಿರುವ ಸುದೀಪ್ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಇದೀಗ ಮಲಯಾಳಂ ಸಿನಿಮಾದಲ್ಲೂ ನಟಿಸಲು ಸಜ್ಜಾಗಿದ್ದಾರೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಕಿಚ್ಚನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸಧ್ಯ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ ಎಂಟರ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದರು. ಅದರ ಬೆನ್ನಲ್ಲೇ ಸುದೀಪ್ ಅವರ ಆರೋಗ್ಯದ ಸಮಸ್ಯೆ ಎದುರಾಗಿದ್ದು ಎಂಟು ವಾರ ಬಿಗ್ ಬಾಸ್ ಕಾರ್ಯಕ್ರಮದ ವಾರದ ಕಥೆಯಲ್ಲಿ ಭಾಗವಹಿಸಿದ್ದ ಸುದೀಪ್ ಈಗ ಎರಡು ವಾರದಿಂದ ಕಾರ್ಯಕ್ರಮಕ್ಕೆ ಬರಲಿಲ್ಲ. ಇದಕ್ಕೆ ಕಾರಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಈ ವಾರದ ಬಿಗ್ ಬಾಸ್ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಿರೂಪಣೆ ಇಲ್ಲವಾಗಿದೆ. ಇದೇ ಸಮಯದಲ್ಲಿ ಲೈವ್ ಬಂದಿದ್ದ ನಟಿ ರಶ್ಮಿಕ ಮಂದಣ್ಣ ಅವರು ತನ್ನ ಅಭಿಮಾನ್ ಒಬ್ಬರು ಕೇಳಿದ ಪ್ರಶ್ನೆಗೆ ಸುದೀಪ್ ಅವರ ಕುರಿತಾಗಿ ಈ ರೀತಿಯಾಗಿ ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವುದಕ್ಕಿಂತ ಒಂದಲ್ಲ ಒಂದು ಕಾಂಟ್ರವರ್ಸಿ ಮಾಡಿಕೊಂಡು ಹೆಸರು ಮಾಡಿರುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಲೈವ್ ಬಂದಿದ್ದ ರಶ್ಮಿಕ ಮಂದಣ್ಣ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಅಭಿಮಾನಿ ಒಬ್ಬರು ರಶ್ಮಿಕ ಗೆ ನಿಮಗೆ “ಸುದೀಪ್ ಸರ್ ಅವರ ಜೊತೆ ಅಭಿನಯ ಮಾಡಲು ಅವಕಾಶ ಸಿಕ್ಕಿದರೆ ಏನ್ ಮಾಡ್ತೀರಾ”? ಎಂದು ಕೇಳಿದ್ದಾರೆ. ಅದಕ್ಕೆ ನಗುತ್ತಾ ಉತ್ತರ ನೀಡಿದ ರಶ್ಮಿಕ ಸುದೀಪ್ ಸರ್ ಜೊತೆ ಅಭಿನಯ ಮಾಡಲು ಅವಕಾಶ ಸಿಕ್ಕಿದರೆ ಖಂಡಿತ ಅಭಿನಯ ಮದುವೆ ಆ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಆ ವಿಡಿಯೋದಲ್ಲಿ ಕೆಲವು ಅಭಿಮಾನಿಗಳು ರಷ್ಮೀಕಾಗೆ ಕನ್ನಡದವರಾಗಿ ಮೊದಲು ಕನ್ನಡವನ್ನು ಸರಿಯಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಹೇಳಿದ್ದನ್ನು ಕೂಡಾ ಗಮನಿಸಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!