ಕರ್ನಾಟಕದಲ್ಲಿ ದೊಡ್ಮನೆ ಕುಟುಂಬಕ್ಕೆ ಅದರದ್ದೆ ಆದ ಘನತೆ ಗೌರವ ಇದೆ ರಾಜಕುಮಾರ್ ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಅಭಿಮಾನಿಗಳು ಪ್ರೀತಿ ಗೌರವದಿಂದ ನೋಡುತ್ತಾರೆ ಆದರೆ ರಾಜಕುಟುಂಬದ ಕುಡಿಯಾಗಿ ಇದ್ದಂತಹ ಕರುನಾಡ ಮನೆಮಗನಾಗಿದ್ದಂತಹ ಪುನೀತ್ ರಾಜಕಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಮೂರು ತಿಂಗಳುಗಳು ಕಳೆದವು ಆದರೂ ಕೂಡ ಆ ನೋವಿನಿಂದ ಹೊರಬರುವುದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಈ ನಡುವೆ ರಾಘವೇಂದ್ರ ರಾಜಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಸಿನಿಮಾದ ಕುರಿತು ಸಂದರ್ಶನವೊಂದರಲ್ಲಿ ಏನು ಹೇಳಿದ್ದಾರೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಆ ಸಂದರ್ಶನದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರು ತಮ್ಮದು ಯಾಕೆ ಎರಡು ಮನೆ ಆಯಿತು ಎನ್ನುವುದನ್ನು ತಿಳಿಸಿದ್ದಾರೆ ಡಾಕ್ಟರ್ ರಾಜಕುಮಾರ್ ಅವರು ಬದುಕಿದ್ದಾಗ ರಾಜ್ ಕುಟುಂಬ ಒಂದು ದೊಡ್ಡ ಮನೆಯಲ್ಲಿ ವಾಸವಾಗಿದ್ದರು ಆ ಸಮಯದಲ್ಲಿ ಅವರದ್ದು ಒಂದೇ ಮನೆ ಇತ್ತು. ತದ ನಂತರ ಪಾರ್ವತಮ್ಮ ರಾಜಕುಮಾರ್ ಅವರು ಎರಡು ಮನೆಯನ್ನು ಮಾಡಿಕೊಡುತ್ತಾರೆ ನಾನು ನಿಮಗೆ ಈಗಲೇ ಬೇರೆ ಮನೆಯನ್ನು ಮಾಡಿಕೊಡುತ್ತೇನೆ

ನಾನು ಹೋದಮೇಲೆ ಇವರು ಬೇರೆಯಾದರೂ ಎಂದು ಯಾರು ಹೇಳುವುದು ಬೇಡ ಎಂಬ ಕಾರಣಕ್ಕಾಗಿ ಅವರೇ ಬೇರೆಬೇರೆ ಮನೆಗಳನ್ನು ಮಾಡಿಕೊಟ್ಟು ಹೋದರು. ಆ ಸಮಯದಲ್ಲಿ ಅವರು ಒಂದು ದಿನ ರಾಘವೇಂದ್ರ ರಾಜಕುಮಾರ್ ಅವರನ್ನು ಹತ್ತಿರ ಕರೆದು ನಿನ್ನ ಎಡಗಡೆ ಹೆಗಲಿಗೆ ನನ್ನ ಮಗುವನ್ನ ನಿನ್ನ ತಮ್ಮ ನಿನ್ನ ಹೆಗಲಿಗೆ ಹಾಕಿದ್ದೇನೆ ಅವನನ್ನು ಚೆನ್ನಾಗಿ ನೋಡಿಕೋ ಎಂದು ಹೇಳುತ್ತಾರೆ.

ಆದರೆ ನಾನು ನನ್ನ ಕೈಯಲ್ಲಿ ಅವನನ್ನು ಜೋಪಾನ ಮಾಡುವುದಕ್ಕೆ ಆಗದೆ ಅಮ್ಮ ನೀವೇ ನೋಡಿಕೊಳ್ಳಿ ಎಂದು ಅಪ್ಪುವನ್ನು ಅಮ್ಮನ ಪಕ್ಕದಲ್ಲಿ ಮಲಗಿಸಿ ಬಂದೆ ಆ ದುಃಖ ನನ್ನನ್ನು ತುಂಬಾ ಕಾಡುತ್ತಿದೆ. ಆ ದುಃಖವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಗಿಡ-ಮರಗಳನ್ನು ಬೆಳೆಸುವ ಕಾರ್ಯವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಡಾಕ್ಟರ್ ರಾಜಕುಮಾರ್ ಅವರು ಗಂಧದಗುಡಿ ಸಿನಿಮಾ ಮಾಡುವಾಗ ಒಂದು ಮಾತು ಹೇಳಿದ್ದರು ಎಲ್ಲ ಜೀವಿಗಳು ಕ್ರಿಮಿಗಳು ಬಂದು ಮನುಷ್ಯನಿಗೆ ಹೇಳುತ್ತವೆ

ಈ ಭೂಮಿ ನಿಮಗೋಸ್ಕರ ಮಾಡಿದ್ದಲ್ಲ ಈ ಪ್ರಕೃತಿಯನ್ನು ನಾಶ ಮಾಡುವುದಕ್ಕೆ ನಿಮಗೆ ಯಾವ ಹಕ್ಕಿದೆ ಎಂದು ಕೇಳುತ್ತವೆ ಎಂದು ಹೇಳುತ್ತಾರೆ ಅದೇರೀತಿ ಅಪ್ಪು ಕೂಡ ಗಂಧದಗುಡಿ ಸಿನಿಮಾವ ಮಾಡುವುದಕ್ಕೆ ಯಾವುದೇ ಹಣದ ನಿರೀಕ್ಷೆ ಮಾಡದೆ ಕೇವಲ ಪ್ರಾಣಿಗಳಿಗಾಗಿ ಹಾಗೂ ಅರಣ್ಯದ ವಿಚಾರವನ್ನಿಟ್ಟುಕೊಂಡು ಸಿನಿಮಾವನ್ನು ಮಾಡಿದ್ದರು.

ಪುನೀತ್ ಯಾವುದೋ ಒಂದು ಸಂದೇಶವನ್ನು ಹೇಳುವುದಕ್ಕೆ ಭೂಮಿಗೆ ಬಂದಿದ್ದರು ಸಿನಿಮಾದ ಸಂದೇಶವನ್ನು ಜನರಿಗೆ ತಲುಪಿಸಿದರು. ದೇವರು ನೀನು ಆ ಸಂದೇಶವನ್ನು ಜನರಿಗೆ ಹೇಳಿದ್ದಾಗಿದೆ ಹಿಂತಿರುಗಿ ಬಾ ಎಂದು ದೇವರು ಅಪ್ಪುವನ್ನು ಕರೆದುಕೊಂಡಿದ್ದಾನೆ ಎಂದು ರಾಘವೇಂದ್ರ ರಾಜಕುಮಾರ್ ಅವರು ಹೇಳಿದ್ದಾರೆ. ಗಂಧದಗುಡಿ ಸಿನಿಮಾದಿಂದ ಹೆಸರುಗಳಿಸುವ ಉದ್ದೇಶವಾಗಲಿ ಹಣವನ್ನು ಗಳಿಸುವ ಉದ್ದೇಶ ಅವರದಾಗಿರಲಿಲ್ಲ.

ಪುನೀತ್ ರಾಜಕುಮಾರ್ ಅಂತಹ ಒಳ್ಳೆಯ ನಟನನ್ನು ಕಳೆದುಕೊಂಡು ಚಿತ್ರರಂಗ ನಿಜವಾಗಲೂ ನೋವನ್ನು ಅನುಭವಿಸುತ್ತಿದೆ ಅವರ ಕುಟುಂಬದವರು ಅಭಿಮಾನಿಗಳು ಇಂದಿಗೂ ಕೂಡ ಅಪ್ಪು ಅವರ ಅಗಲಿಕೆಯ ನೋವಿನಲ್ಲಿ ಇದ್ದಾರೆ. ಅಪ್ಪು ಅವರು ಬದುಕಿದ್ದಷ್ಟು ಕಾಲ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಸಿನಿಮಾಗಳನ್ನು ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಆ ಕಾರಣದಿಂದ ಅವರ ಹೆಸರು ಕರ್ನಾಟಕದ ಮನೆಮನೆಗಳಲ್ಲಿ ಎಂದಿಗೂ ಚಿರವಾಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!