ಅಪ್ಪನ ಪುಣ್ಯಸ್ಮರಣೆಯ ದಿನವೇ ಪರೀಕ್ಷೆ ಬರೆದಿದ್ದ ಮಗಳು ವಂದಿತಾ ತಗೆದಿರುವ ಅಂಕ ಎಷ್ಟು ನೋಡಿ

0 2

ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಎಂದು ಮರೆಯದ ಹೆಸರು. ಅವರು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ ಆದರೆ ಅವರು ಮಾಡಿರುವ ಸಿನಿಮಾಗಳು ಸಮಾಜಸೇವೆಗಳ ಮೂಲಕ ಅವರು ನಮ್ಮ ನಡುವೆ ಇದ್ದಾರೆ. ಪುನೀತ್ ರಾಜಕುಮಾರ್ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಪ್ರೋತ್ಸಾಹವನ್ನು ನೀಡುತ್ತಿದ್ದರು ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು ಮಕ್ಕಳು ಚೆನ್ನಾಗಿ ಓದಬೇಕು ಎಂಬುದು ಅವರ ಆಸೆ.

ಪುನೀತ್ ರಾಜಕುಮಾರ್ ಅವರ ಎರಡನೆಯ ಮಗಳು ವಂದಿತಾ ಅವರಿಗೆ ಅಪ್ಪನ ಪುಣ್ಯಸ್ಮರಣೆಯ ದಿನವೇ ಒಂದು ಪರೀಕ್ಷೆ ಬಂದಿತ್ತು. ವಂದಿತಾ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಅವರು ಹತ್ತನೇ ತರಗತಿಯ ಪೂರ್ವಭಾವಿ ಪರೀಕ್ಷೆಯನ್ನು ಬರೆಯಬೇಕಾಗಿತ್ತು ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆಯ ದಿನ ಎಲ್ಲರೂ ವಂದಿತಾ ಅವರಿಗೆ ಧೈರ್ಯವನ್ನು ನೀಡಿದ್ದರು ಅಂದು ಕುಟುಂಬದವರು ಅಪ್ಪು ಅವರ ಪುಣ್ಯಸ್ಮರಣೆಯಲ್ಲಿ ಇರುತ್ತಾರೆ.

ಆದರೆ ಪುನೀತ್ ರಾಜಕುಮಾರ್ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವವನ್ನು ನೀಡುತ್ತಿದ್ದರಿಂದ ಅವರು ಯಾವಾಗಲೂ ಹೇಳುತ್ತಿದ್ದರು ನನ್ನ ಮಗಳು ಯಾವಾಗಲೂ ಸಹ ಓದಿನ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಓದಿಗೆ ಅತಿ ಹೆಚ್ಚಿನ ಮಹತ್ವವನ್ನು ಕೊಡಬೇಕು ಅವತ್ತಿನ ದಿನ ಏನೇ ಇರಬಹುದು ಚೆನ್ನಾಗಿ ಓದಬೇಕು ಎಂದು ಪುನೀತ್ ರಾಜಕುಮಾರ್ ಅವರು ಹೇಳುತ್ತಿದ್ದರು.

ಅವರ ಆಸೆಯನ್ನು ನೆರವೇರಿಸಲು ದೊಡ್ಡಮನೆ ಕುಟುಂಬವು ಅವರ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಬೇಗನೆ ಏರ್ಪಾಡುಮಾಡಿ ಬೇಗನೆ ಎಲ್ಲಾ ಮುಗಿಸಿ ವಂದಿತಾ ಅವರನ್ನು ಬೇಗನೆ ಪರೀಕ್ಷೆ ಬರೆಯುವುದಕ್ಕೆ ಕಳಿಸುತ್ತಾರೆ. ತಂದೆಯ ಆಸೆಯಂತೆ ವಂದಿತಾ ನೋವಿನ ನಡುವೆಯೂ ಪರೀಕ್ಷೆಯನ್ನು ಬರೆಯುವುದಕ್ಕೆ ತೆರಳುತ್ತಾರೆ.

ವಂದಿತಾ ಕೂಡ ಓದಿನಲ್ಲಿ ತುಂಬಾ ಬುದ್ಧಿವಂತೆ ಅಕ್ಕ ದೃತಿ ಕೂಡ ಬುದ್ಧಿವಂತೆಯಾಗಿದ್ದು ತನ್ನ ಸ್ಕಾಲರ್ಶಿಪ್ ಹಣದಲ್ಲಿಯೇ ಅಮೆರಿಕಾದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಳೆ. ಅದೇ ರೀತಿ ವಂದಿತಾ ಕೂಡ ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದಾರೆ. ಈಗ ಅವರು ಶೇಕಡಾ ಎಂಬತ್ನಾಲ್ಕರಷ್ಟು ಅಂಕವನ್ನು ತೆಗೆದುಕೊಂಡಿದ್ದಾರೆ

ಇನ್ನು ಹೆಚ್ಚಿನ ಅಂಕವನ್ನು ತೆಗೆದುಕೊಳ್ಳಬಹುದಿತ್ತು ಆದರೆ ಅವರ ತಂದೆ ವಿಧಿವಶರಾಗಿರುವ ಕಾರಣ ಸರಿಯಾಗಿ ಓದುವುದಕ್ಕೆ ಗಮನಕೊಟ್ಟು ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದರೂ ಸಹ ಇಷ್ಟು ಅಂಕವನ್ನು ಗಳಿಸಿರುವುದು ಸುಲಭದ ಕೆಲಸವಲ್ಲ. ಈ ಅಂಕವನ್ನು ನೋಡಿ ದೊಡ್ಮನೆ ಕುಟುಂಬಡವರು ಕೂಡ ಆಶ್ಚರ್ಯಕ್ಕೊಳಗಾಗಿದ್ದಾರೆ ಶಿಕ್ಷಕರು ಕೂಡ ವಂದಿತಾ ಅವರಿಗೆ ಧೈರ್ಯವನ್ನು ತುಂಬಿದ್ದಾರೆ.

Leave A Reply

Your email address will not be published.