ಅಪ್ಪು ಎಂದರೆ ಅಜರಾಮರವಾಗಿ ಬೆಳೆದು ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಕುಳಿತಿರುವ ಮುದ್ದು ಮನದ ನಗುವಿನ ಒಡೆಯ.ಆದ್ರೆ ಇದೀಗ ಅಪ್ಪು ಎಂದರೆ ಕನ್ನಡಿಗರ ಮನದಲ್ಲಿ ಮೂಡುವುದು ಬರೀ ಮೌನ. ಸದಾ ನಗು ಮೊಗದ ಸರದಾರ ಪೃಥ್ವಿಯಿಂದ ಆಕಾಶದ ಕಡೆಗೆ ಸಾಗಿ ಬಹು ದಿನಗಳೇ ಕಳೆದಿವೆ. ಆದರೆ ಅಪ್ಪು ನೆನಪುಗಳು ಮಾತ್ರ ಎಂದೆಂದಿಗೂ ಶಾಶ್ವತ. ತಾನೇ ಉರಿದು ಜಗಕೆ ಬೆಳಕು ಕೊಡುವ ದೀಪವಿದು ನಂದಾ ದೀಪವೆ ಇದೂ
ಈ ಸಾಲುಗಳು ಪುನೀತ್ ರಾಜ್ ಕುಮಾರ್ ಅವರು ನಟಿಸಿದ ರಾಜಕುಮಾರ ಚಿತ್ರದ ಅರ್ಥಪೂರ್ಣ ಸಾಲುಗಳು. ಈ ಹಾಡಿನ ಸಾಲಿಗೆ ಹೊಂದುವಂತೆ ಪುನೀತ್ ಅವರು ಸಾವನಪ್ಪಿದ ನಂತರ ಅವರ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ನಾಲ್ಕು ಜನ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಹೃದಯ ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಪುನೀತ್ ರಾಜ್ ಕುಮಾರ್ ಅವರು ಸಾವನಪ್ಪಿದ ನಂತರ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಗೊತ್ತಿಲ್ಲದ . ಆ ವಿಡಿಯೋ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ.
ದಿನಗಳು ಕಳೆದಂತೆ ಪುನೀತ್ ರಾಜ್ ಕುಮಾರ್ ಅವರ ಬದುಕಿನ ವಿಡಿಯೋಗಳು ಎಳೆ ಎಳೆಯಾಗಿ ತೆರೆದುಕೊಳ್ಳುತ್ತಿವೆ.ಅದರಲ್ಲಿ ಒಂದನ್ನು ನಮ್ಮ ಈ ಲೇಖನದಲ್ಲಿ ನೋಡಬಹುದು. ಅಪ್ಪು ಸಿನಿಮಾಗೆ ಬಂದಿದ್ದು ಅವರ ತಂದೆ ಡಾ||ರಾಜ್ ಕುಮಾರ್ ಅವರು ಶಿಳೆ ,ಚಪಾಳೆ ಹೊಡಿಲಿ ಅಂತೆ. ಏನಿದರ ಅಸಲೀಯತ್ತು ಅನ್ನೋದನ್ನ ಪುನೀತ್ ರಾಜಕುಮಾರ್ ಅವರೇ ಹೇಳಿದ್ದಾರೆ ನೋಡೋಣ ಬನ್ನಿ.
ಮೊದಲ ಸಿನಿಮಾದಲ್ಲೇ ಒಂದು ಚಾಲೆಂಜ್ ಇತ್ತು.ಚಾಲೆಂಜ್ ಅಂದ್ರೆ ರೆಸ್ಪಾನ್ಸಿಬಿಲಿಟಿ.ಒಳ್ಳೆ ರೀತಿಯಲ್ಲಿ ಜನ ಅದನ್ನು ಗುರುತಿಸಬೇಕು.ರಾಜ್ ಕುಮಾರ್ ಮಗ ಆಗಿ ಕ್ಲಿಕ್ ಆಗೋದಕ್ಕಿಂತ ಪುನೀತ್ ಆಗಿ ಜನ ಗುರುತಿಸಬೇಕು ಎಂಬುದು ಅಷ್ಟೇ ಗುರಿಯಾಗಿತ್ತು.ಪಾರ್ವತಮ್ಮ ರಾಜಕುಮಾರ್ ಅವರ ಪ್ರೊಡಕ್ಷನ್ ನಲ್ಲೇ ಸೆಟ್ ಏರಿದ ಪುನೀತ್ ಅವರ ಮೊದಲ ಸಿನಿಮಾ ಅಪ್ಪು ಸಿನಿಮಾದ ಕಥೆ ಎಲ್ಲರಿಗೂ ಇಷ್ಟ ಆಗಿತ್ತು. ತಾನು ನಂಬರ್ ಒನ್ ಆಗಿ ಇರಬೇಕು ಎನ್ನುವ ಆಸೆಯಿರಲಿಲ್ಲ ಬದಲಿಗೆ ಮಾಡೋ ಸಿನಿಮಾಗಳು ಚೆನ್ನಾಗಿ ಆಗ್ಬೇಕು ಸಕ್ಸಸ್ ಆಗ್ಬೇಕು ಅಷ್ಟೇ.ಯಾವಾಗ್ಲೂ ತನ್ನಮ್ಮ ಹೇಳುತ್ತಾ ಇರೋರು ನನ್ ಮಗ ಸೂಪರ್ ಸ್ಟಾರ್.ಎಲ್ಲಾ ತಾಯಂದಿರಿಗೂ ಮಕ್ಕಳೇ ಸರ್ವಸ್ವ ಹಾಗೆ ನಮ್ ತಾಯಿಗೂ ನಾನು ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ ಇತ್ತು.
ಆದ್ರೆ ತಂದೆ ಯಾವತ್ತೂ ತನ್ನ ಗತ್ತು ಬಿಟ್ಟುಕೊಡುತ್ತಿರಲಿಲ್ಲ.ನನ್ಗೆ ಗೊತ್ತಿತ್ತು ನನ್ ತಂದೆಯವರಿಗೆ ಖುಷಿ ಇದೆ ಅಂತ. ನಾನು ಸ್ಟಂಟ್ ಮಾಡ್ಬೇಕು ಅಂತ ಇಷ್ಟ ಪಟ್ಟಿದ್ದು ಸಿನಿಮಾಗೆ ಬರ್ಬೇಕು ಅಂತಲ್ಲ .ನಮ್ ತಂದೆಯವರ ಕೈಯಲ್ಲಿ ಚಪ್ಪಾಳೆ ಹೊಡಿಸಬೇಕು ಅಂತ.ಮೊದಲ ಸಿನಿಮಾ ಎಲ್ಲೆಲ್ಲಿ ಶತಕದ ಸಂಭ್ರಮ ಭಾರಿಸಿತ್ತೋ ಅಲ್ಲೆಲ್ಲ ಹೋಗಿ ತಮ್ಮ ತಂದೆಯವರು ತನ್ನ ಸಿನಿಮಾ ನೋಡಿ ಬಂದಿದ್ದರು ಆಗ ಅನಿಸಿತ್ತು ಅವರಿಗೆ ಸಿನಿಮಾ ಇಷ್ಟ ಆಗಿದೆ ಅಂತ.ಇದು ಪುನೀತ್ ರಾಜಕುಮಾರ್ ಅವರು ಹೇಳಿಕೊಂಡ ಮಾತುಗಳು. Video Credit For Dhavani Plus