ಇಡೀ ಸೌರಮಂಡಲದಲ್ಲಿ ಭೂಮಿ ಒಂದು ಅದ್ಬುತ ಗ್ರಹವಾಗಿದೆ. ಈ ಗ್ರಹದ ಕೆಲವೊಂದು ರಹಸ್ಯಗಳಿಂದಾಗಿ ಇಲ್ಲಿ ಗವಿಗಳ ನೆಲೆಯಿದೆ. ಆ ಹಲವಾರು ರಹಸ್ಯಗಳಲ್ಲಿ ಮಳೆ ಕೂಡ ಒಂದಾಗಿದೆ. ಇದು ಇಡೀ ಬ್ರಹ್ಮಾಂಡದ ವಿಚಿತ್ರ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ವಾತಾವರಣದಲ್ಲಿರುವ ನೀರಾವಿಯು ತಂಪು ಪಡೆದುಕೊಂಡು ಮತ್ತೆ ದ್ರವರೂಪಕ್ಕೆ ಬಂದು ಭೂಮಿಯ ಮೇಲೆ ಬೀಳುವ ಪ್ರಕ್ರಿಯೆಯೇ ಮಳೆ. ಹೀಗಾಗಿ ನಾವು ಇಲ್ಲಿ ಮಳೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೋಡಗಳಲ್ಲಿನ ನೀರು ಬೇರೆ ಬೇರೆ ಹನಿಗಳಾಗಿ ಭೂಮಿಗೆ ಉದುರುತ್ತವೆ. ಎತ್ತರದ ಮೋಡಗಳಿಂದ ಬೀಳುವ ಹನಿಗಳೆಲ್ಲಾ ನೆಲವನ್ನು ತಲುಪಲಾರವು. ಮೋಡ ಮತ್ತು ನೆಲಗಳ ಮಧ್ಯೆ ಶುಷ್ಕ ವಾತಾವರಣವಿದ್ದಲ್ಲಿ ಗಣನೀಯ ಪ್ರಮಾಣದ ಸಣ್ಣ ಹನಿಗಳು ಮತ್ತೆ ಆವಿಯಾಗಿ ಹೋಗುತ್ತವೆ. ಹೀಗೆ ಒಂದು ಹನಿಯೂ ನೆಲ ಮುಟ್ಟದೆ ಹೋದರೆ ಅಂತ ಮಳೆಯನ್ನು ವಿರ್ಗಾ ಎಂದು ಕರೆಯುವರು. ಇಂತಹ ವಿದ್ಯಮಾನವು ಸಾಮಾನ್ಯವಾಗಿ ಬಿಸಿ ಮತ್ತು ಶುಷ್ಕ ಮರುಭೂಮಿಯ ಪ್ರದೇಶಗಳಲ್ಲಿ ಘಟಿಸುತ್ತದೆ.

ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರ ಮತ್ತೆ ಮುಂದುವರಿಯುವುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಜಲಚಕ್ರ ಎಂದು ಕರೆಯಲಾಗುತ್ತದೆ.

ನೆಲದ ಮೇಲಿನ ಮರಗಿಡಗಳು ಸಹ ಗಣನೀಯ ಪ್ರಮಾಣದಲ್ಲಿ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತವೆ. ಮಾನವನಿರ್ಮಿತ ಯಂತ್ರಗಳು ಮತ್ತು ಇತರ ಪ್ರದೂಷಣ ಸಾಧನಗಳಿಂದ ಸೂಕ್ಷ್ಮ ಗಾತ್ರದ ವಸ್ತುಕಣಗಳು ಮೋಡದ ಉತ್ಪತ್ತಿಯಲ್ಲಿ ಪಾತ್ರ ವಹಿಸುವುವು. ಒಂದು ವಿಶಿಷ್ಟ ಸಂಗತಿಯೆಂದರೆ ವಾಹನಗಳ ದಟ್ಟಣೆಯಿಂದಾಗಿ ವಾರದ ಮೊದಲ ಭಾಗದಲ್ಲಿ ಮೋಡಗಳ ರಚನೆಯುಂಟಾಗಿ ವಾರಾಂತ್ಯದಲ್ಲಿ ಅವು ಮಳೆ ಸುರಿಸುವ ಸಂಭವ ಹೆಚ್ಚಾಗಿರುತ್ತದೆ. ಆಕಾಶದಲ್ಲಿ ನೀರಿನ ಕಣ ಮಂಜಾಗಲು ಸುಲಭದಲ್ಲಿ ಸಾಧ್ಯವಿಲ್ಲ.

ಅದಕ್ಕೆಮಣ್ಣಿನ ಕಣಗಳು ಮೋಡವನ್ನು ಸೇರಿದಾಗ ಅಲ್ಲಿರುವ ನೀರಿನ ಕಣಗಳು ಮಂಜುಗಡ್ಡೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಉಳಿದ ನೀರಿನ ಹನಿಗಳು ಬಂದು ಹೋಗಿ ಮಂಜುಗಡ್ಡೆಯನ್ನು ಸೇರಿ ಇದು ದೊಡ್ಡ ಘನರೂಪವನ್ನು ಪಡೆದುಕೊಳ್ಳುತ್ತದೆ. ಗಣ ರೂಪವನ್ನು ಪಡೆದುಕೊಂಡಾಗ ಅದರ ತೂಕ ಜಾಸ್ತಿಯಾಗಿ ಭೂಮಿಗೆ ಬೀಳಲು ಶುರುವಾಗುತ್ತದೆ. ಭೂಮಿಗೆ ಹತ್ತಿರವಾಗುತ್ತಿದ್ದ ಹಾಗೆ ತಾಪಮಾನ ಜಾಸ್ತಿಯಾಗಿ ಮಂಜಿನ ಗಡ್ಡೆ ಕರಗಿ ನೀರಾಗಿ ಮಳೆಯ ರೂಪದಲ್ಲಿ ಭೂಮಿಯನ್ನು ಸೇರುತ್ತದೆ. ಈ ಮಂಜಿನ ಗಡ್ಡೆಯೊಳಗೆ ಸೂಕ್ಷ್ಮಜೀವಿಗಳು ಸಹ ಇರುತ್ತದೆ. ಇದೇ ಕಾರಣಕ್ಕಾಗಿಯೇ ಮಳೆಯ ನೀರನ್ನು ಸೇವಿಸಬಾರದು ಎನ್ನುತ್ತಾರೆ. ಇದೊಂದು ಪ್ರಕೃತಿಯ ವಿಸ್ಮಯವೇ ಆಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!