Ram Bhajan ias officer: ಸಾದಿಸುವವನಿಗೆ ಸಾಧನೆಯ ಶ್ರಮ, ಆಸಕ್ತಿ ಜೊತೆಗೆ ಹಠ ಇದ್ರೆ ಖಂಡಿತ ಯಶಸ್ಸು ಪಡೆಯುತ್ತಾನೆ ಎಂಬುದಕ್ಕೆ ಈ ವ್ಯಕ್ತಿಯೇ ಸಾಕ್ಷಿ ಆಗಿದ್ದಾರೆ. ತನ್ನದು ಬಡ ಕುಟುಂಬ ತಂದೆ ತಾಯಿ ಇಬ್ಬರು ಕೂಡ ದಿನಗೂಲಿ ಮಾಡುವ ಜೊತೆಗೆ, ಮೇಕೆ ಸಾಕಾಣಿಕೆ ಮಾಡಿ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ಸಾಗಿಸುತ್ತಿದ್ದರು.
ಇನ್ನೂ ಕೆಲವು ದಿನಗಳು ಸರಿಯಾಗಿ ಕೆಲಸ ಸಿಗದೇ ಒಂದೊಂದು ರೂಪಾಯಿಗೂ ಬೇರೆಯವರ ಹತ್ತಿರ ಪರಾಡಬೇಕಿತ್ತು. ಇವತ್ತಿನ ದಿನದಲ್ಲಿ ಎಲ್ಲ ಸೌಲಭ್ಯ ಇದ್ರೂ ಸರಿಯಾಗಿ ಓದದೇ ಇರುವವರ ಮಧ್ಯೆ ಈ ವ್ಯಕ್ತಿ ಬಡತನದಲ್ಲಿ ಹುಟ್ಟಿ ಬೆಳೆದು, ತನ್ನ ಜೀವನವನ್ನು ರೂಪಿಸಿಕೊಂಡಿದ್ದಾರೆ, ಬಡತನದಲ್ಲಿಯೋ ಬೆಳೆದು ಬಂದ ಈ ವ್ಯಕ್ತಿ ಇವತ್ತು ಸರ್ಕಾರೀ ಉನ್ನತ ಹುದ್ದೆಯಲ್ಲಿ ಐಎಎಸ್ ಅಧಿಕಾರಿಯಾಗಿದ್ದಾರೆ. ಅಷ್ಟಕ್ಕೂ ಇವರು ಯಾರು ಇವರ ಸಾಧನೆಯ ಹಾದಿ ಹೇಗಿತ್ತು ಅನ್ನೋದನ್ನ ಮುಂದೆ ನೋಡಿ.
ಇವರ ಹೆಸರು ರಾಮ್ ಭಜನ್ ಕುಮ್ಹರಾ ಎಂಬುದಾಗಿ ರಾಜಸ್ತಾನದ ಬಾಪಿ ಎನ್ನುವ ಚಿಕ್ಕ ಹಳ್ಳಿಯಿಂದ ಬಂದವರು ರಾಮ್ ಭಜನ್ ಮತ್ತು ಅವರ ತಾಯಿ ಹಿಂದೆ ದಿನಗೂಲಿ ಕಾರ್ಮಿಕರು. ಅವರ ತಾಯಿ ದೊಡ್ಡ ಪ್ರಮಾಣದ ಕಲ್ಲುಗಳನ್ನು ಒಡೆಯುವ, ಮತ್ತು ಅವುಗಳನ್ನು ಒಡೆಯಲು ಗಂಟೆಗಳ ಕಾಲ ಕಳೆಯುತ್ತಿದ್ದರು. UPSC ಸಿವಿಲ್ ಸರ್ವೀಸಸ್ 2022 ರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಯುವಕ ಪ್ರತಿ ದಿನ ಸುಮಾರು 25 ಹೆಚ್ಚು ಸೈಜ್ ಕಲ್ಲುಗಳನ್ನು ಸಾಗಿಸುವ ಜವಾಬ್ದಾರಿಯನ್ನು ಹೊಂದಿದ್ದನು. ಈ ಕೆಲಸ ಮಾಡಿದರು ಕೂಡ ಒಂದೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದರು.
ಇವತ್ತು ತಾವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಹೌದು ಸಾಧಿಸಲು ಬಡತನ ಅಡ್ಡಿಯಲ್ಲ, ಸಾಧಿಸುವ ಹಠ ಶ್ರಮ ಇದ್ರೆ, ಖಂಡಿತ ಜೀವನದಲ್ಲಿ ಏನ್ ಬೇಕಾದ್ರು ಸಾಧಿಸಬಹುದು ಎಂಬುದಕ್ಕೆ ಈ ವ್ಯಕ್ತಿ ಉತ್ತಮ ಉದಾಹರಣೆಯಾಗಿದ್ದಾರೆ. ಇನ್ನೂ ಇವರು IAS ಅಧಿಕಾರಿಯಾಗುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.