ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ತಿಂಗಳುಗಳೆ ಕಳೆದಿದೆ. ಇಂದಿಗೂ ಅವರ ಅಭಿಮಾನಿಗಳು ಅವರನ್ನು ಮರೆತಿಲ್ಲ, ಈಗಲೂ ಅಪ್ಪು ಅವರ ಫೋಟೊ ಮೆರವಣಿಗೆ ಮಾಡುವುದನ್ನು ನೋಡುತ್ತೇವೆ. ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರವನ್ನು ಅಶ್ವಿನಿ ಅವರು ನೋಡಲಿಲ್ಲ ಎಂಬುದು ಸುದ್ದಿಯಾಗಿದೆ. ಇದಕ್ಕೆ ಅವರು ಕೊಟ್ಟ ಉತ್ತರ ಹೇಗಿತ್ತು ಎಂದು ಈ ಲೇಖನದಲ್ಲಿ ನೋಡೋಣ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರಿದ್ದಾಗ ಎಷ್ಟು ಸಂತೋಷ ಮತ್ತು ಲವಲವಿಕೆಯಿಂದ ಇರುತ್ತಿದ್ದರು ಅದನ್ನು ನಾವು ನೋಡಿದ್ದೇವೆ. ಅಶ್ವಿನಿ ಮತ್ತು ಅಪ್ಪು ಇಬ್ಬರು ಸಹ ಯಾವಾಗಲೂ ಜೊತೆಯಾಗಿಯೆ ಎಲ್ಲಾ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಈ ದಂಪತಿ ಜೊತೆಯಾಗಿ ಬರುವುದನ್ನು ನೋಡುವುದೆ ಒಂದು ರೀತಿಯಲ್ಲಿ ಸಂತೋಷ ತರುತ್ತಿತ್ತು.
ಪ್ರತಿಯೊಂದು ಕಾರ್ಯಕ್ರಮಕ್ಕೂ ಪತ್ನಿ ಅಶ್ವಿನಿ ಅವರ ಜೊತೆಯಲ್ಲೆ ಹೋಗುತ್ತಿದ್ದರು ಅಪ್ಪು ಅವರು ಆದರೆ ಇಂದು ಈ ಜೋಡಿಯನ್ನು ಮತ್ತೆ ಜೊತೆಯಾಗಿ ನೋಡಲು ಸಾಧ್ಯವಿಲ್ಲ. ಇಂದು ಅಪ್ಪು ಅವರಿಲ್ಲ ಅಪ್ಪು ಇಲ್ಲದೆ ಅಶ್ವಿನಿ ಅವರು ಒಂಟಿಯಾಗಿದ್ದಾರೆ. ಅಪ್ಪು ಅವರು ಹೋದ ನಂತರ ಅಶ್ವಿನಿ ಅವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಅಪ್ಪು ಅವರ ಸ್ಮಾರಕ, ಅಪ್ಪು ಕುರಿತಾದ ಒಂದೆರಡು ಕಾರ್ಯಕ್ರಮಗಳನ್ನು ಹೊರತುಪಡಿಸಿ ಇನ್ಯಾವುದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಶ್ವಿನಿ ಅವರು ಪಾಲ್ಗೊಂಡಿರಲಿಲ್ಲ.
ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾದ ಪ್ರೀ ರಿಲೀಸ್ ನಲ್ಲಿ ಪಾಲ್ಗೊಂಡಿದ್ದ ಅಶ್ವಿನಿ ಅವರು ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದರು. ಅಶ್ವಿನಿ ಅವರು ಅಳುವುದನ್ನು ಯಾರಿಂದಲೂ ನೋಡಲಾಗುತ್ತಿರಲಿಲ್ಲ. ಅಶ್ವಿನಿ ಮತ್ತು ಅಪ್ಪು ಆದರ್ಶ ದಂಪತಿಗಳ ಹಾಗೆ ಬದುಕಿದ ಜೋಡಿ ಎಂದು ಹೇಳಲು ಸಂತೋಷ ಎನಿಸುತ್ತದೆ. ಅಶ್ವಿನಿ ಅವರು ಜೇಮ್ಸ್ ಸಿನಿಮಾವನ್ನು ಮೊದಲ ದಿನವೆ ಥಿಯೇಟರ್ ನಲ್ಲಿ ವೀಕ್ಷಣೆ ಮಾಡುತ್ತಾರೆ ಎನ್ನಲಾಗಿತ್ತು.
ಇಡಿ ದೊಡ್ಮನೆ, ಪುನೀತ್ ಅವರ ಮಕ್ಕಳು ಜೇಮ್ಸ್ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿದರು ಆದರೆ ಅಶ್ವಿನಿ ಅವರು ಸಿನಿಮಾವನ್ನು ನೋಡಲಿಲ್ಲ. ಇದಕ್ಕೆ ಕಾರಣ ಏನು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮತ್ತು ಮಾಧ್ಯಮದವರನ್ನು ಕಾಡಿತ್ತು. ಹೀಗಾಗಿ ಅಶ್ವಿನಿ ಅವರು ಸಂದರ್ಶನವೊಂದಕ್ಕೆ ಬಂದಾಗ ಸಿನಿಮಾ ಯಾಕೆ ನೋಡಲಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಿಯೆ ಬಿಟ್ಟರು. ಇದಕ್ಕೆ ಅಶ್ವಿನಿ ಅವರು ಸಹ ಸರಿಯಾದ ಉತ್ತರವನ್ನೆ ನೀಡಿದ್ದಾರೆ.
ಸರ್ ಪದೆ ಪದೆ ಅದೆ ಪ್ರಶ್ನೆ ಕೇಳಬೇಡಿ. ಜೇಮ್ಸ್ ಸಿನಿಮಾ ನೋಡುವ ಶಕ್ತಿ ನನ್ನಲ್ಲಿ ಇಲ್ಲ. ಒಬ್ಬ ಅಭಿಮಾನಿಯಾಗಿ ನೀವು ಈ ಪ್ರಶ್ನೆ ಕೇಳಬಹುದು. ನಾನು ಅವರ ಧರ್ಮಪತ್ನಿ, ಪತ್ನಿಯಾಗಿ ಅವರ ಕೊನೆಯ ಸಿನಿಮಾವನ್ನು ನೋಡುವ ಶಕ್ತಿ ನನ್ನಲ್ಲಿ ಇಲ್ಲ. ದಯವಿಟ್ಟು ಪದೆ ಪದೆ ಈ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಇನ್ನು ಮಾಧ್ಯಮದವರು ಸಹ ಪುನೀತ್ ಅವರ ಕುಟುಂಬದ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ, ಸದಾ ಇದೆ ರೀತಿ ಪ್ರಶ್ನೆಗಳನ್ನು ಕೇಳುವುದು ಸಹ ಬಹಳ ಬೇಸರ ತರಿಸುವಂಥಹ ವಿಚಾರವೆ ಆಗಿದೆ. ಮಾಧ್ಯಮದವರಿಗೆ ವಿಷಯ ಬೇಕಾಗಿರುತ್ತದೆ ಅಂದ ಮಾತ್ರಕ್ಕೆ ಕೆಲವು ವಿಷಯದ ಬಗ್ಗೆ ಪ್ರಶ್ನೆ ಮಾಡದಿರುವುದೆ ಒಳ್ಳೆಯದು.