ಇಂದಿನ ದಿನಗಳಲ್ಲಿ ಕೈಕಟ್ಟಿ ಕುಳಿತರೆ ಯಾವುದೇ ಕೆಲಸವೂ ಆಗುವುದಿಲ್ಲ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಅದು ಯಾವುದೇ ರೀತಿಯ ಕೆಲಸವಾಗಿರಬಹುದು ಹೈನುಗಾರಿಕೆಯಿಂದಲು ಕೂಡ ನಮ್ಮ ಜೀವನವನ್ನು ನಾವು ಕಂಡುಕೊಳ್ಳಬಹುದು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಂಡು ನಮ್ಮ ರೈತರು ವ್ಯವಸಾಯವನ್ನು ಮಾಡುವುದರಿಂದ ಉತ್ತಮವಾದ ಆದಾಯವನ್ನು ಗಳಿಸಬಹುದು ಯಾರ ಮುಂದೆಯೂ ಕೈಚಾಚುವ ಪರಿಸ್ಥಿತಿ ಬರುವುದಿಲ್ಲ. ಇಂದು ನಾವು ನಿಮಗೆ ಒಬ್ಬ ಮಹಿಳೆ ಹೈನುಗಾರಿಕೆಯಲ್ಲಿ ಯಾವ ರೀತಿಯಾಗಿ ಉತ್ತಮವಾದ ಲಾಭವನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ

ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲಿನ ಗೌರಮ್ಮ ಎಂಬುವವರು ತಮ್ಮ ಪ್ರದೇಶದಲ್ಲಿ ಪಶುಸಂಗೋಪನೆ ಮಾಡುವ ಮೂಲಕ ಉತ್ತಮವಾದ ಆದಾಯ ಗಳಿಸುತ್ತಿದ್ದಾರೆ. ಪ್ರಮುಖವಾಗಿ ಹೈನುಗಾರಿಕೆ , ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಗೌರಮ್ಮನವರು ಮೊದಲಿಗೆ ಕಬ್ಬನ್ನು ಬೆಳೆಯುತ್ತಿದ್ದರು ವ್ಯವಸಾಯದಿಂದ ಅಷ್ಟೇನೂ ಲಾಭವಾಗುವುದಿಲ್ಲ. ಸಾಲ ಹೆಚ್ಚಾಗುತ್ತದೆ ನಾಲ್ಕು ಎಕರೆ ಕಬ್ಬನ ಬೆಳೆದರೆ ಅವರಿಗೆ ಅದರಿಂದ ಯಾವುದೇ ರೀತಿಯ ಲಾಭ ಸಿಗುತ್ತಿರಲಿಲ್ಲ ತುಂಬಾ ದುಡ್ಡು ವ್ಯಯವಾಗುತ್ತಿತ್ತು ಆ ಕಾರಣದಿಂದಾಗಿ ಪಶುಸಂಗೋಪನೆ ಪ್ರಾರಂಭಿಸುತ್ತಾರೆ.

ಮೊದಲಿಗೆ ಇವರ ಬಳಿ ಮೂರು-ನಾಲ್ಕು ಹಸುಗಳಿದ್ದವು ತದನಂತರ ಸಂಘ ಸಂಸ್ಥೆಗಳಿಂದ ಸಾಲ ತೆಗೆದು ಐದು ಹಸುಗಳನ್ನು ಖರೀದಿಸಿದರು. ನಂತರ ಇವರು ಹಾಲಿನ ವ್ಯಾಪಾರ ಮಾಡಲು ಶುರು ಮಾಡಿದರು ಅದರಿಂದ ಇವರಿಗೆ ಲಾಭ ಸಿಗುತ್ತದೆ ಲಾಭದಿಂದ ಮತ್ತೆ ಐದು ಹಸುಗಳನ್ನು ಖರೀದಿಸಿದರು. ಹೀಗೆ ಪಶುಸಂಗೋಪನೆಯಿಂದ ಅವರಿಗೆ ಹೆಚ್ಚಿನ ರೀತಿಯಲ್ಲಿ ಲಾಭ ಆದ ಹಾಗೆ ಹಸುಗಳನ್ನು ಮತ್ತೆ ಮತ್ತೆ ಕರಿದಿಸಿ ಹಸುವಿನ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ.

ಮನೆಯವರೆಲ್ಲರ ಶ್ರಮದ ಫಲವಾಗಿ ಉತ್ತಮ ಫಲಿತಾಂಶವನ್ನು ಕಾಣುತ್ತಾರೆ ಒಂದು ದಿನಕ್ಕೆ ಹನ್ನೆರಡು ಹಸುಗಳಿಂದ ಹಾಲನ್ನ ಹಿಂಡಿ ಒಂದು ಹೊತ್ತಿಗೆ ನೂರು ಲೀಟರ್ ಆಗುವಷ್ಟು ಹಾಲನ್ನು ಕರೆಯುತ್ತಾರೆ ಅಂದರೆ ಇವರು ಒಂದು ದಿನಕ್ಕೆ ಸುಮಾರು ಎರಡು ನೂರು ಲೀಟರ್ಗಳಷ್ಟು ಹಾಲನ್ನ ಕರೆಯುತ್ತಾರೆ ನೂರು ಲೀಟರುಗಳಷ್ಟು ಹಾಲಿನ ಲಾಭವನ್ನು ಇವರು ಒಂದು ದಿನಕ್ಕೆ ಪಡೆಯುತ್ತಾರೆ ಇದರ ಜೊತೆಗೆ ಕುರಿಸಾಕಣಿಕೆಯನ್ನು ಕೂಡ ಮಾಡುತ್ತಾರೆ. ಒಂದು ಸಾರಿ ಕುರಿಮರಿಯನ್ನು ಸಾಕಲು ಪ್ರಾರಂಭಿಸಿದರೆ ಆರು ತಿಂಗಳಿಗೆ ಅವುಗಳನ್ನು ಮಾರುತ್ತಾರೆ ಹೆಚ್ಚಿನ ಆದಾಯವನ್ನು ಇವರು ಕುರಿ ಸಾಕಾಣಿಕೆಯಲ್ಲಿ ಪಡೆಯುತ್ತಾರೆ.

ಕುರಿಗಳನ್ನು ಸಾಕುವುದರಿಂದ ಕಷ್ಟದ ಸಮಯದಲ್ಲಿ ತುಂಬಾ ಉಪಯೋಗವಾಗುತ್ತದೆ ಕಷ್ಟ ಬಂದಾಗ ಯಾರ ಬಳಿಯೂ ಕೈಚಾಚುವ ಅಗತ್ಯ ಇರುವುದಿಲ್ಲ ಒಂದು ಕುರಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ಅದರಿಂದ ಸಿಗುವ ಹಣದಲ್ಲಿ ಕಷ್ಟವನ್ನು ಪರಿಹರಿಸಿಕೊಳ್ಳಬಹುದು ಎಂದು ಗೌರಮ್ಮನವರು ಹೇಳುತ್ತಾರೆ. ಜೊತೆಗೆ ಇವರು ತಮ್ಮ ಮನೆಯ ಸಾಲವನ್ನೆಲ್ಲಾ ಈ ಹೈನುಗಾರಿಕೆಯಿಂದ ತೀರಿಸಿಕೊಂಡಿದ್ದಾರೆ.

ನಾನು ಹೈನುಗಾರಿಕೆ ಮಾಡುತ್ತೇನೆ ಎಂದು ಒಂದೇ ಬಾರಿಗೆ ಐದಾರು ಲಕ್ಷ ಖರ್ಚು ಮಾಡಿ ಕುರಿಗಳನ್ನು ಸಾಕಿದರೆ ಯಾವುದೇ ರೀತಿಯ ಪ್ರಯೋಜನ ಉಂಟಾಗುವುದಿಲ್ಲ. ಹಂತ ಹಂತವಾಗಿ ಕುರಿ ಸಾಕಾಣಿಕೆಯಿಂದ ಲಾಭವನ್ನು ಪಡೆಯಬಹುದು ಇವರು ತಮ್ಮ ಜಮೀನಿನಲ್ಲಿ ಒಟ್ಟು ಇರುವ ಐದು ಎಕರೆಯಲ್ಲಿ ಒಂದು ಅರ್ಧ ಎಕರೆಯಷ್ಟು ಜಾಗವನ್ನು ತಮ್ಮ ಊಟಕ್ಕೆಬೇಕಾದ ಬೆಳೆ ಬೆಳೆಯುವುದಕ್ಕೆ ಬಿಟ್ಟು ಉಳಿದೆಲ್ಲ ಕಡೆ ಸೀಮೆ ಹುಲ್ಲನ್ನು ಬೆಳೆಯುತ್ತಾರೆ ಮೊದಲಿಗೆ ಸೀಮೆ ಹುಲ್ಲಿನ ಜೊತೆ ಜೋಳವನ್ನು ಬೆಳೆಯುತ್ತಿದ್ದರು ನವಿಲಿನ ಕಾಟ ಹೆಚ್ಚಾದಂತೆ ಜೋಳ ಕೈಬಿಡುತ್ತಾರೆ ಇವರಿಗೆ ಮನೆಯಲ್ಲಿ ತುಂಬಾ ಪ್ರಮಾಣದ ಹಸುಗಳು ಕುರಿಗಳು ಇರುವುದರಿಂದ ಅವುಗಳಿಗೆ ಹಿಂಡಿ ಹಾಕುವುದಕ್ಕೆ ಸಾಧ್ಯವಾಗುವುದಿಲ್ಲ ಆದ್ದರಿಂದ ಈ ಸೀಮೆ ಹುಲ್ಲು ಗಳನ್ನ ಕತ್ತರಿಸಿ ಅವುಗಳಿಗೆ ಹಾಕುತ್ತಾರೆ ಹಸುಗಳಿಗೆ ಅವುಗಳು ಹಾಲು ಕೊಡುವ ಪ್ರಮಾಣದ ಆಧಾರದ ಮೇಲೆ ಅವುಗಳಿಗೆ ಎಷ್ಟು ಬೇಕೋ ಅಷ್ಟು ಪೀಡನ್ನು ಹಾಕುತ್ತಾರೆ.

ಹಸುಗಳು ಕರು ಹಾಕಿದಾಗ ಕರುಗಳನ್ನು ಕಟ್ಟುವುದಿಲ್ಲ ಅವುಗಳನ್ನು ಹಸುವಿನ ಹಾಲು ಕುಡಿಯುವುದಕ್ಕಾಗಿ ಬಿಡುತ್ತಾರೆ. ಮೂರು ದಿನ ಆದಮೇಲೆ ಆ ಕರುಗಳನ್ನು ಕಟ್ಟಿಹಾಕಿ ಅವುಗಳಿಗೆ ಹಾಲನ್ನು ಕರೆದು ಕುಡಿಸುತ್ತಾರೆ. ಇನ್ನು ಕರುಗಳಿಗೆ ಎರಡು ತಿಂಗಳು ಆಗುವವರೆಗೆ ಬರಿ ಹಾಲನ್ನಷ್ಟೇ ಕೊಡುತ್ತಾರೆ ನಂತರ ಹಾಲಿನ ಜೊತೆ ಸ್ವಲ್ಪ ಸ್ವಲ್ಪ ಪಿಡನ್ನು ಮಿಶ್ರಣ ಮಾಡಿ ಕೊಡುತ್ತಾರೆ. ಮೂರು ತಿಂಗಳವರೆಗೆ ಕರುಗಳಿಗೆ ಹಾಲನ್ನು ಕೊಡುತ್ತಾರೆ ನಂತರ ಅವುಗಳಿಗೆ ತಿಂಡಿಯನ್ನು ಕೊಡುತ್ತಾರೆ ಅದಾದ ಮೇಲೆ ಮೇವನ್ನು ಕೊಡುತ್ತಾರೆ ಹೀಗೆ ಮಾಡುವುದರಿಂದ ಕರುಗಳು ಚೆನ್ನಾಗಿ ಬೆಳೆಯುವುದರ ಜೊತೆಗೆ ಕರುಗಳು ಒಂದು ವರ್ಷಕ್ಕೆ ಹಿಟಿಗೆ ಬರುತ್ತವೆ

ಇದಾದ ಒಂಬತ್ತು ತಿಂಗಳಿಗೆ ಕರವನ್ನು ಹಾಕುತ್ತವೆ. ಇವರು ಒಂದು ವರ್ಷಕ್ಕೆ ಐದು ಕರುಗಳನ್ನು ಸಾಕುತ್ತಾರೆ. ಇವರಿಗೆ ಪಶುಸಂಗೋಪನೆಯಿಂದ ಯಾವುದೇ ರೀತಿಯ ನಷ್ಟ ಆಗುವುದಿಲ್ಲ ಯಾಕೆಂದರೆ ಕರುಗಳಿಗೆ ಯಾವುದೇ ರೀತಿಯ ದುಡ್ಡುಕೊಟ್ಟು ಆಹಾರ ಪದಾರ್ಥಗಳನ್ನು ಖರೀದಿಸಿ ಹಾಕುವುದಿಲ್ಲ. ಹಸುಗಳ ಸಗಣಿಯಿಂದ ಗೊಬ್ಬರ ಸಿಗುತ್ತದೆ ಇದನ್ನು ಮಾರುವ ಮೂಲಕ ಇವರು ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ.

ಇವರು ಸಾಕಿರುವ ಹಸುಗಳೆಲ್ಲ ಹತ್ತರಿಂದ ಹದಿನೈದು ಲೀಟರ್ ಮೇಲೆ ಹಾಲನ್ನ ಕೊಡುವುದರಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಒಬ್ಬರು ಹಸುಗಳನ್ನು ಹೊರಗೆ ಕಟ್ಟಿದರೆ ಇನ್ನೊಬ್ಬರು ಹಸುಗಳಿಗೆ ಮಷೀನ್ ಗಳನ್ನು ಹಾಕಿ ಹಾಲನ್ನು ಕರೆಯುತ್ತಾರೆ ಹೀಗೆ ಬೆಳಿಗ್ಗೆ ಆರು ಗಂಟೆಯೊಳಗೆ ಹಾಲನ್ನ ಕರೆದು ಅದನ್ನು ಡೇರಿಗೆ ಹಾಕುತ್ತಾರೆ ನಂತರಹುಲ್ಲನ್ನು ಕತ್ತರಿಸಿ ಕೊಟ್ಟಿಗೆಯನ್ನು ಸ್ವಚ್ಛ ಮಾಡುತ್ತಾರೆ ಹಸುಗಳಿಗೆ ಹುಲ್ಲು ಹಾಕುತ್ತಾರೆ ಹೀಗೆ ಹತ್ತರಿಂದ ಹನ್ನೊಂದು ಗಂಟೆಯೊಳಗೆ ಕೊಟ್ಟಿಗೆ ಕೆಲಸವನ್ನು ಮುಗಿಸುತ್ತಾರೆ ಹಿಂದಿನ ದಿನವೇ ಹುಲ್ಲನ್ನು ತಂದು ಇಟ್ಟುಕೊಳ್ಳುವುದರಿಂದ ಇವರಿಗೆ ಬೇಗ ಬೇಗ ಕೊಟ್ಟಿಗೆಯ ಕೆಲಸ ಮುಗಿಯುತ್ತದೆ. ಇನ್ನು ಸಂಜೆ ನಾಲ್ಕು ಗಂಟೆಯ ಹಾಗೆ ಕೊಟ್ಟಿಗೆ ಕೆಲಸ ಮನೆ ಪ್ರಾರಂಭಿಸಿದರೆ ಸಂಜೆ ಏಳು ಗಂಟೆಯ ಒಳಗಾಗಿ ಅವರ ಕೊಟ್ಟಿಗೆ ಕೆಲಸಗಳು ಕಾರ್ಯಗಳು ಮುಗಿದಿರುತ್ತದೆ.

ಪ್ರಾರಂಭದಲ್ಲಿ ಗೌರಮ್ಮನವರು ಪ್ರೀತಿಯಿಂದ ಹಸುಗಳ ಒಂದೆರಡು ಹಸುಗಳನ್ನು ಒಂದೆರಡು ಆಡುಗಳನ್ನು ಸಾಕಿರುತ್ತಾರೆ ಬರುಬರುತ್ತಾ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ ಮುಂದೆ ಅವುಗಳನ್ನು ಕೂಡಿಹಾಕಲು ಲಕ್ಷ ರೂಪಾಯಿ ಖರ್ಚು ಮಾಡಿ ಅಟ್ಟಲನ್ನು ಮಾಡಿಕೊಳ್ಳುತ್ತಾರೆ. ಈ ಕುರಿಗಳನ್ನು ಬ್ಯಾಚ್ ಗಳ ಪ್ರಕಾರವಾಗಿ ಸಾಕಿ ಅವುಗಳ ಮಾರಾಟವನ್ನು ಮಾಡುತ್ತಾರೆ ಒಂದು ಬ್ಯಾಚ್ ಕುರಿ ಬೆಳೆದು ಇನ್ನೊಂದು ಬ್ಯಾಚ್ ಕುರಿಮರಿಗಳು ರೆಡಿ ಯಾಗುವುದರಲ್ಲಿ ಹಳೆಯ ಕುರಿಗಳನ್ನು ಮಾರುತ್ತಾರೆ. ಆದರೆ ಈ ಕುರಿಗಳನ್ನು ಸಾಕುವುದಕ್ಕೆ ಕೆಲಸ ಕಡಿಮೆಯಾಗುತ್ತದೆ ಹಸುಗಳಿಗೆ ಮಾಡುವಕೆಲಸಕ್ಕಿಂತ ಇವುಗಳ ಕೆಲಸ ಬೇಗ ಮುಗಿಯುತ್ತದೆ. ನಾಲ್ಕು ಹಸುಗಳ ಮೇವಿನಹುಲ್ಲನ್ನು ಐವತ್ತು-ಅರವತ್ತು ಕುರಿಗಳಿಗೆ ಹಾಕಬಹುದು ಎಂದು ಗೌರಮ್ಮನವರು ಹೇಳುತ್ತಾರೆ. ಇವರು ಹೇಳುವ ಪ್ರಕಾರ ಇವರು ಒಂದು ವರ್ಷಕ್ಕೆ ಒಂದು ಲಕ್ಷದಿಂದ ಎರಡು ಲಕ್ಷ ಆದಾಯವನ್ನು ಕುರಿ ಸಾಕಾಣಿಕೆಯಿಂದ ಸಂಪಾದಿಸುತ್ತಾರೆ.

ಹಸು ಸಾಕಾಣಿಕೆ ಮತ್ತು ಕುರಿ ಸಾಕಾಣಿಕೆ ಜೊತೆಗೆ ಇವರು ಕೋಳಿ ಸಾಕಾಣಿಕೆಯನ್ನು ಮಾಡುತ್ತಾರೆ ಸುಮಾರು ಐವತ್ತು ಮೊಟ್ಟೆ ಇಡುವ ಕೋಳಿಗಳನ್ನು ಸಾಕಿದ್ದಾರೆ ಇವರು ಕೋಳಿಯನ್ನು ಮಾರುವುದಕ್ಕಿಂತ ಮೊಟ್ಟೆಯನ್ನು ಹೆಚ್ಚಾಗಿ ಮಾರಾಟ ಮಾಡುವುದರಿಂದ ವಾರಕ್ಕೆ ಒಂದು ಸಾವಿರ ರೂಪಾಯಿ ಆದಾಯ ಕೋಳಿಗಳಿಂದ ಗಳಿಸುತ್ತಾರೆ. ಗೌರಮ್ಮನವರು ಹೇಳುವುದು ಏನೆಂದರೆ ಇಲ್ಲಿ ಹೈನುಗಾರಿಕೆಯನ್ನು ಮಾಡುವುದಕ್ಕೆ ಮನೆಯಲ್ಲಿರುವ ಗಂಡಸರು ಸ್ವಲ್ಪ ಸಹಾಯ ಮಾಡಿದರೆ ಹೆಣ್ಣು ಮಕ್ಕಳೇ ಮುಂದಾಗಿ ಇವುಗಳನ್ನು ಸುಲಭವಾಗಿ ಮಾಡಬಹುದು ನನ್ನ ಕೈಯಲ್ಲಿ ಇದು ಆಗುವುದಿಲ್ಲ ಇದು ನನಗೆ ಕಷ್ಟವಾಗುತ್ತದೆ ಎಂದು ಒಳಗೆ ಕುಳಿತುಕೊಂಡರೆ ಯಾವ ಕೆಲಸವನ್ನು ಮಾಡುವುದಕ್ಕಾಗುವುದಿಲ್ಲ ಯಾರದ್ದಾದರೂ ಸಹಾಯವನ್ನು ತೆಗೆದುಕೊಂಡು ಕೆಲಸ ಮಾಡುವುದರಿಂದ ಉತ್ತಮ ರೀತಿಯಲ್ಲಿ ಫಲಿತಾಂಶವನ್ನು ಕೊಂಡುಕೊಳ್ಳಬಹುದು.

ನಿಮಗೇನಾದರೂ ಹೈನುಗಾರಿಕೆ ಮಾಡಬೇಕು ಎಂಬ ಆಸೆ ಇದ್ದರೆ ಒಂದೇ ಬಾರಿಗೆ ದೊಡ್ಡಮಟ್ಟದ ಯೋಜನೆಯನ್ನು ಹಾಕಿಕೊಳ್ಳಬೇಡಿ ಸ್ವಲ್ಪ ಕಡಿಮೆ ಮಟ್ಟದಲ್ಲಿ ಯೋಜನೆಯನ್ನು ಮಾಡಿ ಅದರಿಂದ ಲಾಭ ಬರುತ್ತಾ ಬರುತ್ತಾ ದೊಡ್ಡಮಟ್ಟದಲ್ಲಿ ಹೈನುಗಾರಿಕೆ ಮಾಡಬಹುದು ಒಂದೇ ಬಾರಿಗೆ ದೊಡ್ಡ ಪ್ರಮಾಣದ ಸಾಲವನ್ನು ಮಾಡಿ ಉದ್ಯಮವನ್ನು ಮಾಡುತ್ತೇನೆ ಎಂದರೆ ಇದರಿಂದ ಕೆಲವೊಂದು ಸಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗಾಗಿ ಹಂತಹಂತವಾಗಿ ಉದ್ಯಮವನ್ನು ಪ್ರಾರಂಭಿಸಬೇಕು ಅದರಿಂದ ಬರುವ ಆದಾಯವನ್ನು ನೋಡಿಕೊಂಡು ಇನ್ನೂ ಹೆಚ್ಚಿನ ಮಟ್ಟಕ್ಕೆ ಅದನ್ನು ಕೊಂಡೊಯ್ಯಬಹುದು. ಈ ಹೈನುಗಾರಿಕೆಯನ್ನು ಮಾಡುವುದರಿಂದ ನಾವು ಬೇರೆಯವರಿಗೆ ಸಾಲವನ್ನು ಕೊಡುವಷ್ಟು ಸ್ಥಿತಿವಂತರ ಆಗುತ್ತೇವೆ ಎಂದು ಗೌರಮ್ಮನವರು ಅಭಿಪ್ರಾಯಪಡುತ್ತಾರೆ. ಒಟ್ಟಾರೆಯಾಗಿ ಗೌರಮ್ಮನವರು ಇಂದಿನ ಮಹಿಳೆಯರಿಗೆ ಮಾದರಿ ರೀತಿಯಲ್ಲಿ ಹೈನುಗಾರಿಕೆಯನ್ನು ಮಾಡಿ ತೋರಿಸಿದ್ದಾರೆ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!