ನಗುಮೊಗದಿಂದಲೆ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಕನ್ನಡ ಚಿತ್ರರಂಗದ ಅದ್ಭುತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯಾರೂ ಕಲ್ಪನೆ ಮಾಡಲು ಸಾಧ್ಯವಾಗದಂತೆ ಅಕ್ಟೋಬರ್ 29 ನೇ ತಾರೀಖಿನಂದು ಹೃದಯಾಘಾತದಿಂದ ನಿಧನರಾದರು. ಪುನೀತ್ ಅವರ ಮಕ್ಕಳು ಅವರ ದಾರಿಯಲ್ಲಿಯೆ ಸಾಗುವ ನಿರ್ಧಾರವನ್ನು ಮಾಡಿದ್ದಾರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕಳೆದ ಕೆಲವು ದಿನಗಳಿಂದ ಕನ್ನಡಿಗರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆ ಮಾಡುತ್ತಾ ನಗುಮುಖದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗ ನಮ್ಮೊಂದಿಗೆ ಇಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಿನ್ನೆಯಿಂದ ಕನ್ನಡಿಗರಿಗೆ ಪರಿಚಿತರಲ್ಲ. ಅವರು ಮೊದಲಿನಿಂದಲೂ ಅಂದರೆ ಅವರು ಆರು ತಿಂಗಳಿನಲ್ಲಿ ಇರುವಾಗಲೆ ಸಿನಿಮಾದಲ್ಲಿ ಕಾಣಿಸಿಕೊಂಡವರು ಅಲ್ಲದೆ ಬಾಲ್ಯದಲ್ಲಿಯೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ನಂತರ ಅವರು ಬೆಳೆದು ಬಂದ ರೀತಿಯೆ ಗಮನಾರ್ಹವಾದದ್ದು. ಅವರ ತಂದೆ ತಾಯಿಯವರಾದ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರು ಮಕ್ಕಳನ್ನು ಬಹಳ ಶಿಸ್ತಿನಿಂದ ಬೆಳೆಸಿದ್ದರು. ಇದರಿಂದ ರಾಜಕುಮಾರ್ ಅವರ ಮೂವರು ಮಕ್ಕಳು ಕೂಡ ರಾಜಮನೆತನವನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡಮನೆ ಮಾಡುವಲ್ಲಿ ಶ್ರಮಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲ ಚಿತ್ರದಿಂದಲೆ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಯೊಂದು ಚಿತ್ರದಲ್ಲೂ ಮಾನವೀಯ ಗುಣಗಳನ್ನು ಸಮಾಜಕ್ಕೆ ಸಾರುವ ಮೂಲಕ ದೊಡ್ಡಮನೆಯ ಹುಡುಗರು ಸಿನಿಮಾದಲ್ಲೂ ಕೂಡ ಒಳ್ಳೆಯದನ್ನು ಹೇಳುತ್ತಾರೆ ಎಂಬುದನ್ನು ಸಾಬೀತುಪಡಿಸಿದರು. ಮೂವರಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಅಪ್ಪು ಅವರು ತಮ್ಮ ತಂದೆಯ ಗುಣಗಳನ್ನು ಹೊಂದಿದ್ದಾರೆ ಎಂಬುದು ಇಡಿ ಕನ್ನಡ ಚಿತ್ರರಂಗದ ಮಾತಾಗಿತ್ತು. ತಂದೆಯವರ ದಾನ ಧರ್ಮ ಮಾಡುವ ಗುಣವು ಅಪ್ಪುವಿನಲ್ಲಿ ನೋಡಬಹುದು
ಅವರು ಅನೇಕ ಅನಾಥಾಶ್ರಮ, ಗೋಶಾಲೆ ಅಲ್ಲದೆ 1800 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಣ್ಣಾವ್ರು ತಮ್ಮ ಮಕ್ಕಳಿಗೆ ಎಡಗೈಯಲ್ಲಿ ಕೊಟ್ಟ ದಾನ ಬಲಗೈಗೆ ಗೊತ್ತಾಗಬಾರದು ಎಂಬ ಪಾಠವನ್ನು ಕಲಿಸಿದ್ದಾರೆ. ಅದೆ ಮಾದರಿಯಲ್ಲಿ ಪುನೀತ್ ರಾಜಕುಮಾರ್ ಅವರು ಮಾಡಿದ ಜನಸೇವೆಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಅವರಿಗೆ ಪ್ರಚಾರದ ಅವಶ್ಯಕತೆ ಇಲ್ಲ, ಅವರು ತಮ್ಮ ಆತ್ಮತೃಪ್ತಿಗಾಗಿ ಜನರಿಗೆ ಸಹಾಯ ಮಾಡುತ್ತಿದ್ದರು. ಅವರನ್ನು ರಾಜರತ್ನ ಎಂದು ಕರೆಯುತ್ತಿದ್ದರು.
ತಂದೆಯಂತೆಯೆ ಅಪ್ಪು ಕೂಡ ಬಂಗಾರದ ಮನುಷ್ಯರು. ಅಪ್ಪು ಅವರಂತೆ ಅವರ ದೊಡ್ಡ ಮಗಳು ಧೃತಿ ಕೂಡ ಬಂಗಾರದ ಮನುಷ್ಯಳು ಎಂದರೆ ತಪ್ಪಾಗಲಾರದು. ಪುನೀತ್ ರಾಜಕುಮಾರ್ ಅವರ ದೊಡ್ಡ ಮಗಳಾಗಿರುವ ಧೃತಿ ಕೂಡ ಹಿಂದೊಮ್ಮೆ ಅಂಧ ಮಕ್ಕಳ ಪಾಲಿಗೆ ಬೆಳಕಾಗಿ ಸುದ್ದಿಯಾಗಿದ್ದರು. ಅದೆಷ್ಟೊ ಅಂಧ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುತ್ರಿ ಧೃತಿ ಅವರು ವಹಿಸಿಕೊಂಡಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೆ ಜವಾಬ್ದಾರಿ ಹೊಂದಿರುವುದು ಶ್ಲಾಘನೀಯವಾಗಿದೆ. ಮಕ್ಕಳು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವುದಕ್ಕೆ ಅವರ ತಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರಭಾವವೆ ಕಾರಣ ಎಂದು ಈ ಸಂದರ್ಭದಲ್ಲಿ ಹೇಳಲೇಬೇಕು.
ಪುನೀತ್ ರಾಜಕುಮಾರ್ ಅವರು ಮೊನ್ನೆಯಷ್ಟೆ ನಿಧನರಾದ ದುಃಖದ ಸಂದರ್ಭದಲ್ಲಿ ಅವರ ಪತ್ನಿ ಹಾಗೂ ಪುತ್ರಿಯರು ಪುನೀತ್ ರಾಜಕುಮಾರ್ ಅವರು ಪ್ರಾರಂಭಿಸಿದ ಉದ್ಯಮಗಳನ್ನು ಮುಂದುವರಿಸುವುದಾಗಿ ನಿರ್ಧಾರ ಮಾಡಿದ್ದಾರೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಇಷ್ಟು ವರ್ಷ ಪುನೀತ್ ರಾಜಕುಮಾರ್ ಅವರು ಮಾಡಿಕೊಂಡು ಬಂದಂತಹ ಸಮಾಜ ಕಾರ್ಯಗಳನ್ನು ಧೃತಿ ಅವರು ಕೂಡ ಮುಂದುವರೆಸಿಕೊಂಡು ಹೋಗುತ್ತಾರೆ ಎಂಬ ನಂಬಿಕೆಯಿದೆ. ಪುನೀತ್ ರಾಜಕುಮಾರ್ ಅವರ ಸಾವಿನ ದುಃಖವನ್ನು ತಡೆಯಲು ಅವರ ಕುಟುಂಬದವರಿಗೆ ಶಕ್ತಿ ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳೋಣ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430