ಗುರುದೋಷ ಸುಮಾರು ಜನರಿಗೆ ಇರುತ್ತದೆ. ಶನಿ ಮತ್ತು ರಾಹು ಸಂಧಿಯಿಂದ ಕೂಡ ಗುರುದೋಷ ಉಂಟಾಗುತ್ತದೆ. ವಿಷ್ಣುವಿಗೆ ತುಳಸಿ ಎಂದರೆ ಬಹಳ ಇಷ್ಟ. ತುಳಸಿಯ ಸೇವನೆ ಮಾಡುವುದರಿಂದ ನಮಗೆ ತಿಳಿಯದೇ ಗುರುದೋಷ ನಿವಾರಣೆ ಆಗುತ್ತದೆ. ನಾವು ಅದರ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಯೋಗ್ಯತೆ ಇರುತ್ತದೆ ಆದರೆ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಕೆಲವು ಸ್ಥಾನ ಮತ್ತು ಪದವಿ ಸಿಗಲಿಲ್ಲ ಎಂದು ಕೊರಗುತ್ತಾರೆ. ಕೆಲವು ತಂದೆ ತಾಯಿಯರಿಗೆ ಮಗ ಮತ್ತು ಮಗಳು ಚೆನ್ನಾಗಿ ಓದುತ್ತಾರೆ ಆದರೆ ಯಾವುದೇ ಯಶಸ್ಸು ಸಿಗುತ್ತಿಲ್ಲ ಎಂಬ ಕೊರಗಿನಲ್ಲಿ ಇರುತ್ತಾರೆ. ತನ್ನ ಮಗ ಬೇರೆಯವರ ಸಂಗ ಮಾಡಿ ಬಹಳ ಕೆಟ್ಟವನಾಗುತ್ತಿದ್ದಾನೆ. ತನ್ನ ಮಗಳು ತನ್ನ ಮಾತೇ ಕೇಳುವುದಿಲ್ಲ ಇವೆಲ್ಲ ಗುರುದೋಷದ ಲಕ್ಷಣಗಳು ಆಗಿವೆ.
ಇವೆಲ್ಲ ಲಕ್ಷಣಗಳು ಇದೆ ಎಂದಾಗ ಮಲಗಿರುವ ಶ್ರೀನಿವಾಸ ಅಥವಾ ವಿಷ್ಣುವಿನ ಸಣ್ಣ ಮೂರ್ತಿಯನ್ನು ತೆಗೆದುಕೊಂಡು ಬರಬೇಕು. ಅದನ್ನು ಒಂದು ಬೆಳ್ಳಿತಟ್ಟೆಯಲ್ಲಿ ಇಡಬೇಕು. ರಾಮತುಳಸಿ ಎನ್ನುವುದು ಸಿಗುತ್ತದೆ. ಒಂದು ಪೂರ್ಣ ವಿಷ್ಣು ಸಹಸ್ರನಾಮವನ್ನು ಹೇಳುತ್ತಾ ಪ್ರತಿನಿತ್ಯ ಪೂಜಿಸಬೇಕು. ಬೆಳಿಗ್ಗೆ ಎದ್ದು ಸ್ನಾನ ಮಾಡಿ ವಿಷ್ಣು ಸಹಸ್ರನಾಮ ನುಡಿಯುತ್ತಾ ವಿಷ್ಣುವಿನ ಮೂರ್ತಿಗೆ ರಾಮತುಳಸಿಯನ್ನು ಹಾಕಬೇಕು. ಪೂಜೆ ಮುಗಿದ ಮೇಲೆ ಆ ಪ್ರಸಾದವಾದ ರಾಮತುಳಸಿಯ ಎಲೆಯನ್ನು ದಿನನಿತ್ಯ ಸೇವಿಸಬೇಕು.
ಇದರ ಜೊತೆ ರಾಮತುಳಸಿ ಎಲೆಗೆ ಜೇನುತುಪ್ಪವನ್ನು ಸೇರಿಸಿ ಚಿಕ್ಕಮಕ್ಕಳಿಗೆ ನೀಡುತ್ತಾ ಹೋಗಬೇಕು. ಇದರಿಂದ ಚಿಕ್ಕ ಮಕ್ಕಳಲ್ಲಿ ವಿದ್ಯಾಬುದ್ಧಿ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಶಂಕರಪುಷ್ಪಚೂರ್ಣವನ್ನು ಮಕ್ಕಳಿಗೆ ಕೊಡುವುದರಿಂದ ಅವರ ಎಲ್ಲಾ ಶಕ್ತಿ ಹೆಚ್ಚುತ್ತದೆ. ಪ್ರತಿಯೊಂದು ಗುರುವಾರ ಒಂದು ಸ್ವಲ್ಪ ಕೋಸಂಬರಿ ಮತ್ತು ಪಾನಕವನ್ನು ಮಾಡಿ ರಾಮದೇವಸ್ಥಾನಕ್ಕೆ ಹೋಗಿ ಪ್ರಸಾದವಾಗಿ ಹಂಚುತ್ತಾ ಬರಬೇಕು. ಇದರಿಂದ ಅನೇಕ ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿದೆ.