ಪುನೀತ್ ರಾಜ್‌ಕುಮಾರ್ ರವರು ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವತ್ತು ೨೯ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜ್‌ಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು.17 ಮಾರ್ಚ್ 1957 ರಂದು ಡಾ ರಾಜ್‌ಕುಮಾರ್ ಮತ್ತು ಪಾರ್ವತಿ ರಾಜ್ ಕುಮಾರ್ ಉದರದಲ್ಲಿ ಜನಿಸಿದರು.
ಇವರು 6 ತಿಂಗಳು ಮಗುವಾಗಿದ್ದಾಗಲೆ “ಪ್ರೇಮದ ಕಾಣಿಕೆ” ಎಂಬ ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್ ಅವರು ಬಾಲ್ಯದಲ್ಲಿ ಹಾಡಿದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಕಾಣದಂತೆ ಮಾಯವಾದನು, ಕಣ್ಣಿಗೆ ಕಾಣುವ ದೇವರು, ಮುಂತಾದ ಗೀತೆಗಳಿಂದ ಕೇಳುಗರ ಮನಗೆದ್ದು ತುಂಬಾ ಪ್ರಶಂಸೆಗೆ ಪಾತ್ರರಾಗಿದ್ದರು.ಪುನೀತ್ ರಾಜಕುಮಾರ್ ರವರು ನಟಿಸಿದ “ಬೆಟ್ಟದ ಹೂವು” ಚಿತ್ರಕ್ಕೆ 1985 ರಲ್ಲಿ “ಬೆಸ್ಟ್ ಚೈಲ್ಡ್ ಆರ್ಟಿಸ್ಟ್ “ಪ್ರಶಸ್ತಿ ಲಭಿಸಿತ್ತು.
ಪುನೀತ್ ರಾಜ್‌ಕುಮಾರ್ ಅವರು ಡಿಸೆಂಬರ್ 1, 1999 ರಂದು ಅಶ್ವಿನಿ ರೇವಂತ್ ಎನ್ನುವವರ ಜೊತೆಗೆ ವಿವಾಹವಾದರು. ಇವರಿಗೆ ದೃತಿ, ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಸುಮಾರು 10 ಚಿತ್ರಗಳಲ್ಲಿ ಬಾಲನಟನಾಗಿ ಮತ್ತು 29 ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. 2002 ರಲ್ಲಿ ನಟಿಸಿದ್ದ ಅಪ್ಪು ಎನ್ನುವ ಚಿತ್ರವು ಇವರ ಸಿನಿ ಪಯಣಕ್ಕೆ ಹೊಸ ತಿರುವನ್ನು ಕೊಟ್ಟಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲಾ. ಪುನೀತ್ ಅವರು “ನಾವಿಬ್ಬರು ನಮಗಿಬ್ಬರು” ಮತ್ತು “ಸೂತ್ರದಾರ” ಚಿತ್ರಗಳನ್ನು ಹಾಗೆ ಕವಲುದಾರಿ
ಮಾಯಾ ಬಜಾರ್, ಎಂಬ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್ ನಲ್ಲಿಯೇ ನಿರ್ಮಿಸಿರುವ ಪುನೀತ್ ತಮ್ಮ ಪ್ರೊಡಕ್ಷನ್ಸ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ, ಹಾಗೆ ತಾಯಿಯ ನೆನಪಿನಲ್ಲಿ ಪಿ,ಆರ್,ಕೆ ಆಡಿಯೋ ಕಂಪೆನಿಯೊಂದರನ್ನು ಸ್ಥಾಪಿಸಿದ್ದಾರೆ. ಇವರು “ಕನ್ನಡದ ಕೋಟ್ಯಾಧಿಪತಿ ಸೀಸನ್ 1,2,ಮತ್ತು ,4” ಹಾಗೂ “ಫ್ಯಾಮಿಲಿ ಪವರ್” ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಹಾಗೆ ಇವರು ಒಂದು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಐ,ಪಿ,ಎಲ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಮೈಸೂರಿನ ಶಕ್ತಿಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ “ಬೆಂಗಳೂರು ಪ್ರೀಮಿಯರ್ ಫುಟ್ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ, ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್‌ಗಳು, ಜೀಯೋಕ್ಸಿ ಮೊಬೈಲ್,ಪೋಥಿ ಸಿಲ್ಕ್, ಮಲಬಾರ್ ಗೋಲ್ಡ್, ಗೋಲ್ಡ್ ವೀನ್ನರ್, ಪ್ಲಿಪ್ ಕಾರ್ಟ್,ಮಣ್ಣಾಪುರಂ, ಗಳ ರಾಯಭಾರಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
ಪವರ್ ಸ್ಟಾರ್ ಕೇವಲ ಸಿನಿಮಾಗಳಲ್ಲಿ ಮಾತ್ರ ಪವರ್ ತೋರಿಸುವುದಿಲ್ಲ, ನಿಜ ಜೀವನದಲ್ಲೂ ಅವರು ಪವರ್ ಸ್ಟಾರ್,ಚಿತ್ರೀಕರಣ ಇರಲಿ ಬಿಡಲಿ ನಿತ್ಯ ಶಿಸ್ತಿನ ಜೀವನ ಮಾಡೋದನ್ನ ರೂಢಿಸಿಕೊಂಡಿದ್ದಾರೆ. ಮನೆಯ ಗಾರ್ಡನ್ ಅಲ್ಲಿ ಬ್ಯಾಕ್ ಫ್ಲಿಪ್ ಸುಲಭವಾಗಿ ಮಾಡುವ ಚಾತುರ್ಯ ಹೊಂದಿದವರು. ವಯಸ್ಸು 45 ಆದರೂ ಪುನೀತ್ ಮಾತ್ರ ಯುವಕರಂತೆ ಕಷ್ಟದ ವರ್ಕೌಟ್ ಗಳನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡುತ್ತಾರೆ, ಅವರಿಗೆ ನಿತ್ಯ ವ್ಯಾಯಾಮ ಮಾಡದೇ ಹೋದರೆ ಇಡೀ ದಿನವೇ ವ್ಯರ್ಥವಾದಂತೆ ಎನ್ನುತ್ತಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಅಪ್ಪು ಆಗಾಗ ನಂದಿ ಬೆಟ್ಟಕ್ಕೆ ಸೈಕಲ್ನ್ ಲ್ಲೆ ಹೋಗುತ್ತಿದ್ದರು, ಇದರ ಜೊತೆಗೆ ಟೆನ್ನಿಸ್ ಆಡುವ ಅಭ್ಯಾಸವನ್ನು ಬಳಸಿಕೊಂಡಿದ್ದರು.
ಪವರ್ ಸ್ಟಾರ್ ಪುನೀತ್ ಅವರು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಸ್ವೀಕರಿಸಿದ್ದರು. ಸದಾ ಎಲ್ಲರಿಗಿಂತಲೂ ವಿಭಿನ್ನ ಎನ್ನಿಸುವ ಅಪ್ಪು I ಇದರಲ್ಲಿಯೂ ತಮ್ಮದೇ ಸ್ಟೈಲ್ ನಲ್ಲಿ ವರ್ಕೌಟ್ ಮಾಡಿದ್ದರು. ಅಪ್ಪು ವರ್ಕೌಟ್ ಗೆ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದರು. ಪುನೀತ್ ಅವರು ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಗಾಗಿ ಬ್ಯಾಕ್ ಫ್ಲಿಪ್ ಮಾಡಿ ಜೊತೆಯಲ್ಲಿ ಪುಷ್ ಅಪ್ಸ್ ಮಾಡಿ ಚಾಲೆಂಜ್ ಅನ್ನು ಸಂಪೂರ್ಣ ಮಾಡಿದರು.