Job News Karnataka

Railway cooperative bank Recruitment: ಮೈಸೂರು ರೈಲ್ವೆ ಸಹಕಾರ ಬ್ಯಾಂಕ್ ನಲ್ಲಿ (Railway cooperative bank) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹಾಗಾದರೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ವಿವರಗಳನ್ನು ನಾವು ಈ ಲೇಖನದಲ್ಲಿ ನೋಡೋಣ.

ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮೈಸೂರು ರೈಲ್ವೆ ಸಹಕಾರ ಬ್ಯಾಂಕ್ ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಸಹಾಯಕ, ಅಸಿಸ್ಟೆಂಟ್ ಹಾಗೂ ಕ್ಲಾರ್ಕ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.

ಮೊದಲಿಗೆ ಅಭ್ಯರ್ಥಿಗಳ ಶೈಕ್ಷಣಿಕ ವಿದ್ಯಾರ್ಹತೆಯನ್ನು ನೋಡುವುದಾದರೆ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC, PUC ಮತ್ತು ಯಾವುದೇ ಡಿಗ್ರೀ ಮಾಡಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 28 ಆಗಿರುತ್ತದೆ. ಆಯ್ಕೆ ಆದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ನಿರ್ವಹಿಸಬೇಕು. ಹುದ್ದೆಗಳ ವಿವರಗಳು ಈ ರೀತಿಯಾಗಿರುತ್ತದೇ.
ಬ್ರಾಂಚ್ ಮ್ಯಾನೇಜರ್1, ಅಕೌಂಟೆಂಟ್ 4, ಸೀನಿಯರ್ ಕಾಶೀರ್1, ಕಂಪ್ಯೂಟರ್ ಸೂಪರ್ವೈಸರ್ 1, ಜೂನಿಯರ್ ಕ್ಲರ್ಕ್10, ಆಫೀಸ್ ಅಸಿಸ್ಟೆಂಟ್ 4 ಈ ರೀತಿಯಾಗಿ ಒಟ್ಟೂ 21 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Railway cooperative bank Recruitment

ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ವಿದ್ಯಾರ್ಹತೆ ಯಾವುದೇ ಪದವಿ ಆಗಿರಬೇಕು ಸಹಕಾರ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಇವರಿಗೆ ಪ್ರತೀ ತಿಂಗಳು 35,400/- ವೇತನವನ್ನು ನೀಡಲಾಗುತ್ತದೆ. ಅಕೌಂಟೆಂಟ್ ಹುದ್ದೆಗೆ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಸಹಕಾರ ಅಥವಾ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ಇವರಿಗೂ ಕೂಡಾ ಪ್ರತೀ ತಿಂಗಳು 35,400/- ವೇತನವನ್ನು ನೀಡಲಾಗುತ್ತದೆ.

ಸೀನಿಯರ್ ಕಾಶೀರ್ ಹುದ್ದೆಗೆ ವಿದ್ಯಾರ್ಹತೆ ಯಾವುದೇ ಪದವಿ ಆಗಿರಬೇಕು ಸಹಕಾರ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಇವರಿಗೆ ಪ್ರತೀ ತಿಂಗಳು 35,400 ವೇತನವನ್ನು ನೀಡಲಾಗುತ್ತದೆ. ಕಂಪ್ಯೂಟರ್ ಸೂಪರ್ವೈಸರ್ ಹುದ್ದೆಗೆ, BSC, BCA ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು. ಇವರಿಗೆ ಪ್ರತೀ ತಿಂಗಳು 29,200 ವೇತನ ನಿಗದಿ ಮಾಡಲಾಗಿದೆ.

ಜೂನಿಯರ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ PUC ಆಗಿರಬೇಕು. ಇವರಿಗೆ ಪ್ರತೀ ತಿಂಗಳು 19,900 ವೇತನವನ್ನು ನೀಡಲಾಗುತ್ತದೆ. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ SSLC ಆಗಿರಬೇಕು ಹಾಗೂ ಇವರಿಗೆ ಪ್ರತೀ ತಿಂಗಳು ನೀಡುವ ವೇತನ 18,000 ರೂಪಾಯಿ ಆಗಿರುತ್ತದೆ.

ಇನ್ನೂ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ನೋಡುವುದಾದರೆ, 28 ಜೂನ್ 2023 ಕ್ಕೆ ಅನ್ವಯ ಆಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಅರ್ಜಿ ಸಲ್ಲಿಸುವ scst, ಪ್ರವರ್ಗ 1, ಅಂಗವಿಕಲರು, ಮಾಜಿ ಸೈನಿಕರು 500 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕು ಹಾಗೂ ಸಾಮಾನ್ಯ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳು 1,000 ರೂಪಾಯಿ ಶುಲ್ಕವನ್ನು DD ಅಥವಾ ಪೇ ಆರ್ಡರ್ ಮೂಲಕ ಪಾವತಿಸಬೇಕು.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ವಿಳಾಸಕ್ಕೆ ತಮ್ಮ ರೆಸ್ಯೂಮ್ ಅನ್ನು ಕಳುಹಿಸಿ ಕೊಡಬೇಕು. ವಿಳಾಸ:- Member Secretary, Recruitment Committee, The Railway Co-operative Bank Limited, Sheshadri Iyer Road, Mysuru – 570001 ಈ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಕಳುಹಿಸಬೇಕು. ಇದನ್ನೂ ಓದಿ Free Laptop Scheme: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ಕೂಡಲೇ ಅರ್ಜಿಹಾಕಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!